ಗಣೇಶನ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿದೆ. ಈಗ ನಿಯಮಗಳನ್ನು ಹೇಳೋದು ಎಷ್ಟರ ಮಟ್ಟಿಗೆ ಸರಿ ( Ganesh Chaturthi)
ಬೆಂಗಳೂರು : ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ಹಿಡಿತ ತಪ್ಪಿದೆ ಅನ್ನುವುದು ಪ್ರತಿಪಕ್ಷಗಳ ಆರೋಪ. ಅದು ಹೌದು ಅನ್ನುವಂತೆ ನಡೆದುಕೊಳ್ಳುತ್ತಿದೆ ಬಿಜೆಪಿ ಸರ್ಕಾರ. ಗಣೇಶನ ಹಬ್ಬ ( Ganesh Chaturthi) ಆಚರಣೆ ವಿಚಾರದಲ್ಲಿ ಸ್ಪಷ್ಟ ನಿಯಮ ರೂಪಿಸುವಲ್ಲಿ ಎಡವಿದ ರಾಜ್ಯ ಸರ್ಕಾರ ಕೊನೆಯ ಕ್ಷಣದಲ್ಲಿ ನಿಯಮ ಬಿಡುಗಡೆ ಮಾಡಿದೆ.
ಇನ್ನು ಈ ನಿಯಮಗಳ ಬಗ್ಗೆ ಗಣೇಶೋತ್ಸವ ಸಮಿತಿಗಳಿಗೆ ಸಲಹೆ ಸೂಚನೆ ನೀಡಬೇಕಾದ ಅಧಿಕಾರಿಗಳು ಮತ್ತಷ್ಟು ಎಡವಿದ್ದಾರೆ.ಹಬಕ್ಕೆ ನಾಲ್ಕು ದಿನಗಳಿದೆ ಅನ್ನುವಾಗ ಸಮಿತಿ ಸದಸ್ಯರನ್ನು ಕರೆದು ಸೂಚನೆಗಳನ್ನು ನೀಡಲಾಗುತ್ತಿದೆ. ಬದಲಾಗಿ ರಾಜ್ಯ ಸರ್ಕಾರ ವಾರದ ಹಿಂದೆಯೇ ನಿಯಮ ಬಿಡುಗಡೆ ಮಾಡಿರುತ್ತಿದ್ರೆ ಪೊಲೀಸರು, ಸ್ಥಳೀಯಾಡಳಿತ ಸಂಸ್ಥೆಗಳು, ಗಣೇಶೋತ್ಸವ ಸಮಿತಿಯವರು ಸರಿಯಾದ ಸಿದ್ದತೆ ಮಾಡಿಕೊಳ್ಳುತ್ತಿದ್ದರು.
ಇದನ್ನು ಓದಿ : Snake Lokesh : 50 ಸಾವಿರ ಹಾವು ರಕ್ಷಿಸಿದ್ದ ಸ್ನೇಕ್ ಲೋಕೇಶ್ ಹಾವು ಕಚ್ಚಿ ಸಾವು
ಇದೇ ಕಾರಣಕ್ಕಾಗಿ ಇದೀಗ ಬೆಂಗಳೂರಿನಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ನಗರದಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಪುರಭವನದಲ್ಲಿ ಗುರುವಾರ ಶಾಂತಿ ಸೌಹಾರ್ದತಾ ಸಭೆ ನಡೆಯಿತು. ಸಭೆಯಲ್ಲಿ ಹತ್ತು ಹಲವು ನಿಯಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದಾರೆ.
ಸಾರ್ವಜನಿಕ ಗಣೇಶೋತ್ಸವ ಆಚರಿಸುವವರು ಭದ್ರತೆಗಾಗಿ ಸಿಸಿ ಕ್ಯಾಮಾರ ಹಾಕಿಕೊಳ್ಳಬೇಕು, ಆಯೋಜಕರೇ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು, ರಸ್ತೆಗಳಲ್ಲಿ ಪೆಂಡಾಲ್ ಆಳವಡಿಸಬಾರದು, ಅಗ್ನಿ ನಂದಿಸುವ ವ್ಯವಸ್ಥೆ ಹೊಂದಿರಬೇಕು, ಪೆಂಡಾಲ್ ನಿಂದ ಹೊರಗಡೆ ಬ್ಯಾನರ್ ಫ್ಲೆಕ್ಸ್ ಅಳವಡಿಸಲು ಬಿಬಿಎಂಪಿ ಅನುಮತಿ ಪಡೆಯಬೇಕು ಹೀಗೆ ಹತ್ತು ಹಲವು ಕ್ರಮಗಳನ್ನು ಸೂಚಿಸಲಾಗಿದೆ. ಕೆಲವೊಂದು ನಿಯಮಗಳ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಹಬ್ಬಕ್ಕೆ ನಾಲ್ಕೈದು ದಿನ ಇರುವಾಗ ಸಾವಯವ ಮೂರ್ತಿ ಉಪಯೋಗಿಸಿ ಅಂತೀರಿ, ಅದನ್ನು ನಮಗಲ್ಲ ತಯಾರಿಕ ಘಟಕಗಳಿಗೆ ಹೇಳಬೇಕು, ಹಲವು ಕಡೆಗಳಲ್ಲಿ ಹೈಟೆನ್ಸನ್ ವಯರ್ ಗಳು ಕೈಗೆಟಕುವ ಸ್ಥಿತಿಯಲ್ಲಿದೆ, ಅದನ್ನು ಬೆಸ್ಕಾಂ ಅಧಿಕಾರಿಗಳು ಸರಿಪಡಿಸಬೇಕು ಎಂದು ಒತ್ತಾಯಿಸಿದರು
Discussion about this post