ಈಗ ಬೆಂಗಳೂರು ಉತ್ತರದಲ್ಲಿರುವ ಸದಾನಂದ ಗೌಡರು ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ( Sumalatha)
ಮಂಡ್ಯದಲ್ಲಿ ದಳಪತಿಗಳನ್ನು ಮಣ್ಣು ಮುಕ್ಕಿಸಿ ಗೆದ್ದು ಸಂಸತ್ ಪ್ರವೇಶಿಸಿದ್ದ ಸುಮಲತಾ ಅಂಬರೀಶ್ ( Sumalatha) ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋದಿಲ್ಲ ಅನ್ನಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮಂಡ್ಯದಲ್ಲೇ ಮತ್ತೆ ಸುಮಲತಾ ಗೆಲ್ಲುವ ಸಾಧ್ಯತೆಗಳು ತುಂಬಾ ಕಡಿಮೆ. ಹೀಗಾಗಿ ಮಗನನ್ನು ರಾಜಕೀಯವಾಗಿ ಬೆಳೆಸುವಂತೆ ಅವರಿಗೆ ಸಲಹೆಗಳು ಬಂದಿತ್ತು.
ಆದರೆ ಅಭಿಷೇಕ್ ಅವರನ್ನು ಈಗ್ಲೇ ರಾಜಕೀಯ ರಂಗಕ್ಕೆ ಬಿಟ್ಟು ಕೊಡಲು ಸುಮಲತಾ ಅವರನ್ನು ಸಿದ್ದರಿಲ್ಲ. ಸಿನಿಮಾ ರಂಗದಲ್ಲಿ ಒಂದಿಷ್ಟು ಸಾಧನೆ ಮಾಡಲಿ, ಆಮೇಲೆ ರಾಜಕೀಯ ಅನ್ನುವ ಯೋಚನೆ ಸುಮಲತಾ ಅವರದ್ದು. ಮತ್ತೊಂದು ಕಡೆ ಮಂಡ್ಯ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಟ್ರೆ ಅಭಿಷೇಕ್ ಸ್ಪರ್ಧಿಸಬಹುದು ಅನ್ನಲಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಇದಕ್ಕೆ ಹಸಿರು ನಿಶಾನೆ ತೋರಿರಲಿಲ್ಲ.
ಇದನ್ನು ಓದಿ : Areca nut : ನೀವು ಅಡಿಕೆ ಕೃಷಿಕರೇ… ಕೃಷಿ ವಿಜ್ಞಾನಿಯ ಈ ಮಾತನ್ನು ಒಂದ್ಸಲ ಓದಿಕೊಳ್ಳಿ
ಈ ನಡುವೆ ಸುಮಲತಾ ಅವರನ್ನು ಸೆಳೆಯಲು ಬಿಜೆಪಿ ಸಾಕಷ್ಟು ದಿನಗಳಿಂದ ಪ್ರಯತ್ನಿಸುತ್ತಿದೆ. ಭಾನುವಾರ ಕಂದಾಯ ಸಚಿವ ಆರ್ ಅಶೋಕ್ ಬಹಿರಂಗವಾಗಿಯೇ ಸುಮಲತಾ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ. ಮೂಲಗಳ ಪ್ರಕಾರ ಶ್ರಾವಣ ಮಾಸದಲ್ಲಿ ಸುಮಲತಾ ಬಿಜೆಪಿಗೆ ಸೇರುವ ಸಾಧ್ಯತೆಗಳಿದೆಯಂತೆ.
ಈಗಾಗಲೇ ಈ ಸಂಬಂಧ ಮಾತುಕತೆ ಮುಕ್ತಾಯಗೊಂಡಿದ್ದು, ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸುಮಲತಾ ಅವರು ಮನಸ್ಸು ಮಾಡಿದ್ದು, ಅಲ್ಲೇ ಟಿಕೆಟ್ ಕೊಟ್ರೆ ಬಿಜೆಪಿಗೆ ಬರುವುದಾಗಿ ಹೇಳಿದ್ದರಂತೆ. ಅದರಂತೆ ಈಗ ಬೆಂಗಳೂರು ಉತ್ತರವನ್ನು ಪ್ರತಿನಿಧಿಸುತ್ತಿರುವ ಸದಾನಂದ ಗೌಡ ಅವರಿಗೆ ಮುಂದಿನ ಟಿಕೆಟ್ ಅನುಮಾನ ಅನ್ನಲಾಗಿತ್ತು, ಸುಮಲತಾ ಅವರು ಸ್ಪರ್ಧಿಸುವ ಸಾಧ್ಯತೆಗಳಿದೆ.
ದೆಹಲಿ ಮಟ್ಟದಲ್ಲೂ ಬಿಜೆಪಿ ನಾಯಕರೊಂದಿಗೆ ಸುಮಲತಾ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಿಂದಿ, ಇಂಗ್ಲೀಷ್ ಮೇಲೆ ಹಿಡಿತ ಚೆನ್ನಾಗಿರುವ ಕಾರಣದಿಂದ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಮತ್ತೊಬ್ಬ ಬೆಸ್ಟ್ ಮಹಿಳಾ ನಾಯಕಿ ಉದಯಿಸಿದರೂ ಅಚ್ಚರಿ ಇಲ್ಲ.
Discussion about this post