ಸನ್ಯಾಸಿಯಾದವರು ಹೇಗಿರಬೇಕು ಅನ್ನುವುದಕ್ಕೆ ನಿದರ್ಶನ ಅನ್ನಿಸುವ ಖಾವಿದಾರಿಗಳು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹೇಗಿರಬಾರದು ಅನ್ನುವುದಕ್ಕೂ ಅಷ್ಟೇ ಮಂದಿದ್ದಾರೆ. ಹಳೆಯ ನ್ಯೂಸ್ ಪೇಪರ್ ಗಳನ್ನು ತಿರುವಿ ಹಾಕಿದ್ದಾರೆ ಸೆಕ್ಸ್ ಅನ್ನುವ ಆರೋಪ ಹೊತ್ತು ಕೋರ್ಟ್ ಮೆಟ್ಟಿಲೇರಿದವರು, ಪಲ್ಲಂಗದಾಟ ನಡೆಸಿ ಧರ್ಮದೇಟು ತಿಂದವರ ಪಟ್ಟಿಯೇ ನಮಗೆ ಸಿಗುತ್ತದೆ.
ಆದರೆ ಶಿರೂರು ಸ್ವಾಮೀಜಿ ಸತ್ತ ಮೇಲೂ ಕೇಳಿ ಬರುತ್ತಿರುವ ಆರೋಪಗಳು, ಅದಕ್ಕೆ ಮಾಧ್ಯಮಗಳಲ್ಲಿ ಸಿಗುತ್ತಿರುವ ಸಾಕ್ಷಿಗಳನ್ನು ನೋಡಿದರೆ ಶಿರೂರು ಶ್ರೀಗಳು ಹೀಗೆ ಮಾಡಬಾರದಿತ್ತು ಅನ್ನುವ ಉದ್ಗಾರ ಬಂದೇ ಬರುತ್ತದೆ.
ಅಷ್ಟ ಮಠಗಳ ನಂಬಿಕೆಗೆ ಪೆಟ್ಟು ಕೊಟ್ಟರಲ್ಲ ಶ್ರೀಗಳು ಅನ್ನುವ ಖೇದ ನಮ್ಮನ್ನು ಕಾಡುತ್ತಿದೆ. ಪಟ್ಟದ ದೇವರಿಗಾಗಿ ಕಿತ್ತಾಡಿದಾಗ ಪೇಜಾವರ ಹಿರಿಯ ಶ್ರೀಗಳು ಸೇರಿದಂತೆ ಅನೇಕ ಸನ್ಯಾಸಿಗಳ ಮೇಲೆ ಸುಮ್ಮನೆ ಗೂಬೆ ಕೂರಿಸಿ ಬಿಟ್ಟವು ಅನ್ನುವ ಬೇಸರ ಕಾಡುತ್ತಿದೆ.
ಆದರೂ ಶಿರೂರು ಶ್ರೀಗಳಿಗೆ ರಮ್ಯ ಶೆಟ್ಟಿ ಅನ್ನುವ ಮಹಿಳೆ ಆತ್ಮೀಯಳಾಗಿದ್ದಳು, ಮಠದ ಉಸ್ತುವಾರಿ ಆಕೆಯ ಕೈಯಲ್ಲಿತ್ತು ಅನ್ನುವ ಅಂಶ ಸುಳಿಗಾಳಿಯಂತೆ ತೇಲಿ ಹೋಯ್ತು ಬಿಟ್ಟರೆ, ಅದು ಬಿರುಗಾಳಿ ಯಾಕೆ ಆಗಲಿಲ್ಲ. ಅಷ್ಟ ಮಠಗಳ ಅನೇಕರಿಗೆ ಈ ವಿಷಯ ಗೊತ್ತಿದ್ದರೂ ಅದನ್ನು ಯಾರೊಬ್ಬರೂ ಯಾಕೆ ಬಹಿರಂಗಪಡಿಸಲಿಲ್ಲ ಅನ್ನುವ ಪ್ರಶ್ನೆಯೊಂದು ನಮ್ಮನ್ನು ಕಾಡುತ್ತಿದೆ.
ಮಠದ ಸಿಬ್ಬಂದಿ, ಶಿರೂರು ಶ್ರೀಗಳ ಶಿಷ್ಯರು, ಆತ್ಮೀಯರು, ಸ್ನೇಹಿತರು ಗಂಭೀರ ವಿಷಯವೊಂದನ್ನು ಅದು ಹೇಗೆ ಮುಚ್ಚಿಟ್ಟರು. ಅವರಿಗೆ ಗೊತ್ತಿಲ್ಲದೆ ಶ್ರೀಗಳು ಸಂಸಾರ ಸಾಗಿಸಿದ್ದು ಹೇಗೆ ಅನ್ನುವುದೇ ದೊಡ್ಡ ಪ್ರಶ್ನೆ.
ಇಂದು ಅವರಿಗೆ ಮಹಿಳೆಯರ ಸಹವಾಸವಿತ್ತು, ಅವರು ಮದ್ಯ ಸೇವಿಸುತ್ತಿದ್ದರು, ಅವರೊಬ್ಬ ಭ್ರಷ್ಟ ಸನ್ಯಾಸಿ ಎಂದು ಹೇಳುವ ಪೇಜಾವರ ಶ್ರೀಗಳು ಈ ಸತ್ಯವನ್ನು ಎಂದೋ ಹೇಳಬಹುದಿತ್ತು. ಆದರೆ ಅದ್ಯಾಕೆ ಮುಚ್ಚಿಟ್ಟರು. ಅಷ್ಟ ಮಠಗಳ ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ಎಲ್ಲಾ ನೋವುಗಳನ್ನು ಹಿರಿಯ ಯತಿಗಳು ನುಂಗಿ ಕೂತರೆ..?
ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀಗಳ ಅಂತಪುರದ ರಹಸ್ಯವನ್ನು ಇಂದು ಬರೆಯುತ್ತಿರುವ ಮಂದಿ ಅಂದು ಯಾಕೆ ಬರೆಯಲಿಲ್ಲ. ಶ್ರೀಗಳಿಂದ ಅವರಿಗೆ ಬೆದರಿಕೆಯ ಭಯವಿತ್ತಾ.
ಪದೇ ಪದೇ ಶಿರೂರು ಶ್ರೀಗಳ ವಿರುದ್ಧ ಅಷ್ಟ ಯತಿಗಳ ಪೈಕಿ ಕೆಲವರು ಸಭೆ ನಡೆಸಿದರೆ, ಶಿರೂರು ಶ್ರೀಗಳು, ಆ ಶ್ರೀಗೆ ಮಕ್ಕಳಿವೆ, ಈ ಶ್ರೀಗೆ ಪತ್ನಿ ಇದೆ ಎಂದು ಹೇಳುವುದು ಬೆದರಿಕೆಯ ತಂತ್ರವೇ, ಅಥವಾ ಅದರಲ್ಲೂ ಸತ್ಯ ಅಡಗಿದೆಯೇ..
ಈಗ ಬಯಲಾಗುತ್ತಿರುವ ಆಡಿಯೋ ಕ್ಲಿಪ್ ಗಳು ಶಿರೂರು ಶ್ರೀ ತನ್ನನ್ನು ತಾನು ರಕ್ಷಿಸಿಕೊಳ್ಳಲು ರಚಿಸಿದ ವ್ಯೂಹದ ಭಾಗವೇ.
ಅಷ್ಟ ಮಠಗಳ ಪೈಕಿ ಆರು ಮಠಗಳು ಶಿರೂರು ಶ್ರೀ ಅಕ್ರಮವನ್ನು ಬಯಲಿಗೆಳೆಯಲು ಪದೇ ಪದೇ ಸಭೆ ನಡೆಸಿ, ಒತ್ತಡ ತಂತ್ರ ಹೇರಲು ಸಜ್ಜಾಗುತ್ತಿದ್ದಂತೆ ಶ್ರೀಗಳು ಇನ್ಮುಂದೆ ಬದುಕು ಕಷ್ಟವೆಂದು ನಿರ್ಧರಿಸಿದರೆ.
ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕಾಡುತ್ತಿದೆ. ಪೊಲೀಸರ ತನಿಖೆ ಅವರ ಸಾವಿನ ಕುರಿತಂತೆ ನಡೆಯುತ್ತಿದೆ. ಆದರೆ ಉಳಿದೆಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಹೋಗಲಿದೆ.
ಎಲ್ಲಾ ಸತ್ಯ ಗೊತ್ತಿರುವುದು ಪೊಡವಿಗೊಡೆಯ ಶ್ರೀಕೃಷ್ಣನಿಗೆ ಮಾತ್ರ. ಶ್ರೀಕೃಷ್ಣನ ಆಟದ ಮುಂದೆ ಮಕಾಡೆ ಮಲಗಿದ ಘಟಾನುಘಟಿಗಳಿಗೆ ಲೆಕ್ಕವಿಲ್ಲ. ಇನ್ನು ಇದ್ಯಾವ ಲೆಕ್ಕ.
ಒಟ್ಟಿನಲ್ಲಿ ಶಿರೂರು ಶ್ರೀಗಳು ಮಾಡಿಕೊಂಡ ಎಡವಟ್ಟಿನಿಂದ ಉಳಿದ ಸ್ವಾಮೀಜಿಗಳನ್ನೂ ಸಂಶಯದಿಂದ ನೋಡುವಂತಾಗಿದೆ.
shiroor swamiji ಸಾವಿಗೆ ದೈವವನ್ನು ಆರೋಪಿ ಮಾಡಬೇಡಿ
Discussion about this post