ಹಿಂದುಗಳ ರಕ್ಷಣೆ ಸೇರಿದಂತೆ ಹಿಂದೂಗಳ ಪರ ಎಂದು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಅವಧಿಯಲ್ಲೇ Shivamogga Harsha murder case ನಲ್ಲಿ ಜೈಲು ಸೇರಿರುವ ಆರೋಪಿಗಳು ಎಂಜಾಯ್ ಮಾಡುತ್ತಿದ್ದಾರೆ.
ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ರಾಜಕೀಯ ಪಕ್ಷಗಳು ಇದೊಂದು ಕೊಲೆ ಪ್ರಕರಣದಲ್ಲಿ ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಅಷ್ಟೇ ಯಾಕೆ ಹರ್ಷನ ಕುಟುಂಬಕ್ಕೆ ಜನ ಸಹಾಯ ಹಸ್ತವನ್ನು ಕೂಡಾ ಚಾಚಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವ ಕಾರಣ ಆರೋಪಿಗಳಿಗೆ ಶಿಕ್ಷೆ ಗ್ಯಾರಂಟಿ ಅಂದುಕೊಂಡಿದ್ದರು. ಆದರೆ ಈಗ Shivamogga Harsha murder case ಹಳ್ಳ ಹಿಡಿಯುವ ಲಕ್ಷಣ ಗೋಚರಿಸುತ್ತಿದೆ. ಆರೋಪಿಗಳು ಜೈಲಿನಲ್ಲಿ ಬಿಂದಾಸ್ ಆಗಿದ್ರೆ, ಗೃಹ ಸಚಿವರು ಕಠಿಣ ಕ್ರಮದ ಭರವಸೆಯೊಂದಿಗೆ ಮಾತು ಮುಗಿಸಿದ್ದಾರೆ.
ಪರಪ್ಪನ ಅಗ್ರಹಾರ ( Bengaluru Central Jail ) ಸೇರಿರುವ ಆರೋಪಿಗಳು ಜೈಲಿನಲ್ಲೇ ಕೂತು, ಆಪ್ತರಿಗೆ ಕುಟುಂಬದ ಸದಸ್ಯರಿಗೆ ಕರೆ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಜೈಲಿನಲ್ಲಿ ಕೂತು ರೀಲ್ಸ್ ಬೇರೆ ಮಾಡುತ್ತಿದ್ದಾರೆ ಅನ್ನುವ ಆರೋಪಗಳು ಕೇಳಿ ಬಂದಿದೆ. ಹಾಗಾದ್ರೆ ಜೈಲಿನ ಅಧಿಕಾರಿಗಳು ಅದ್ಯಾವ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಯಥಾ ರಾಜ ತಥಾ ಪ್ರಜಾ ಅನ್ನುವಂತಿದೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡ್ರೆ ಹೀಗಾಗುತ್ತಿರಲಿಲ್ಲ.
ಇದನ್ನೂ ಓದಿ : ಜಮೀರ್ ಗೆ ಸೆಡ್ಡು : ಈದ್ಗಾ ಮೈದಾನಕ್ಕಾಗಿ ಜುಲೈ 12ಕ್ಕೆ ಚಾಮರಾಜಪೇಟೆ ಬಂದ್
ಈ ನಡುವೆ ಅಣ್ಣನ ಕೊಲೆಯ ಆರೋಪಿಗಳು ಜೈಲಿನಲ್ಲಿ ಎಂಜಾಯ್ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಹರ್ಷನ ಸಹೋದರಿ ಅಶ್ವಿನಿ, ನಾವು ಬದುಕಿದ್ದೂ ಸತ್ತ ಹಾಗಾಗಿದೆ. ಕಠಿಣ ಕ್ರಮದ ಭರವಸೆ ಏನಾಗಿದೆ ಅನ್ನುವುದು ಈಗ ಗೊತ್ತಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಅನ್ನುವ ನಂಬಿಕೆ ಕಳೆದು ಹೋಗಿದೆ. ಇನ್ನು ಜೈಲಿನ ಅಧಿಕಾರಿಗಳ ವರ್ಗಾವಣೆ ಮಾಡಿದರೆ ಸಾಲದು ಅವರ ಅಮಾನತು ಆಗಬೇಕು, ಒಂದು ವೇಳೆ ಸಸ್ಪಂಡ್ ಆಗದಿದ್ರೆ ನಾನೇ ಜೈಲಿನ ಮುಂದೆ ಧರಣಿ ಕೂರುತ್ತೇನೆ ಅಂದಿದ್ದಾರೆ.
ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ : 9ನೇ ಬಾರಿ ಅದುರಿದ ವಸುಂಧರೆ : ಆತಂಕದಲ್ಲಿ ಜನ
ಕೊಡಗು : ಜಿಲ್ಲೆಯಲ್ಲಿ ಭೂಮಿ ಕಂಪನ ( earthquake) ಮುಂದುವರಿದಿದ್ದು, ಜುಲೈ 2 ರಂದು 8ನೇ ಬಾರಿಗೆ ಕಂಪಿಸಿದ ಭೂಮಿ, ಜುಲೈ 4 ರಂದು ಮತ್ತೆ ಕಂಪಿಸಿದೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದೀಗ 9ನೇ ಬಾರಿಗೆ ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಭಾಗದಲ್ಲಿ ದೊಡ್ಡ ಶಬ್ಧದೊಂದಿಗೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ಚೆಂಬು ಗ್ರಾಮದಲ್ಲೇ ಪದೇ ಪದೇ ಭೂಮಿ ಕಂಪಿಸುತ್ತಿರುವ ಹಿನ್ನಲೆಯಲ್ಲಿ ನೈಸರ್ಗಿತ ವಿಕೋಪ ಅಧ್ಯಯನ ತಂಡ ಭೇಟಿ ಕೊಟ್ಟಿದ್ದು, ಚೆಂಬು ಪ್ರೌಢ ಶಾಲೆಯಲ್ಲಿ seismometer ಅಳವಡಿಸಲಾಗಿದೆ.
ಇನ್ನು ಕೊಡಗು ಭಾಗದಲ್ಲಿ ಸಂಭವಿಸಿದ ಭೂಕಂಪನದ ವಿವರ ಹೀಗಿದೆ
ಜೂನ್ 23 : ಬೆಳಗ್ಗೆ 4:37 – ಹಾಸನ ಸಮೀಪದ ಮಲುಗಾನಹಳ್ಳಿ – 3.4 ತೀವ್ರತೆ
ಜೂನ್ 26 : ಬೆಳಗ್ಗೆ 9:09 – ಕೊಡಗು ಸಮೀಪದ ಕರಿಕೆ – 3.2 ತೀವ್ರತೆ
ಜೂನ್ 28 : ಬೆಳಗ್ಗೆ 7:45 – ಕೊಡಗು ಸಮೀಪದ ಚೆಂಬು – 3 ತೀವ್ರತೆ
ಜೂನ್ 28 : ಸಂಜೆ 4: 40 – ಕೊಡಗು ಸಮೀಪದ ಚೆಂಬು – 3ರಷ್ಟು ತೀವ್ರತೆ
ಜೂನ್ 30 : ರಾತ್ರಿ 1:40 – ಸುಳ್ಯ ಸಮೀಪದ ಸಂಪಾಜೆ, ಪೆರಾಜೆ, ಗೂನಡ್ಕ – 1.8ರ ತೀವ್ರತೆ
ಜುಲೈ 1 : ಬೆಳಗ್ಗೆ – ಕೊಡಗು ಮತ್ತು ಸುಳ್ಯದ ಹಲವು ಗಡಿ ಭಾಗಗಳಲ್ಲಿ 1.8ರಷ್ಟು ತೀವ್ರತೆ
ಜುಲೈ 2 : ಮಧ್ಯಾಹ್ನ 1.21 – ಚೆಂಬು, ಕರಿಕೆ, ಪೆರಾಜೆ ಭಾಗಗಳಲ್ಲಿ 1.8ರಷ್ಟು ತೀವ್ರತೆ
ಜುಲೈ 2 : ರಾತ್ರಿ 8 :30 – ಚೆಂಬು, ಕರಿಕೆ, ಪೆರಾಜೆ ಪ್ರದೇಶಗಳಲ್ಲಿ 1.8ರ ತೀವ್ರತೆ
ಜುಲೈ 4 : ರಾತ್ರಿ 9.20 – ಚೆಂಬು, ಪೆರಾಜೆ ಪ್ರದೇಶಗಳಲ್ಲಿ ಭೂಕಂಪನ
Discussion about this post