ನಾಗರಾಜನನ್ನು ಕೊಂದ ಕಾರಣಕ್ಕೆ ನಾಗಿಣಿ ಸೇಡು ತೀರಿಸಿಕೊಂಡಿದ್ದಾಳೆ ಅನ್ನುವುದು ಊರವರ ಮಾತು.(snakebite) ಮಿಲಿನ ಕಾಲದಲ್ಲಿ ಸರ್ಪ ಕೊಂದ ಕಾರಣಕ್ಕೆ ಹೀಗಾಯ್ತು ಎಂದು ಹಳ್ಳಿಯೇ ಮಾತನಾಡಿಕೊಳ್ಳುತ್ತಿದೆ
ಉತ್ತರಪ್ರದೇಶ : ಗರುಡ ರೇಖೆ, 1985ರಲ್ಲಿ ತೆರೆ ಕಂಡ ಕನ್ನಡ ಚಿತ್ರ. ಈ ಕಾಲದಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಕೂಡಾ. ಅಂಬಿಕಾ, ಮಾಧವಿ ನಟನೆಯ ಈ ಸಿನಿಮಾದಲ್ಲಿ, ಆ ರವಿ ಜಾರಿದ ಶಶಿ ಮೂಡಿದ ಹಾಡು ಇಂದಿಗೂ ಜನರ ಬಾಯಲ್ಲಿ ನಲಿದಾಡುತ್ತಿದೆ. ಇದೇ ಸಿನಿಮಾದಲ್ಲಿ ಶ್ರೀನಾಥ್, ವಜ್ರಮುನಿ, ಪ್ರಭಾಕರ್ ಸೇರಿ ಜೋಡಿ ಹಾವುಗಳನ್ನು ಕೊಲ್ಲಲ್ಲು ಮುಂದಾಗುತ್ತಾರೆ. ಈ ವೇಳೆ ಒಂದು ಹಾವನ್ನು ಮಾತ್ರ ಅವರಿಗೆ ಕೊಲ್ಲಲು ಸಾಧ್ಯವಾಗುತ್ತದೆ. ಇದಾದ ಬಳಿಕ ಒಂದು ಹಾವನ್ನು ಕೊಂದ ಅವರು ಚಿನ್ನ, ಬೆಳ್ಳಿ, ಮುತ್ತು ರತ್ನ, ವಜ್ರ ವೈಢೂರ್ಯಗಳನ್ನು ದೋಚುತ್ತಾರೆ. ಈ ನಡುವೆ ತನ್ನ ಇನಿಯನ್ನು ಕೊಂದವರ ವಿರುದ್ಧ ಪ್ರತೀಕಾರ ತೀರಿಸಲು ನಾಗಿಣಿ ಮುಂದಾಗುವುದೇ ಈ ಸಿನಿಮಾದ ಕಥಾ ಹಂದರ.(snakebite)
ಇದೇ ಸಿನಿಮಾ ರೀತಿಯ ಸೇಮ್ ಟೂ ಸೇಮ್ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. (snakebite) ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಮಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ರಮೇಶ್ ರಜಪೂತ್ ಅನ್ನುವವರ ಮನೆಗೆ ಜೋಡಿ ನಾಗರಹಾವು ಪ್ರವೇಶಿಸಿತ್ತು. ಇದನ್ನು ಕಂಡ ರಮೇಶ್ ಪತ್ನಿ ವಿಷಯವನ್ನು ಗಂಡನಿಗೆ ತಿಳಿಸಿದ್ದಾಳೆ. ಈ ರಮೇಶ್ ಹಾವು ಓಡಿಸಲು ಪ್ರದೀಪ್ ಸಹಾಯ ಕೇಳಿದ್ದಾನೆ.
ಇದನ್ನೂ ಓದಿ : Bengaluru terror : ತಿಲಕ್ ನಗರದಲ್ಲಿ ಬಂಧಿತ ಅಖ್ತರ್ಗೆ ಅಲ್ಖೈದಾ ನಂಟು..!
ಹಿಂದೆ ಮುಂದೆ ಯೋಚಿಸದ ಪ್ರದೀಪ್ ಹಾವನ್ನು ಕೊಲ್ಲಲು ಮುಂದಾಗಿದ್ದಾನೆ.ಈ ವೇಳೆ ಒಂದು ಹಾವು ಹೇಗೋ ತಪ್ಪಿಸಿಕೊಂಡಿದೆ. ಒಂದು ಹಾವನ್ನು ಪ್ರದೀಪ್ ಕೊಂದಿದ್ದಾನೆ. ಇದಾದ ಬಳಿಕ ಹಾವು ಕೊಂದ ನೋವು ಪ್ರದೀಪ್ ನನ್ನು ಕಾಡಲಾರಂಭಿಸಿತ್ತು. ಸಾಕಷ್ಟು ಪಶ್ಚಾತಾಪ ಪಟ್ಟಿದ್ದ ಪ್ರದೀಪ್ ಮನೆಯವರೊಂದಿಗೂ ಈ ವಿಷಯ ಹಂಚಿಕೊಂಡಿದ್ದವನಂತೆ. ಮನಸ್ಸಿನ ನೋವು ಕಳೆಯುವ ಸಲುವಾಗಿ ಒಂದು ತಿಂಗಳ ಕಾಲ ಶಿವನ ಪೂಜೆ ಮಾಡಲು ಕೂಡಾ ನಿರ್ಧರಿಸಿದ್ದನಂತೆ.
ಪ್ರದೀಪ್ ಹಾವು ಕೊಂದು ಮೂರು ದಿನಗಳಾಗಿಲ್ಲ, ಅಷ್ಟರಲ್ಲೇ ಪ್ರದೀಪ್ ಹಾವು ಕಡಿತಕ್ಕೆ ಒಳಗಾಗಿದ್ದ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರದೀಪ್ ಮೃತಪಟ್ಟಿದ್ದಾನೆ. ಇದೀಗ ಪ್ರದೀಪ್ ಸಾವಿಗೆ ಹಾವಿನ ಹತ್ಯೆಯೇ ಕಾರಣ, ಪ್ರದೀಪ್ ಕೈಯಿಂದ ಪಾರಾದ ನಾಗಿಣಿಯೇ ಪ್ರದೀಪ್ ನನ್ನು ಕಚ್ಚಿ ಸೇಡು ತೀರಿಸಿಕೊಂಡಿದೆ ಎಂದು ಕಮಲಾಪುರ ಮಾತನಾಡಿಕೊಳ್ಳುತ್ತಿದೆ.
ಆದರೆ ಈ ವಾದವನ್ನು ಅಲ್ಲಗಳೆದಿರುವ ಜಿಲ್ಲಾಸ್ಪತ್ರೆ ವೈದ್ಯರು ಹಾವಿನ ಹತ್ಯೆಗೂ, ಹಾವು ಕಚ್ಚಿರುವುದಕ್ಕೂ ಸಂಬಂಧವಿಲ್ಲ. ಇದೊಂದು ಮೂಡನಂಬಿಕೆಯಾಗಿದ್ದು, ಕಾಕಾತಾಳೀಯ ಘಟನೆಗಳಷ್ಟೇ ಅಂದಿದ್ದಾರೆ. ಆದರೆ ವೈದ್ಯರ ಮಾತನ್ನು ಕೇಳುವ ಸ್ಥಿತಿಯಲ್ಲಿ ಹಳ್ಳಿ ಇಲ್ಲ.
ಇದನ್ನೂ ಓದಿ : Mallikarjun kharge : ರಾಷ್ಟ್ರಪತಿ ಪ್ರಮಾಣ ವಚನ ಸಮಾರಂಭದಲ್ಲಿ ಖರ್ಗೆಗೆ ನೀಡಿದ ಆಸನದ ಬಗ್ಗೆ ಆಕ್ಷೇಪ
Discussion about this post