Chamrajpet edga ground ಹೋರಾಟ ಇದೀಗ ತೀವ್ರಗೊಂಡಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟ, ಚಾಮರಾಜನಗರ ಆಟದ ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸಿ ಅಂದಿದೆ
ಬೆಂಗಳೂರು : Chamrajpet edga ground ವಿವಾದ ತೀವ್ರಗೊಂಡಿದೆ. ಬಿಬಿಎಂಪಿ ಯು ಟರ್ನ್ ಹೊಡೆದಿರುವುದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಈ ನಡುವೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಹೋರಾಟಕ್ಕೆ ಇಳಿದಿದೆ. ಚಾಮರಾಜಪೇಟೆ ಆಟದ ಮೈದಾನವನ್ನು ಸಾರ್ವಜನಿಕ ಆಟದ ಮೈದಾನವಾಗಿಯೇ ಉಳಿಸಬೇಕೆಂದು ನಾಗರಿಕರ ಒಕ್ಕೂಟ ಆಗ್ರಹಿಸಿದೆ.
ಈ ಸಂಬಂಧ ಭಾನುವಾರ ಜಂಗಮ ಮಠದಲ್ಲಿ ಸಭೆ ನಡೆಸಿದ ಒಕ್ಕೂಟ, ಚಾಮರಾಜಪೇಟೆ ಮೈದಾನ ಸಾರ್ವಜನಿಕರ ಮೈದಾನವಾಗಿ ಮತ್ತು ಮಕ್ಕಳ ಆಟದ ಮೈದಾನವಾಗಿ ಉಳಿಯಬೇಕು ಎಂದು ಆಗ್ರಹಿಸಿತು. ಈ ಸಭೆಯಲ್ಲಿ 25ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ಪಾಲ್ಗೊಂಡಿತ್ತು.
ಇದನ್ನೂ ಓದಿ : Miss India 2022 Sini Shetty : ಕರ್ನಾಟಕ ಮೂಲದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ 2022 ಕಿರೀಟ
ಎರಡು ಬಾರಿ ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಮಾಡಲು ಹಾಗೂ ಉಳಿದ ದಿನದಲ್ಲಿ ಆಟದ ಮೈದಾನವಾಗಿ ಬಳಕೆ ಮಾಡುವಂತೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದು ಇದೇ ಸಭೆಯಲ್ಲಿ ಮಾತನಾಡಿದ ಮುಖಂಡರು ಮಾಹಿತಿ ನೀಡಿದರು. ಇನ್ನು ಈ ವೇಳೆ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಗಣೇಶ್, ಈ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜುಲೈ 12 ರಂದು ಚಾಮರಾಜಪೇಟೆ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಬಂದ್ ಹಿನ್ನಲೆಯಲ್ಲಿ ಜುಲೈ 12ರ ಬೆಳಗ್ಗೆ 10 ಗಂಟೆಗೆ ಸಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ಬೃಹತ್ Rally ನಡೆಸಲು ನಿರ್ಧರಿಸಲಾಗಿದೆ.
Eknath shinde trust vote : ಮಹಾರಾಷ್ಟ್ರದಲ್ಲಿ ಇಂದು ವಿಶ್ವಾಸ ಪರೀಕ್ಷೆ : ಸುಲಭವಾಗಿ ಬಹುಮತ ಸಾಬೀತು ಸಾಧ್ಯತೆ
ಮುಂಬೈ : ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಏಕನಾಥ ಶಿಂಧೆ ( Eknath shinde trust vote ) ಇಂದು ವಿಶ್ವಾಸ ಮತ ಸಾಬೀತು ಪಡಿಸಲಿದ್ದಾರೆ. ಪ್ರಸ್ತುತ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಿರುವ ಏಕನಾಥ ಶಿಂಧೆ ( Eknath shinde ) ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾರೆ.
ಈಗಾಗಲೇ ವಿಧಾನಸಭಾ ಸಚಿವಾಲಯ ಶಿವಸೇನೆ ಶಾಸಕಾಂಗ ನಾಯಕನ ಸ್ಥಾನವನ್ನು ಏಕನಾಥ ಶಿಂಧೆಗೆ ಮತ್ತು ಶಾಸಕ ಭರತ್ ಗೊಂಗಾವಲೆಗೆ ಮುಖ್ಯ ಸಚೇತಕನ ಹುದ್ದೆಗೆ ಮಾನ್ಯತೆ ನೀಡಿದೆ. ಇದು ಉದ್ಧವೇ ಠಾಕ್ರೆಯ ಜೊತೆಗಿನ ಹೊಸ ಕಿತ್ತಾಟಕ್ಕೆ ಕಾರಣವಾಗಲಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಏಕನಾಥ ಶಿಂಧೆ ಸೇಫ್ ಆಗಿದ್ದಾರೆ. ಉದ್ಧವ್ ಠಾಕ್ರೆ ಪರಿಸ್ಥಿತಿ ಹೇಗಿದೆ ಅಂದ್ರೆ ಶಿವೇನೆಯ 39 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೂ ಶಿಂಧೆ ಮ್ಯಾಜಿಕ್ ಸಂಖ್ಯೆ ಗಡಿ ದಾಟಲಿದ್ದಾರೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಈಗ 1 ಸ್ಥಾನ ಖಾಲಿ ಇದೆ. ಹೀಗಾಗಿ ಬಹುಮತಕ್ಕೆ 144 ಸ್ಥಾನಗಳು ಬೇಕು. ಶಿಂಧೆ ಪರ 164 ಮತಗಳಿವೆ. ಈ ಪೈಕಿ 39 ಮತಗಳು ತಪ್ಪಿದರೆ, ಸಂಖ್ಯಾ ಬಲ 125ಕ್ಕೆ ಕುಸಿಯುತ್ತದೆ. ಆಗ ಸದನದ ಬಲ 248ಕ್ಕೆ ಬರುತ್ತದೆ. ಆ ವೇಳೆ ಬಹುಮತಕ್ಕೆ 125 ಮತಗಳು ಸಾಕಾಗುವುದರಿಂದ ಏಕನಾಥ ಶಿಂಧೆ ( Eknath shinde ) ಸರ್ಕಾರ ಸೇಫ್ ಆಗಿರುತ್ತದೆ. ಈ ನಡುವೆ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಉದ್ಧವ್ ಠಾಕ್ರೆಯ ಶೀವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಆದರೆ ಅಲ್ಲಿ ಅರ್ಜಿ ವಿಚಾರಣೆ ಇನ್ನೂ ನಡೆದಿಲ್ಲ. ಒಂದು ವೇಳೆ 16 ಶಾಸಕರೂ ಅನರ್ಹಗೊಂಡರೆ ಸದನದ ಸಂಖ್ಯಾ ಬಲ 148ಕ್ಕೆ ಕುಸಿಯುತ್ತದೆ. ಆಗ ಸದನದ ಬಲ 271ಕ್ಕೆ ಬಂದು ನಿಲ್ಲುತ್ತದೆ. ಆಗ ಬಹುಮತಕ್ಕೆ 136 ಮತಗಳು ಸಾಕಾಗುತ್ತದೆ.
Discussion about this post