ಇತ್ತೀಚಿನ ದಿನಗಳಲ್ಲಿ ಕಾರು ಖರೀದಿ ಮಾಡಲು ಬಯಸುವವರು ಒಂದು ಲಕ್ಷ ಹೆಚ್ಚು ಕೊಟ್ಟರೂ ಪರವಾಗಿಲ್ಲ ಸೇಫ್ ಮುಖ್ಯ ಅನ್ನುತ್ತಿದ್ದಾರೆ.ಆದರೆ ಮಧ್ಯಮ ವರ್ಗದ ಮಂದಿ ತಮ್ಮ ಖರೀದಿ ಸಾಮರ್ಥ್ಯದ ಮೇಲೆ ಸೇಫ್ಟಿಯನ್ನು ಸೈಡಿಗಿಡುತ್ತಿದ್ದಾರೆ.
ಹಿಂದೆಲ್ಲಾ ಮನೆ ಮುಂದೆ ಕಾರು ನಿಂತಿರಬೇಕು ಅನ್ನುವ ಕಾರಣಕ್ಕೆ ಕಡಿಮೆ ದರಕ್ಕೆ ಸಿಗುವ ಕಾರುಗಳನ್ನು ಖರೀದಿಸಲಾಗುತ್ತಿತ್ತು. ಆದರೆ ಸುರಕ್ಷತೆಯ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ನಾನು ಸೇಫ್ ಡ್ರೈವ್ ಮಾಡಬಹುದು, ಪಕ್ಕದಲ್ಲಿ ಗಾಡಿ ಓಡಿಸುವವನ ಬಗ್ಗೆ ಗ್ಯಾರಂಟಿ ಏನು ಅನ್ನುವ ಪ್ರಶ್ನೆ ಬಂದಿದೆ.
ಹೀಗಾಗಿ ಜನರ ಅಭಿರುಚಿ ಬದಲಾಗುತ್ತಿದ್ದಂತೆ. ಕಾರು ಉತ್ಪಾದಕ ಕಂಪನಿಗಳು ಕೂಡಾ ಸೇಫ್ಟಿಯ ಬಗ್ಗೆ ಒತ್ತುಕೊಡುತ್ತಿದೆ. ಸೇಫ್ಟಿ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಟಾಟಾ ಮೋಟಾರ್ಸ್ನ ಕಾರುಗಳು ಪ್ರಯಾಣಿಕರ ಸುರಕ್ಷತೆಯ ವಿಚಾರದಲ್ಲಿ ದೇಶದೆಲ್ಲೆಡೆ ಸುದ್ದಿಯಾಗಿವೆ. ಟಾಟಾ ಹ್ಯಾರಿಯರ್, ಟಾಟಾ ಹೆಕ್ಸಾ, ಟಾಟಾ ಟಿಯಾಗೊ ಸುರಕ್ಷತೆಯ ನಿಟ್ಟಿನಲ್ಲಿ ಬೆಸ್ಟ್ ಕಾರು ಅನ್ನಿಸಿಕೊಂಡಿದೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲೂ ಟಾಟಾ ಟಿಯಾಗೊ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನ ಪರಿಸ್ಥಿತಿ ನೋಡಿದ್ರೆ ಒಳಗಿರುವವರು ಬದುಕಿರುವ ಸಾಧ್ಯತೆಗಳು ತೀರಾ ಕಡಿಮೆ. ಆದರೆ ಕಾರಿನ ಮಾಲೀಕ ಟಾಟಾ ಟಿಯಗೋ ಕಾರು ಮತ್ತು ಅದರ ಸೇಫ್ಟಿಯನ್ನು ಹಾಡಿ ಹೊಗಳಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಬಳಿ ಟಾಟಾ ಟಿಯಾಗೊ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಬರೋಬ್ಬರಿ ಮೂರು ಬಾರಿ ಪಲ್ಟಿ ಹೊಡೆದ ನಂತರವೂ ಕೂಡಾ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೇ ಸಣ್ಣ ಗಾಯಗಳೊಂದಿಗೆ ಬಚಾವ್ ಆಗಿದ್ದರು.
ಇದರ ಬಗ್ಗೆ ಸ್ವತಃ ಕಾರಿನ ಮಾಲೀಕ ಪ್ರಶಾಂತ್ ನಿಖಂ ಮತ್ತು ರಾಹುಲ್ ಪಾಟೀಲ್ ಟಾಟಾ ಮೋಟಾರ್ಸ್ಗೆ ಮೇಲ್ ಮಾಡಿ ಘಟನೆಯ ಬಗೆಗೆ ಮಾಹಿತಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗಾದರೆ ಟಾಟಾ ಟಿಯಾಗೊ ಕಾರಿನಲ್ಲಿ ಏನಿದೆ ಅನ್ನುವುದನ್ನು ನೋಡಿದರೆ, 2016ರಲ್ಲಿ ಬಿಡುಗಡೆಯಾದ ಕಾರು ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, ಟಿಯಾಗೊ ಎಎಂಟಿ, ಸಿಎನ್ಜಿ ಆವೃತಿಯ ಕಾರುಗಳು ಮಾರುಕಟ್ಟೆಯಲ್ಲಿದೆ.
3 ವರ್ಷದ ಅವಧಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟಗೊಂಡಿದ್ದು, ಕಾರಿನಲ್ಲಿ ಎಬಿಎಸ್ಮ್ ಇಬಿಡಿ ಕಾರ್ನೆರಿಂಗ್ ಸ್ಟೆಬಿಲಿಟಿ ಕಂಟಟ್ರೋಲ್, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ, ಡ್ಯುಯಲ್ ಏರ್ಬ್ಯಾಗ್ಸ್, ಪಾರ್ಕಿಂಗ್ ಅಸಿಸ್ಟ್, ಅಲ್ಟ್ರಾಸೋನಿಕ್ ಸೆನ್ಸಾರ್ಸ್ ಒಳಗೊಂಡಿದೆ.
ಟಿಯಾಗೊ ಕಾರು ಇತ್ತೀಚೆಗೆ ಹೊಸ XZ+ ವೇರಿಯಂಟ್ನಲ್ಲಿ ಬಿಡುಗಡೆಗೊಳಿಸಿದ್ದು,5.57 ಲಕ್ಷ ರೂಪಾಯಿ ದರ ನಿಗದಿಯಾಗಿದೆ.
ರೆಗ್ಯುಲರ್ ಟಿಯಾಗೊ ಗಿಂತ ಹೊಸದಾಗಿ 7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು 15 ಇಂಚಿನ ಅಲಾಯ್ ವ್ಹೀಲ್ಸ್ ಅನ್ನು ಅಳವಡಿಸಲಾಗಿದೆ.
Discussion about this post