ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತಗ್ಗಿದ ಬೆನ್ನಲ್ಲೇ ಒಮಿಕ್ರೋನ್ ರೂಪಾಂತರಿ ವೈರಸ್ ಮೂರನೇ ಅಲೆಯ ಭೀತಿ ಹುಟ್ಟಿಸಿದೆ. ಭಾರತದಲ್ಲಿ ಈಗಾಗಲೇ ಸಾಕಷ್ಟು ಮಂದಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವ ಕಾರಣ ಒಮಿಕ್ರೋನ್ ದೊಡ್ಡ ಮಟ್ಟದಲ್ಲಿ ಅಪಾಯ ತರಲಾರದು ಅನ್ನುವುದು ವಿಶ್ವಾಸ. ಆದರೆ ಲಸಿಕೆ ಪಡೆಯದ ಮಕ್ಕಳ ಕಥೆ ಏನು ಅನ್ನುವುದು ಎಲ್ಲರ ಪ್ರಶ್ನೆ. ಈಗಾಗಲೇ ಶಾಲೆಗಳನ್ನು ತೆರೆಯಲಾಗಿದೆ. ಮಕ್ಕಳು ಮುಕ್ತವಾಗಿ ಓಡಾಡುತ್ತಿದ್ದಾರೆ ಅನ್ನುವುದು ಪೋಷಕರ ಆತಂಕ.
ಹಾಗೇ ನೋಡಿದರೆ ಮಕ್ಕಳಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಎಲ್ಲಾ ಸಿದ್ದತೆಗಳು ನಡೆದಿದೆ. ಸೀರಂ, ಭಾರತ್ ಬಯೋ ಟೆಕ್, ‘ಝೈಕೋವ್ ಡಿ’, ಎಂ.ಆರ್.ಎನ್. ಎ ಸೇರಿದಂತೆ ಹಲವು ಕಂಪನಿಗಳ ಲಸಿಕೆಗಳು ಮಕ್ಕಳಿಗಾಗಿ ಸಿದ್ದತವಾಗಿದೆ. ಅದರಲ್ಲೂ ಕೆಲ ಸಂಸ್ಥೆಯ ಲಸಿಕೆ ಈಗಾಗಲೇ ಅನುಮೋದನೆಯನ್ನೂ ಪಡೆದಿದೆ. ಆದರೆ ಮಕ್ಕಳಿಗೆ ಲಸಿಕೆ ಹಾಕಿಸುವ ಕುರಿತಂತೆ ಸರ್ಕಾರ ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ. ತಜ್ಞರು ಇನ್ನೂ ಪೂರ್ಣ ಪ್ರಮಾಣದಲ್ಲಿ ಹಸಿರು ನಿಶಾನೆ ನೀಡದಿರುವ ಕಾರಣ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗಿಲ್ಲ. ಆದರೆ ದೇಶದ ಮಕ್ಕಳಿಗೆ ಶಾಲೆಗಳಲ್ಲಿ ಲಸಿಕೆ ನೀಡುವ ಯೋಜನೆ ಸಿದ್ದವಾಗಿದೆ.
ಈ ನಡುವೆ ಮುಂದಿನ ಆರು ತಿಂಗಳ ಒಳಗಾಗಿ ಮಕ್ಕಳಿ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗುವ ವಿಶ್ವಾಸವನ್ನು ಸೀರಂ ಇನ್ಸ್ಟಿಟ್ಯೂಟ್ನ ಸಿಇಒ ಆದರ್ ಪೂನಾವಾಲಾ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮಕ್ಕಳ ವಿಷಯದಲ್ಲಿ ಆತಂಕದ ಪರಿಸ್ಥಿತಿ ಈಗಿಲ್ಲ. ಹಾಗಿದ್ದರೂ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡೋ ಲಸಿಕೆಯನ್ನು ಸೀರಂ ಬಿಡುಗಡೆ ಮಾಡಲಿದೆ ಎಂದರು.
ಮಕ್ಕಳಿಗೆ ನೀಡೋ ಲಸಿಕೆ ಕುರಿತಂತೆ ಎರಡು ಕಂಪನಿಗಳು ಭಾರತದಲ್ಲಿ ಅನುಮತಿ ಪಡೆದಿದೆ. ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೂ, ಕೋವ್ಯಾಕ್ಸಿನ್ 2 ವರ್ಷ ಮೇಲ್ಪಟ್ಟಎಲ್ಲಾ ವಯೋಮಾನದ ಮಕ್ಕಳಿಗೂ ನೀಡಬಹುದಾಗಿದೆ. ಹೀಗಾಗಿ ಮಕ್ಕಳಿಗೆ ಲಸಿಕೆ ವಿತರಣೆ ಸಂಬಂಧ ಶೀಘ್ರದಲ್ಲೇ ಅನುಮೋದನೆ ಸಿಗೋ ಸಾಧ್ಯತೆ ಇದೆ ಎಂದು ಪೂನಾವಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Discussion about this post