ಮಾಜಿ ಪತ್ನಿಯನ್ನು ನೆನೆದು ಸೋಮಣ್ಣ ( somanna machimada) ಕಣ್ಣೀರು ಹಾಕಿದ್ದಾರೆ. ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವವರಿಗೊಂದು ಇದು ಪಾಠ
ಬಿಗ್ ಬಾಸ್ ಕನ್ನಡ ಒಟಿಟಿ ಮೊದಲ ಸೀಸನ್ನಲ್ಲಿ 16 ಸ್ಪರ್ಧಿಗಳು ಮನೆಯೊಳಗಡೆ ಹೋಗಿದ್ದು. ಈ ವಾರಾಂತ್ಯಕ್ಕೆ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗಲಿದ್ದಾರೆ. ಇದಕ್ಕಾಗಿ ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ನಡುವೆ ಬಿಗ್ ಬಾಸ್ ಮನೆ ಹೋದವರದೆಲ್ಲಾ ಇದೇ ಕಥೆಯೇ ಅನ್ನುವಂತಾಗಿದೆ. ಯಾರೇ ಮಾತನಾಡಿದ್ರು ಕೊನೆಯಾಗೋದು ರಿಲೇಷನ್ ಶಿಪ್ ನಲ್ಲಿ. ಸೆಲೆಬ್ರೆಟಿಗಳೆಂದು ( somanna machimada) ಕರೆಸಿಕೊಂಡವರ ಹಣೆ ಬರಹ ಇಷ್ಟೇನಾ..?
ಈ ನಡುವೆ ಪತ್ರಕರ್ತ ಸೋಮಣ್ಣ ಮಾಚಿಮಾಡ ತಮ್ಮ ಮಾಜಿ ಪತ್ನಿಯನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಆಕೆಯನ್ನು ಮರೆಯಲಾಗುತ್ತಿಲ್ಲ. ಆಕೆಯೇ ಮೊದಲು, ಆಕೆಯೇ ಕೊನೆ ಎಂದು ಭಾವುಕರಾಗಿದ್ದಾರೆ. ಈ ಮೂಲಕ ತಮ್ಮ ಡಿವೋರ್ಸ್ ಕಥೆಯನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ : Dentist suicide : 9 ವರ್ಷದ ಮಗಳೊಂದಿಗೆ ನೇಣು ಬಿಗಿದು ದಂತ ವೈದ್ಯೆ ಆತ್ಮಹತ್ಯೆ
ಸೋಮಣ್ಣ ತಮ್ಮಪತ್ನಿಯಿಂದ ದೂರವಾಗಿದ್ದು ಮಹಾಮನೆಯ ವೇದಿಕೆಯಲ್ಲಿ ಅದನ್ನು ರಿವೀಲ್ ಮಾಡಿದ್ದಾರೆ. ಸೋಮಣ್ಣ ಅವರ ಈ ಸ್ಟೇಟ್ ಮೆಂಟ್ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಅನೇಕರಿಗೆ ಸೋಮಣ್ಣ ಒಂಟಿ ಅನ್ನುವುದು ಗೊತ್ತಿರಲಿಲ್ಲ.
ಜೀವನದಲ್ಲಿ ನಾನು ಅವಳನ್ನು ನೋಯಿಸಿದೆ. ನನ್ನ ಕೆಲಸಕ್ಕೆ ನಾನು ಹೆಚ್ಚು ಒತ್ತು ಕೊಟ್ಟೆ. ಅವಳಿಗಾಗಿ ಸಮಯ ಮೀಸಲಿಡಲಿಲ್ಲ. ಆಕೆಯ ಜೊತೆ ನಾನಿರಬೇಕು ಎಂದು ಬಯಸಿದಾಗಲೆಲ್ಲಾ, ನನ್ನ ತಂದೆ ಸೇನೆಯಲ್ಲಿದ್ದವರು. ನಾನೂ ಸೇನೆ ಸೇರುತ್ತಿದ್ರೆ ನೀನು ಒಬ್ಬಳೇ ಇರಬೇಕಿತ್ತು ತಾನೇ ಅನ್ನುತ್ತಿದ್ದೆ.

ಮ್ಯೂಚುವಲ್ ಆಗಿ ಇಬ್ಬರೂ ಡಿವೋರ್ಸ್ ಪಡೆದಿದ್ದೇವೆ. ವಿಚ್ಛೇದನಕ್ಕೆ ಅರ್ಜಿ ಹಾಕಿದ ಸಂದರ್ಭದಲ್ಲಿ ಬೆಳಗ್ಗೆ ಕೋರ್ಟ್ ಮುಗಿಸಿ ಮಧ್ಯಾಹ್ನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದೆ ಎಂದು ತಮ್ಮ ಮಾನಸಿಕ ಸ್ಥಿತಿಯನ್ನು ಅನಾವರಣ ಮಾಡಿದ್ದಾರೆ. ಡಿವೋರ್ಸ್ ಪಡೆದ ಮೇಲೂ ಆಕೆಯನ್ನ ಮರೆಯಲಾಗುತ್ತಿಲ್ಲ. ಆಕೆ ಇಲ್ಲದೆ ಬದುಕಲಾಗುತ್ತಿಲ್ಲ ಎಂದು ಭಾವುಕರಾದರು ಸೋಮಣ್ಣ.
Discussion about this post