ಸಿದ್ದರಾಮಯ್ಯ ವೇಗಕ್ಕೆ ಬಿಜೆಪಿ ಗಾಬರಿಯಾಗಿದೆ. ಅಭಿವೃದ್ಧಿ ವಿಚಾರದ ಬದಲು ಇದೀಗ ಆಹಾರ ಪದ್ದತಿಗೆ ಕೈ ಹಾಕಿದೆ ( siddaramaiah non veg)
ಮಡಿಕೇರಿ : ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವ್ಯಕ್ತವಾಗುತ್ತಿರುವ ಜನ ಬೆಂಬಲ ಬಿಜೆಪಿ ನಾಯಕರನ್ನು ಕಂಗಾಲು ಮಾಡಿದೆ. ಸಿದ್ದರಾಮಯ್ಯ ಅವರ ವೇಗವನ್ನು ನೋಡಿದರೆ ಮುಂದಿನ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಖಚಿತ ಅನ್ನುವುದು ರಾಜ್ಯ ಬಿಜೆಪಿ ನಾಯಕರಿಗೂ ಅರ್ಥವಾಗಿದೆ. ಹೀಗಾಗಿಯೇ ಸಿದ್ದರಾಮಯ್ಯ ವೇಗಕ್ಕೆ ಕಡಿವಾಣ ಹಾಕಲು ಅವರ ಆಹಾರ ಪದ್ದತಿಗೆ ಬಿಜೆಪಿ ಕೈ ಹಾಕಿದೆ. ( siddaramaiah non veg)
ಇದನ್ನು ಓದಿ : Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ
ಈ ಹಿಂದೆ ಮೀನು ತಿಂದು ಧರ್ಮಸ್ಥಳಕ್ಕೆ ಸಿದ್ದರಾಮಯ್ಯ ಹೋದ್ರು ಅನ್ನುವ ವಿಷಯಕ್ಕೆ ವ್ಯಾಪಕ ಪ್ರಚಾರ ಕೊಟ್ಟಿದ್ದ ಬಿಜೆಪಿ, ಈ ವರ್ಷ ಕೋಳಿ ಸಾರಿಗೆ ಕೈ ಹಾಕಿದೆ. ಆಗಸ್ಟ್ 18 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಕೋಳಿ ಸಾರು ಊಟ ಮಾಡಿ ಕೊಡಗಿನ ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನವರಿಗೆ ಯಾವ ಸಂಸ್ಕೃತಿಯೂ ಇಲ್ಲ ಅಂದಿರುವ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.
ಕೊಡಗು ಭೇಟಿ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಕೋಳಿ ಸಾರು, ರಾಗಿ ಮುದ್ದೆ, ಕಣಿಲೆ, ಅನ್ನ, ತರ್ಕಾರಿ ಸಾಂಬಾರ್ ಮಾಡಲಾಗಿತ್ತು. ಈ ವೇಳೆ ಕೋಳಿ ಸಾರಿನಲ್ಲಿ ಊಟ ಮಾಡಿ ಸಿದ್ದರಾಮಯ್ಯ ಕೊಡ್ಲಿಪೇಟೆ ದೇವಸ್ಥಾನಕ್ಕೆ ತೆರಳಿದರು ಅನ್ನುವುದು ಬಿಜೆಪಿಯ ದೂರು.
ಇನ್ನು ಈ ವಿವಾದ ಕುರಿತಂತೆ ಪ್ರತಿಕ್ರಿಯಿಸಿರುವ ವೀಣಾ ಅಚ್ಚಯ್ಯ, ಸಿದ್ದರಾಮಯ್ಯ ಅವರು ಮಾಂಸ ಸೇವಿಸಿಲ್ಲ. ಸಿದ್ದರಾಮಯ್ಯ ಅವರು ಮಾಂಸಹಾರ ಬಿಟ್ಟು, ಕಣಿಲೆ ಪಲ್ಯ ಮತ್ತು ಅಕ್ಕಿ ರೊಟ್ಟಿಯನ್ನು ಸೇವಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Discussion about this post