ಕೆಲ ವರ್ಷಗಳ ಹಿಂದೆ ಭಾರತದ ಚಿತ್ರರಂಗದಲ್ಲಿ ಮೀಟೂ ಸದ್ದು ಜೋರಾಗಿತ್ತು. ಈ ವೇಳೆ ಹಲವಾರು ನಟಿಯರು ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದರು. ಕೆಲ ನಟಿಯರು ಬಿಟ್ಟಿ ಪ್ರಚಾರವನ್ನೂ ಗಿಟ್ಟಿಸಿಕೊಂಡಿದ್ದರು
ಈ ನಡುವೆ ಇದೀಗ ತಮಿಳು ನಟಿ ನಿರೂಪಕಿ, ಗಾಯಕಿ ಸೌಂದರ್ಯ ಬಾಲನಂದಕುಮಾರ್ ತಮ್ಮ ಜೀವನದಲ್ಲಿ ಎದುರಾದ ಕಹಿ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಾಲೇಜು ಪ್ರಾಧ್ಯಾಪಕರೊಬ್ಬರು ತನಗೆ ಮಾಡಿರುವ ಸಂದೇಶವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ಅವರು ತನ್ನೊಂದಿಗೆ ಮಲಗುತ್ತೀಯಾ, ಏನು ಬೇಕಾದರೂ ಕೊಡುತ್ತೇನೆ ಅನ್ನುವ ಸಂದೇಶಕ್ಕೆ ಸಾಕ್ಷಿ ಕೊಟ್ಟಿದ್ದಾರೆ.
ಸಂದೇಶ ಕಳುಹಿಸಿದವನು ಮಧುರೈನಲ್ಲಿ ಪ್ರಾಧ್ಯಾಪಕ ಎಂದು ಹೇಳಲಾಗುತ್ತಿದೆ. ಆತ ಕೆಲಸ ಮಾಡುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯರು ಸೇಫ್ ಆಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಹೇಳಿರುವ ನಂದಕುಮಾರ್, ನಿಜಕ್ಕೂ ಅವನೊಬ್ಬ ಪ್ರಾಧ್ಯಾಪಕನೇ ಎಂದು ಪ್ರಶ್ನಿಸಿದ್ದಾರೆ.
Discussion about this post