ಮಂಗಳೂರು : ಹಿಂದೂ ದೇವರಿಗೆ ಅವಮಾನ ಮಾಡಿದ ಆರೋಪದ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇದೀಗ ದೂರು ದಾಖಲಾಗಿದೆ.
ಕಾಂಗ್ರೆಸ್ ನ ಐಟಿ ಸೆಲ್ ಕಾರ್ಯದರ್ಶಿ ಶೈಲಜ ಅಮರನಾಥ್, ಪ್ರೀತು ಶೆಟ್ಟಿ, ಅನಿಲ್, ಪುನೀತ್ ಎಂಬವರ ವಿರುದ್ಧ ಪ್ರವೀಣ್ ಕುಮಾರ್ ಅನ್ನುವವರು ದೂರು ದಾಖಲಿಸಿದ್ದಾರೆ.
ದೂರಿನ ಅಂಶಗಳನ್ನು ಅವರು ಸಲ್ಲಿಸಿರುವ ಲಿಖಿತ ದಾಖಲೆಯಲ್ಲೇ ಗಮನಿಸಬಹುದಾಗಿದೆ.
ಸಂಸ್ಕೃತಿಯ ಆಸ್ತಿ ರಾಮಾಯಾಣ ಮಹಾಭಾರತ, ಇದಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ. ವಾಲ್ಮೀಕಿಗೆ ಬಿಜೆಪಿ ಸರ್ಕಾರ ಅಪಮಾನ ಎಸಗಿದೆ. ಈ ಬಗ್ಗೆ ಹೋರಾಟ ಮಾಡೋಣ ಎಂದು ಇತ್ತೀಚೆಗೆ ಡಿಕೆಶಿ ಕರೆ ಕೊಟ್ಟಿದ್ದರು. ಈಗ ಕಾಂಗ್ರೆಸ್ ನಾಯಕಿಯೇ ರಾಮನಿಗೆ, ಸೀತೆಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹಾಗಾದ್ರೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಾರೆಯೇ..?
Discussion about this post