2018ರಲ್ಲಿ ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವೊಂದರ ಎಫೆಕ್ಟ್ ಈ ವರ್ಷ ಗೊತ್ತಾಗಲಿದೆ ( Sivakasi firework)
ಬೆಂಗಳೂರು : ಈ ಬಾರಿಯ ದೀಪಾವಳಿಗೆ ಸುರುಸುರು ಬತ್ತಿ, ನಕ್ಷತ್ರ ಕಡ್ಡಿ, ನೆಲಚಕ್ರ ಹೀಗೆ ಮಿನುಗುವ ಪಟಾಕಿಗಳು ಮಾರುಕಟ್ಟೆಗೆ ಬರುವ ಸಾಧ್ಯತೆಗಳು ತೀರಾ ಕಡಿಮೆ. ಒಂದು ವೇಳೆ ಬಂದರೂ ಅದನ್ನು ಹಿಂಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಕಾರಣ 2018ರಲ್ಲಿ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು. ( Sivakasi firework)
ಮಿನುಗುವ ರೀತಿಯ ಪಟಾಕಿಗಳ ಉತ್ಪಾದನೆಗೆ ಅಗತ್ಯವಾದ ಬೇರಿಯಂ ಬಳಕೆಯ ಮೇಲೆ ಸುಪ್ರೀಂಕೋರ್ಟ್ 2018ರಲ್ಲೇ ನಿಷೇಧ ಹೇರಿತ್ತು. ಬಳಿಕ ಮೇಲ್ಮನವಿ ಸಲ್ಲಿಸಲಾಗಿದ್ದ ಕಾರಣ ಆದೇಶ ಜಾರಿಯಾಗಿರಲಿಲ್ಲ. 2021ರಲ್ಲಿ ನಿಷೇಧವನ್ನು ಹಿಂಪಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದ ಕಾರಣ ಭಾರತದ ಪಟಾಕಿಗಳಲ್ಲಿ ಬೇರಿಯಂ ಬಳಸುವಂತಿರಲಿಲ್ಲ.
ಇದನ್ನು ಓದಿ : Crime : ಮದ್ಯದ ಮತ್ತು ತಂದ ಆಪತ್ತು : ಎಣ್ಣೆ ಏಟಿನಲ್ಲಿ 10ನೇ ಮಹಡಿಯಿಂದ ಬಿದ್ದು ಸಾವು
ಬೇರಿಯಂ ಬಳಸಿದ ಪಟಾಕಿಗಳನ್ನು ಸುಡುವುದರಿಂದ ಗಾಳಿಯ ಗುಣಮಟ್ಟ ಕುಸಿಯುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿತ್ತು. ಹೀಗಾಗಿ ಈ ಬೇರಿಯಂ ಬಳಕೆ ನಿಷೇಧಿಸಿ ಸುಪ್ರಿಂಕೋರ್ಟ್ ಆದೇಶ ನೀಡಿತ್ತು.
ಆದರೆ ಈ ಆದೇಶ ಬರುವಷ್ಟು ಹೊತ್ತಿಗೆ ಬಹುತೇಕ ಪಟಾಕಿಗಳು ಸಿದ್ದವಾಗಿ ಮಾರುಕಟ್ಟೆ ತಲುಪಿಯಾಗಿತ್ತು. ಹೀಗಾಗಿ ನಿಷೇಧ ಮಾಡಿ ಹೊರಡಿಸಿದ ಆದೇಶ ಜಾರಿಯಾಗಲಿಲ್ಲ. ಈ ಬಾರಿ ಅದು ಜಾರಿಯಾಗುವ ಸಾಧ್ಯತೆಗಳಿದೆ.
ಈಗಾಗಲೇ ಬೇರಿಯಂ ದೊರೆಯದೇ ಇರುವ ಕಾರಣ ತಮಿಳುನಾಡಿನ ಶಿವಕಾಶಿಯ ಪಟಾಕಿ ಉತ್ಪಾದಕರು ಬೇರಿಯಂ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಬೇರಿಯಂ ಬಳಸಿ ತಯಾರಿಸುವ ಪಟಾಕಿ ತಯಾರಿಸದೆ ಇರುವ ನಿರ್ಧಾರಕ್ಕೆ ಬಂದಿದ್ದಾರೆ.
Discussion about this post