ಕುದುರೆ ಮೇಲೆ ಸ್ವಿಗ್ಗಿ ( Swiggy ) ಕಂಪನಿಯ ಬ್ಯಾಗ್ ಹಾಕಿಕೊಂಡಿದ್ದ ಯುವಕನೊಬ್ಬನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೊನೆಗೆ ಈ ವಿಡಿಯೋ ಸ್ವಿಗ್ಗಿ ಕಂಪನಿಗೂ ತಲುಪಿತ್ತು. ಹೀಗಾಗಿ ಕುದುರೆ ಏರಿದವನ ಬೆನ್ನತಿದ ಸ್ವಿಗ್ಗಿ ಕಂಪನಿ ಇದೀಗ ಯುವಕನನ್ನು ಪತ್ತೆ ಹಚ್ಚಿದೆ. ಆಗ ಗೊತ್ತಾಗಿದ್ದು ಮಾತ್ರ ಶಾಕಿಂಗ್ ಸತ್ಯ
ಮುಂಬೈ : ಇತ್ತೀಚೆಗೆ ಸ್ವಿಗ್ಗಿ ( Swiggy ) ಕಂಪನಿಯ ಹುಡುಗನೊಬ್ಬ ಕುದುರೆ ಏರಿ ಫುಡ್ ಡೆಲಿವರಿ ಮಾಡುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ಪೆಷಲ್ ಡೆಲಿವರಿ ಹುಡುಗನನ್ನು ಪತ್ತೆ ಹಚ್ಚಲು ಸ್ವಿಗ್ಗಿ ಕಂಪನಿ ಕೂಡಾ ಮುಂದಾಗಿತ್ತು. ಈ ಹಿನ್ನಲೆಯಲ್ಲಿ ಕುದುರೆ ಮೇಲೆ ಏರಿ ಬಂದ ಹುಡುಗನನ್ನು ಪತ್ತೆ ಹಚ್ಚಿದವರಿಗೆ 5 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಸಂಸ್ಥೆ ಹೇಳಿತ್ತು.
ಇದೀಗ ಹುಡುಗ ಪತ್ತೆಯಾಗಿದ್ದಾನೆ. ಕುದುರೆಯೂ ಪತ್ತೆಯಾಗಿದೆ. ಸ್ವಿಗ್ಗಿ ಕಂಪನಿಯ ಬ್ಯಾಗ್ ಕೂಡಾ ಪತ್ತೆಯಾಗಿದೆ. ಆದರೆ ಆತ ಸ್ವಿಗ್ಗಿ ಕಂಪನಿಯ ಉದ್ಯೋಗಿಯೇ ಅಲ್ಲ ಅನ್ನುವುದು ಗೊತ್ತಾಗಿದೆ.
ಇದನ್ನೂ ಓದಿ : Siddaramotsava : ಮೊದಲು ನಿಮ್ಮ ತೂತುಗಳನ್ನು ಮುಚ್ಚಿಕೊಳ್ಳಿ : ಬಿಜೆಪಿ ನಾಯಕರಿಗೆ ತಿವಿದ ಯತೀಂದ್ರ ಸಿದ್ದರಾಮಯ್ಯ
ಅಂದ ಹಾಗೇ ಕುದುರೆ ಮೇಲೆ ಪತ್ತೆಯಾದವನು ಸುಶಾಂತ್. ಮದುವೆ ಕಾರ್ಯಕ್ರಮಗಳಿಗೆ ಕುದುರೆ ಕಳುಹಿಸುವ ಕೆಲಸ ಮಾಡುತ್ತಿದ್ದ. ಯಾರೋ ಕೊಟ್ಟ ಸ್ವಿಗ್ಗಿ ಬ್ಯಾಗ್ ನಲ್ಲಿ ತಿಂಡಿಯ ಬದಲಿಗೆ ಮದುವೆ ಮೆರವಣಿಗೆಯಲ್ಲಿ ಕುದುರೆಗಳ ಮೇಲೆ ಹಾಕುವ ಕಸೂತಿ ಬಟ್ಟೆ ಹಾಗೂ ಪರಿಕರಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಅನ್ನುವುದು ಈಗ ಗೊತ್ತಾಗಿದೆ.
ಹಾಗಂತ ಬಹುಮಾನ ವಿಚಾರದಲ್ಲಿ ಸಂಸ್ಥೆ ಮೋಸ ಮಾಡಿಲ್ಲ ವಿಡಿಯೋ ಚಿತ್ರೀಕರಿಸಿದ ಅವಿ ಹಾಗೂ ಆತನ ಸ್ನೇಹಿತರಿಗೆ ಬಹುಮಾನವನ್ನು ನೀಡಲಾಗಿದೆ.
Discussion about this post