ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್ಚರಿಕೆ ವಹಿಸಿ. ಸಣ್ಣದೊಂದು (Tattoo HIV) ನಿರ್ಲಕ್ಷ್ಯ ದೊಡ್ಡದೊಂದು ಅಪಾಯ ತರಬಲ್ಲುದು ಎಂದು ಅನೇಕ ಬಾರಿ ಎಚ್ಚರಿಕೆ ನೀಡಲಾಗಿದೆ
ಉತ್ತರ ಪ್ರದೇಶ : ಟ್ಯಾಟೂ ಹಾಕಿಸಿಕೊಂಡ 12 ಜನರಿಗೆ HIV ಪಾಸಿಟಿವ್ ಬಂದಿರುವ ಅಘಾತಕಾರಿ ಘಟನೆ ಉತ್ತರ ಪ್ರದೇಶದ (Tattoo HIV) ವಾರಣಾಸಿಯಿಂದ ವರದಿಯಾಗಿದೆ.
ಇತ್ತೀಚೆಗೆ ವಾರಣಾಸಿಯ ಯುವಕನೊಬ್ಬನಿಗೆ ಅನಾರೋಗ್ಯ ಕಾಡಿತ್ತು. ಯಾವುದೇ ತೊಂದರೆ ಇಲ್ಲದೆ ಜೀವಿಸಿದವ ಅನಾರೋಗ್ಯ ತುತ್ತಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಹೀಗಾಗಿ ವಾರಣಾಸಿಯ ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ (Tattoo HIV) ದಾಖಲಿಸಲಾಯ್ತು.
ಇದನ್ನು ಓದಿ : Karnataka BJP : ನಳಿನ್ ಕುಮಾರ್ ಕಟೀಲ್ ಗೆ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ
ಅಲ್ಲಿ ಅನುಮಾನಗೊಂಡ ವೈದ್ಯರು ರಕ್ತ ಪರೀಕ್ಷೆ ನಡೆಸಿದಾಗ ಯುವಕನಿಗೆ HIV ಸೋಂಕು ತಗುಲಿರುವುದು ಗೊತ್ತಾಗಿದೆ. ಯುವಕನಿಗೆ ಹೇಗೆ ಸೋಂಕು ತಗುಲಿತು ಎಂದು ವೈದ್ಯರು ಹಿಸ್ಟರಿ ಪರಿಶೀಲನೆ ಮಾಡಿದ್ದಾರೆ. ಸೋಂಕು ತಗುಲಬಹುದಾದ ಮಾರ್ಗಗಳ ಬಗ್ಗೆ ಪ್ರಶ್ನಿಸಿದ್ರೆ ಯುವಕನಿಗೆ ಅಂತಹ ಯಾವುದೇ ಚಟಗಳಿರಲಿಲ್ಲ. ಹೀಗಾಗಿ ತಲೆ ಕೆಡಿಸಿಕೊಂಡ ವೈದ್ಯರು ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲನೆ ಮಾಡಿದ್ದಾರೆ.
ಕೊನೆಗೆ ಟ್ಯಾಟೂ ಹಾಕಿಸಿದ ಸೂಜಿಯಿಂದ ಯುವಕನಿಗೆ HIV ಸೋಂಕು ತಗುಲಿರುವುದು ಗೊತ್ತಾಗಿದೆ. ಇದೇ ಕಾರಣದಿಂದ ಟ್ಯಾಟೂ ಕಲಾವಿದನ ಬಗ್ಗೆ ತನಿಖೆ ನಡೆಸಿದ್ರೆ ಆತ ಮತ್ತಷ್ಟು ಮಂದಿಗೆ ಟ್ಯಾಟೂ ಹಾಕಿರುವುದು ಗೊತ್ತಾಗಿದೆ. ಈತನ ಬಳಿ ಟ್ಯಾಟೂ ಹಾಕಿಸಿಕೊಂಡವರನ್ನು ಪತ್ತೆ ಹಚ್ಚಿ ಪರೀಕ್ಷೆ ನಡೆಸಿದ್ರೆ ಒಟ್ಟು 12 ಮಂದಿಗೆ HIV ಪಾಸಿಟಿವ್ ಬಂದಿದೆ. ಇದೀಗ ಟ್ಯಾಟೂ ಕಾರಣದಿಂದ ಈ ಎಲ್ಲಾ ಯುವಕರ ಭವಿಷ್ಯವನ್ನೇ ಕತ್ತಲಿಗೆ ದೂಡಿದೆ.
Discussion about this post