ಬದುಕಲು ಕಲಿಯಿರಿ ಕೃತಿ ಮೂಲಕ ಮನೆಮಾತಾಗಿದ್ದ ಶ್ರೀ ಜಗದಾತ್ಮಾನಂದ ಸ್ವಾಮೀಜಿ (89) ಗುರುವಾರ ರಾತ್ರಿ 7.30ಕ್ಕೆ ವಿಧಿವಶರಾಗಿದ್ದಾರೆ.
ಮೈಸೂರಿನ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ ಅವರಿಗೆ 90 ವರ್ಷ ವಯಸ್ಸಾಗಿತ್ತು..
ಜಗದಾತ್ಮಾನಂದ ಕೊಡಗಿನಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕರಾಗಿದ್ದಾರೆ
ಕಳೆದೊಂದು ತಿಂಗಳಿಂದ ನ್ಯುಮೋನಿಯಾದಿಂದ ಬಳಸುತ್ತಿದ್ದ ಇವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ರಾಮಕೃಷ್ಣ ಶಾರದಾಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಶ್ರೀಗಳ “ಬದುಕಲು ಕಲಿಯಿರಿ” ಸರಣಿಯ ಪುಸ್ತಕಗಳು 9 ಭಾಷೆಗೆ ಅನುವಾದಗೊಂದು ದಾಖಲೆ ಮೆರೆದಿವೆ.
ಜಗದಾತ್ಮಾನಂದ ಜೀ ಬರೆದಿದ್ದ ‘ಬದುಕಲು
ಕಲಿಯಿರಿ’ ಕೃತಿ ಸಾಕಷ್ಟು ಪ್ರಸಿದ್ಧಿಯನ್ನು
ಪಡೆದಿತ್ತು. ಹುಟ್ಟಿದ ಮೇಲೆ ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿ ನೋಡು ಅನ್ನುವಂತೆ,
ಜೀವನದಲ್ಲಿ ಒಮ್ಮೆ ಬದುಕಲು ಕಲಿಯಿರಿ ಪುಸ್ತಕ ಓದಿ ಅನ್ನುವ ಮಾತು ಪ್ರಚಲಿತದಲ್ಲಿತ್ತು.
ಜಗದಾತ್ಮಾನಂದ ಜೀ ಬರೆದ ‘ಬದುಕಲು ಕಲಿಯಿರಿ ಎಂಬ ಪುಸ್ತಕ ಕನ್ನಡ ಪ್ರಕಾಶನ ಲೋಕದಲ್ಲಿ ದಾಖಲೆಯನ್ನು ನಿರ್ಮಿಸಿದೆ. ಕನ್ನಡ ಭಾಷೆಯ ಪುಸ್ತಕ 9 ಬಾಷೆಗಳಿಗೆ ಭಾಷಾಂತರ ಹೊಂದಿತ್ತು. ಬದುಕಲು ಕಲಿಯಿರಿ ಮೊದಲನೆಯ ಭಾಗ 1981ರಲ್ಲಿ ಪ್ರಕಟವಾದರೆ, ಎರಡನೇ ಭಾಗ 1986ರಲ್ಲಿ ಪ್ರಕಟಗೊಂಡಿತ್ತು. ಮೊದಲನೆಯ ಭಾಗ 2003ರ ಹೊತ್ತಿಗೆ ಹದಿಮೂರು ಮುದ್ರಣ ಕಂಡಿತ್ತು. ಎರಡನೆಯ ಭಾಗ 2002 ರಲ್ಲಿ ಒಂಭತ್ತನೆಯ ಮುದ್ರಣ ಕಂಡಿತ್ತು.
ಜನರಿಂದ ಮತ್ತೆ ಮತ್ತೆ ಬೇಡಿಕೆ ಬಂದ ಹಿನ್ನಲೆಯಲ್ಲಿ ಎರಡು ಭಾಗಗಳನ್ನು ಸೇರಿಸಿ ಸಂಯುಕ್ತವಾಗಿ ಬದುಕಲು ಕಲಿಯಿರಿ ಪುಸ್ತಕವನ್ನು ಪ್ರಕಟಿಸಲಾಗಿದೆ.
ಸಂಯುಕ್ತವಾಗಿ ಪ್ರಕಟವಾಗಿರುವ ಪುಸ್ತಕದಲ್ಲಿ ಈಗಾಗಲೇ 30 ಸಾವಿರ ಪ್ರತಿಗಳಷ್ಟು ಮಾರಾಟವಾಗಿದೆ. 1981 ರಿಂದ ಈ ವರೆಗೆ ಬದುಕಲು ಕಲಿಯಿರಿ ಪುಸ್ತಕದ 3 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದೆ ಅನ್ನುವುದು ಅಂದಾಜು.
Discussion about this post