ಉರಗ ರಕ್ಷಣೆ ಅನ್ನುವುದು ಚಿಕ್ಕ ಕೆಲಸವಲ್ಲ. ಪ್ರಾಣವನ್ನು ಒತ್ತೆ ಇಟ್ಟು ಮಾಡುವ ಕಾರ್ಯ ಇದಾಗಿದೆ ( Snake Lokesh)
ನೆಲಮಂಗಲ : ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 50ಸಾವಿರಕ್ಕೂ ಅಧಿಕ ಹಾವುಗಳನ್ನ ರಕ್ಷಣೆ ಮಾಡಿದ್ದ ಸ್ನೇಕ್ ಲೋಕೇಶ್ ( 49) ( Snake Lokesh) ಹಾವು ಕಡಿತಕ್ಕೆ ಬಲಿಯಾಗಿದ್ದಾರೆ.
ನೆಲಮಂಗಲ ತಾಲೂಕಿನ ಡಾಬಲ್‌ಪೇಟೆಯಲ್ಲಿ ಕಳೆದ ಆ. 17 ರಂದು ವಿಷಪೂರಿತ ಹಾವು ಕಚ್ಟಿತ್ತು. ಅವರನ್ನ ನೆಲಮಂಗಲದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಬೆಂಗಳೂರಿನ ಮಣಿಪಾಲ್ಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸ್ನೇಕ್ ಲೋಕೇಶ್ ಮಂಗಳವಾರ ಮೃತಪಟ್ಟಿದ್ದಾರೆ.
Read More : Sumalatha ಬಿಜೆಪಿ ಸೇರಲು ಬಹಿರಂಗ ಆಹ್ವಾನ : ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲಿರುವ ಸುಮಲತಾ
ದಾಬಸ್ ಪೇಟೆ ಸಮೀಪದ ಚಂದನ ಹೊಸಹಳ್ಳಿ ನಿವಾಸಿ ದಯಾನಂದ ಅನ್ನುವವರ ಮನೆಗೆ ಬಂದಿದ್ದ ನಾಗರಹಾವು ಹಿಡಿಯಲು ಹೋಗಿದ್ದ ವೇಳೆ ಲೋಕೇಶ್ ಹಾವಿನ ಕಡಿತಕ್ಕೆ ಒಳಗಾಗಿದ್ದರು. ಅಲ್ಲೇ ಪ್ರಾಥಮಿಕ ಚಿಕಿತ್ಸೆ ಮಾಡಿಕೊಂಡ ಅವರು ಬೈಕ್ ನಲ್ಲೇ ನೆಲಮಂಗಲಕ್ಕೆ ಬಂದಿದ್ದಾರೆ. ಈ ವೇಳೆ ದಾರಿ ಮಧ್ಯೆ ತಲೆ ಸುತ್ತು ಬಂದು ಬಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಒಂದು ವೇಳೆ ಹಾವು ಕಚ್ಚಿದ ತಕ್ಷಣ ತುರ್ತು ವಾಹನದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ರೆ ಅವರು ಬದುಕಿ ಬರುವ ಸಾಧ್ಯತೆಗಳಿತ್ತು.
Discussion about this post