ದೊಡ್ಮನೆಯ ದೊಡ್ಡ ಮಗನನ್ನು ಕರುನಾಡು ಶಿವರಾಜ್ ಕುಮಾರ್ ( shivarajkumar) ಎಂದೇ ಕರೆಯುತ್ತದೆ. ಪ್ರೀತಿಯಿಂದ ಶಿವಣ್ಣ ಅಂದವರು ಇದ್ದಾರೆ. ಆದರೆ ಶಿವರಾಜ್ ಕುಮಾರ್ ಅವರ ನಿಜವಾದ ಹೆಸರು ಬೇರೆಯೇ ಇದೆಯಂತೆ
ಕರುನಾಡ ಅಭಿಮಾನಿಗಳಿಂದ ಸೆಂಚುರಿ ಸ್ಟಾರ್, ಶಿವಣ್ಣ, ದೊಡ್ಮನೆ ಹುಡುಗ, ಜೋಗಿ ಶಿವಣ್ಣ ಎಂದೆಲ್ಲಾ ಕರೆಸಿಕೊಂಡ ಶಿವರಾಜ್ ಕುಮಾರ್ ( shivarajkumar) ಮನೆ ಮಂದಿಗೂ ಶಿವರಾಜ್ ಕುಮಾರ್ ಆಗಿ ಹೋಗಿದ್ದಾರೆ. ಪಾರ್ವತಮ್ಮ ಕೂಡಾ ಶಿವರಾಜ್ ಕುಮಾರ್ ಅವರನ್ನು ನಮ್ಮ ಶಿವಣ್ಣ ಎಂದೇ ಕರೆಯುತ್ತಿದ್ದರು. ಆದರೆ ಶಿವರಾಜ್ ಕುಮಾರ್ ಅನ್ನುವ ಹೆಸರಿನಲ್ಲಿ ಆದ್ಯಾವುದೇ ಸರ್ಕಾರಿ ದಾಖಲೆಗಳನ್ನು ಶಿವಣ್ಣ ಹೊಂದಿಲ್ಲ. ಬ್ಯಾಂಕ್ ಪಾಸ್ ಬುಕ್, ಪಾಸ್ ಪೋರ್ಟ್ ಹೀಗೆ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಶಿವಣ್ಣ ಹೆಸರು ಬೇರೆಯದ್ದೇ ಇದೆ. ಶಿವರಾಜ್ ಕುಮಾರ್ ಅನ್ನುವುದು ಕರುನಾಡಿಗರ ಹೃದಯಲ್ಲಿ ಅಚ್ಚಾದ ಹೆಸರು
ಹೌದು ತಮ್ಮ ನಿಜವಾದ ಹೆಸರು ಶಿವರಾಜ್ ಕುಮಾರ್ ಅಲ್ಲ ಅನ್ನುವುದನ್ನು ಶಿವಣ್ಣ ಅವರೇ ಬಹಿರಂಗ ಪಡಿಸಿದ್ದಾರೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನನ್ನ ನಿಜ ನಾಮಧೇಯ ಶಿವರಾಜ್ ಕುಮಾರ್ ಅಲ್ಲ ಅಂದಿದ್ದಾರೆ. ನನ್ನ ಹೆಸರು ನಾಗರಾಜು ಶಿವಪುಟ್ಟಸ್ವಾಮಿ ( Nagaraju Shiva puttaswamy ). ಎಂ.ಎಸ್. ಪುಟ್ಟಸ್ವಾಮಿ ( ms puttaswamy ) ಅಂತಾನೇ ನಾನು ಬ್ಯಾಂಕ್ ಚೆಕ್ ಗಳಿಗೆ ಸಹಿ ಹಾಕುತ್ತೇನೆ. ಚೆನೈ ನಲ್ಲಿ ಈಗ್ಲೂ ನನ್ನ ಪುಟ್ಟು..ಪುಟ್ಟು ಅಂತಾನೇ ಕರೆಯುತ್ತಾರೆ ಎಂದು ನಾಮ ರಹಸ್ಯವನ್ನು ಬಯಲು ಮಾಡಿದ್ದಾರೆ.
ಇದನ್ನು ಓದಿ : 30 ತರುಣಿಯಂತೆ ಮೇಕಪ್ ಧರಿಸಿ 35ರ ಯುವಕನನ್ನು ಮದುವೆಯಾದ 54 ರ ಆಂಟಿ
ಹಾಗಾದ್ರೆ ಶಿವರಾಜ್ ಕುಮಾರ್ ಹೆಸರು ಬದಲಾಯಿಸಿಕೊಂಡ್ರ, ತಮ್ಮ ಹೆಸರು ಬೇರೆಯದ್ದೇ ಇದೆ ಅನ್ನುವುದರ ಹಿಂದಿನ ರಹಸ್ಯವೇನು ಎಂದು ಎಲ್ಲರೂ ಅಚ್ಚರಿಯಾಗಿದ್ದಾರೆ. ಹಾಗಂತ ಶಿವಣ್ಣ ಬಗ್ಗೆ ಒಂದಿಷ್ಟು ತಿಳಿದುಕೊಂಡವರಿಗೆ ಶಿವರಾಜ್ ಕುಮಾರ್ ಮೂಲ ಹೆಸರು ಗೊತ್ತಿರುತ್ತದೆ. ಸಾಕಷ್ಟು ಸಂದರ್ಶನಗಳಲ್ಲಿ ರಾಜ್ ಕುಮಾರ್ ಅವರೇ, ತಮ್ಮ ತಂದೆಯೇ ಹೆಸರನ್ನೇ ದೊಡ್ಡ ಮಗನಿಗೆ ಇಟ್ಟಿರುವುದಾಗಿ ಹೇಳಿದ್ದರು.
ಇದನ್ನೂ ಓದಿ : ಬಾದಾಮಿಯಲ್ಲಿ ಸೋಲು ಭೀತಿ ಕೋಲಾರಕ್ಕೆ ಸಿದ್ದರಾಮಯ್ಯ ವಲಸೆ
ಭಾರತಕ್ಕೆ ನುಸುಳಿದ ಪಾಕ್ ಮೀನುಗಾರರು : 10 ದೋಣಿಗಳನ್ನು ವಶಪಡಿಸಿಕೊಂಡ BSF
ನವದೆಹಲಿ : ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ಭಾರತದ ಗಡಿಯನ್ನು ನುಸುಳುತ್ತಿದ್ದ ನಾಲ್ವರು ಪಾಕಿಸ್ತಾನ ಮೀನುಗಾರರನ್ನು BSF ಪಡೆ ಬಂಧಿಸಿದೆ. ಈ ವೇಳೆ ಅವರ ಬಳಿ ಇದ್ದ 10 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂಡೋ ಪಾಕ್ ನ ಗಡಿಭಾಗವಾಗಿರುವ ಗುಜರಾತ್ ಕಚ್ ಜಿಲ್ಲೆಯ ಹರಾಮಿ ನಲ್ಲಾ ಬಳಿ ಈ ಕಾರ್ಯಾಚರಣೆ ನಡೆದಿದ್ದು, ಪಾಕಿಸ್ತಾನಿ ಮೀನುಗಾರರು ದೋಣಿಗಳೊಂದಿಗೆ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ BSF ಪಡೆ ಸೂಕ್ತ ಎಚ್ಚರಿಕೆಯನ್ನು ನೀಡಿದೆ.
ಆದರೆ ಅವರು ಯೋಧರು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದ ಹಿನ್ನಲೆಯಲ್ಲಿ ತಕ್ಷಣ ನಾಲ್ವು ಮಂದಿ ಮೀನುಗಾರರನ್ನು ವಶಕ್ಕೆ ಪಡೆದಿದೆ.
Discussion about this post