ವರ್ಷದಲ್ಲಿ ಮೂರ್ನಾಲ್ಕು ಸೂಪರ್ ಮೂನ್ ಕಾಣಿಸಿಕೊಳ್ಳುತ್ತದೆ. ಇಂದು ಕಾಣಿಸಿಕೊಳ್ಳುವ ಸೂಪರ್ ಮೂನ್ ಅತಿ ದೊಡ್ಡದು – ( Supermoon 2022 )
ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಇಂದು ಕಾಣಸಿಗಲಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಈ ವಿಶೇಷ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಭಾರತದಲ್ಲಿ ಮಂಗಳವಾರ ಮುಂಜಾನೆಯಿಂದ ಶುಕ್ರವಾರ ಬೆಳಗಿನ ಜಾವದವರೆಗೆ ಸುಮಾರು ಮೂರು ದಿನಗಳ ಕಾಲ ಚಂದ್ರನು ಪೂರ್ಣವಾಗಿ ಕಾಣಿಸಿಕೊಳ್ಳುತ್ತಾನೆ. ನಮ್ಮ ದೇಶದಲ್ಲಿ ಗುರುವಾರ ಅಂದರೆ ಜುಲೈ 14 ರ ಮಧ್ಯರಾತ್ರಿ 12.08 ಕ್ಕೆ ಸೂಪರ್ ಮೂನ್ ( Supermoon 2022 ) ವೀಕ್ಷಿಸಬಹುದಾಗಿದೆ.
ಸೂಪರ್ ಮೂನ್ ಅಂದರೇನು…? ಹುಣ್ಣಿಮೆ ಅಥವಾ ಪೌರ್ಣಿಮೆ ದಿನದಂದು ಭೂಮಿಯ ಒಂದು ಬದಿಯಲ್ಲಿ ಸೂರ್ಯ ಇದ್ದರೆ, ಅದಕ್ಕೆ ತದ್ವಿರುದ್ಧವಾಗಿ ಹಿಂಬದಿಯಲ್ಲಿ ಚಂದ್ರನಿರುತ್ತಾನೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುತ್ತದೆ. ಸೂಪರ್ ಮೂನ್ ದಿನ ಭೂಮಿಯ ಹತ್ತಿರಕ್ಕೆ ಚಂದ್ರ ಬರುವ ಕಾರಣ ಸೂರ್ಯನ ಬೆಳಕಿನಲ್ಲಿ ಇಡೀ ಚಂದ್ರ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ. ಆ ದಿನದಂದು ಭೂಮಿಗೆ ಚಂದ್ರ ಅತಿ ಸಮೀಪಕ್ಕೆ ಬಂದಾಗ ಅದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ.
ಇದನ್ನೂ ಓದಿ : Ramya Bangkok : ರಾಜಕೀಯದಿಂದ ದೂರ ಸರಿದ ರಮ್ಯಾ ಬ್ಯಾಂಕಾಕ್ ನತ್ತ ಪಯಣ
ಈ ವರ್ಷದ ಅತಿ ದೊಡ್ಡ ಸೂಪರ್ ಮೂನ್ ಗುರು ಪೂರ್ಣಿಮೆಯ ( guru Purnima ) ದಿನವಾದ ಇಂದು ಕಾಣಿಸಿಕೊಳ್ಳಲಿದೆ. ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಹತ್ತಿರವಾಗುವುದರಿಂದ ಚಂದ್ರ ಎಂದಿಗಿಂತ ಇಂದು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ ಅನ್ನಿಸಿಕೊಳ್ಳಲಿದೆ
ಒಂದೇ ಒಂದು ಕೊರೋನಾ ಪ್ರಕರಣಕ್ಕೆ ಬೆಚ್ಚಿ ಬಿದ್ದ ಚೀನಾ : ಇಡೀ ನಗರ ಲಾಕ್ ಡೌನ್
ಕೊರೋನಾ ಸೋಂಕಿನ ತವರೂರು ಚೀನಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮತ್ತೆಲ್ಲಿ ಹೊಸ ತಳಿ ಎಂಟ್ರಿಯಾಗುತ್ತದೋ ಅನ್ನುವ ಆತಂಕ ಇವರದ್ದು. ಹೀಗಾಗಿಯೇ ಮುಂಜಾಗ್ರತೆ
ಬೀಜಿಂಗ್ : ಕೊರೋನಾ ಸೋಂಕಿನ ಮೊದಲ ಅಲೆಗೆ ಹೋಲಿಸಿದರೆ ಈಗ ಭೀತಿ ಸಾಕಷ್ಟು ಕಡಿಮೆಯಾಗಿದೆ. ಹಾಗಂತ ನಿರ್ಲಕ್ಷ್ಯ ಮಾಡುವಂತಿಲ್ಲ. ಕಾಲ ಕಾಲಕ್ಕೆ ಕಾಣಿಸಿಕೊಳ್ಳುತ್ತಿರುವ ಹೊಸ ಹೊಸ ತಳಿಗಳು ಅಪಾಯಕಾರಿಯಾಗಿಯೇ ವರ್ತಿಸುತ್ತಿದೆ. ಇನ್ನು ಕೊರೋನಾ ತವರೂರು ಚೀನಾ ಮಾತ್ರ ಕೊರೋನಾ ಅಂದ್ರೆ ಈಗ್ಲೂ ನಡುಗುತ್ತದೆ.
ಇದನ್ನೂ ಓದಿ : kumaraswamy layout : ಪ್ರೇಯಸಿಗಾಗಿ ಮನೆ ಮಾಲೀಕನ ತಿಜೋರಿಗೆ ಕನ್ನ : ಸ್ನೇಹಿತರ ಮಾತು ನಂಬಿದ ಅಂಕಲ್ ಕಂಬಿ ಹಿಂದೆ
ಈ ನಡುವೆ ಒಂದೇ ಒಂದು ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಚೀನಾ ಸರ್ಕಾರ ಹೆನಾನ್ ಪ್ರಾಂತ್ಯದ ವುಗಾಂಗ್ ನಗರವನ್ನು ಲಾಕ್ ಡೌನ್ ಮಾಡಿದೆ. ಈ ಆದೇಶದ ಕಾರಣ 3 ಲಕ್ಷಕ್ಕೂ ಅಧಿಕ ಜನ ಸೋಮವಾರ ಮಧ್ಯಾಹ್ನದಿಂದ ಗುರುವಾರ ಮಧ್ಯಾಹ್ನ ತನಕ ಮನೆಯಲ್ಲೇ ಇರುವಂತಾಯ್ತು. ಮನೆಯಲ್ಲೇ ಇರುವ ಜನರ ಮೂಲಭೂತ ಅವಶ್ಯಕತೆ ಸಲುವಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸ್ಥಳೀಯ ಆಡಳಿತ ಅವರ ಬೇಕು ಬೇಡಗಳಿಗೆ ಸ್ಪಂದಿಸಲಿದೆ.
ಇದನ್ನೂ ಓದಿ : police investigation : ಪತ್ನಿಯನ್ನು ಕೊಂದ ಪತಿಯನ್ನು ಆರೆಸ್ಟ್ ಮಾಡಿದ್ದೆ INTERESTING: ರೋಚಕ ಕಾರ್ಯಾಚರಣೆ
ಇನ್ನು ಅನಿವಾರ್ಯ ಸಂದರ್ಭದಲ್ಲಿ ಜನ ಓಡಾಟ ನಡೆಸಬೇಕಾದರೆ ಅದಕ್ಕೆ ಅಧಿಕಾರಿಗಳ ಅನುಮತಿ ಅಗತ್ಯವಾಗಿದೆ. ಜೊತೆಗೆ ಅಷ್ಟೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿದೆ. ಈ ನಡುವೆ ಚೀನಾದಲ್ಲಿ ಮಂಗಳವಾರ 347 ಮಂದಿಗೆ ಕೊರೋನಾ ಸೋಂಕು ತಗುಲಿದೆ.
Discussion about this post