ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲೇ ಸಾವರ್ಕರ್ ಫೋಟೋ ಇದೆ. ಹಾಗಿದ್ದ ಮೇಲೆ ಉಳಿದ ಕಡೆ ಅದ್ಯಾಕೆ ಗಲಾಟೆ ( Sarvakar Photo Controversy)
ಶಿವಮೊಗ್ಗ : ವೀರ ಸಾವರ್ಕರ್ ಫೋಟೋ ಇಡುವ ವಿಚಾರದಲ್ಲಿ ಅಭಿಪ್ರಾಯ ವ್ಯತ್ಯಾಸಗಳಿದ್ರೆ ಅದನ್ನು ಕಾನೂನು ಮೂಲಕ ಬಗೆ ಬಗೆಹರಿಸಿಕೊಳ್ಳಬೇಕು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಾಣಬೇಕು. ಅದನ್ನು ಬಿಟ್ಟು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು ಅಕ್ಷಮ್ಯ ಅಪರಾಧ. ( Sarvakar Photo Controversy)
ಶಿವಮೊಗ್ಗದಲ್ಲೂ ಹೀಗೆ ಆಗಿದೆ. ಸಾವರ್ಕರ್ ವಿಚಾರದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಶಿವಮೊಗ್ಗ ನಗರ ಮತ್ತೆ ಉದ್ವಿಗ್ನಗೊಂಡಿದೆ.
ಇದನ್ನು ಓದಿ : Ashwath narayan: ಅಶ್ವಥ್ ನಾರಾಯಣ್ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆದ ಕುಮಾರಸ್ವಾಮಿ
ನಗರದ ಅಮೀರ್ ಅಹಮದ್ ವೃತ್ತದಲ್ಲಿ ಇರಿಸಲಾಗಿದ್ದ ಸಾವರ್ಕರ್ ಫೋಟೋ ಇಡೀ ವಿವಾದಕ್ಕೆ ಕಾರಣವಾಗಿದ್ದು, ಸಾವರ್ಕರ್ ಫೋಟೋ ತೆರವು ( ಮಾಡಿ ಟಿಪ್ಪು ಫೋಟೋ ಇಡಲು ಹೊರಟ ವೇಳೆ ಎರಡು ಕೋಮಿನ ನಡುವೆ ಗಲಾಟೆಯಾಗಿದೆ.
ಪರಿಸ್ಥಿತಿಯ ಬಗ್ಗೆ ಮೊದಲೇ ಅರಿತಿದ್ದ ಪೊಲೀಸರು ಹೆಚ್ಚುವರಿ ಭದ್ರತೆ ಮಾಡಿದ್ದರು. ಹೀಗಾಗಿ ತಕ್ಷಣ ಎಚ್ಚೆತ್ತ ಪೊಲೀಸರು ಲಾಠಿ ಬಿಸಿ ಮುಟ್ಟಿಸಿದ್ದಾರೆ.
ಒಂದು ಹಂತದಲ್ಲಿ ಸಾರ್ವಕರ್ ಫೋಟೋ ತೆಗೆಯಲು ಒಪ್ಪಿದ ಪೊಲೀಸರು ಟಿಪ್ಪು ಫೋಟೋವನ್ನು ಇಡಲು ನಿರಾಕರಿಸಿದ್ದರು. ಈ ವೇಳೆಯಲ್ಲಿ ಜಟಾಪಟಿ ಉಂಟಾಗಿದೆ. ವೀರ ಸಾರ್ವಕರ್ ಫೋಟೋವನ್ನು ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡಿರುವ ಹಿಂದೂಪರ ಸಂಘಟನೆ ಕಾರ್ಯಕರ್ತರು ಕೂಡಾ ಪ್ರತಿಭಟನೆ ಪ್ರಾರಂಭಿಸಿದರು. ಕೊನೆಗೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
Shivamogga Savarkar Poster Row: ಶಾಂತಿ ಕದಡಿದ ಭಾವಚಿತ್ರ ಗಲಾಟೆ : ಸೆಕ್ಷನ್ 144 ಜಾರಿಗೊಳಿಸಿದ ಜಿಲ್ಲಾಡಳಿತ
ವೀರ ಸಾವರ್ಕರ್ ಭಾವಚಿತ್ರದ ( Shivamogga Savarkar Poster Row) ನೆಪವೊಡ್ಡಿ ಶಾಂತಿ ಕದಡಲು ಸಂಘಟನೆಯೊಂದು ಪ್ರಯತ್ನ ಮುಂದುವರಿಸಿದೆ
ಶಿವಮೊಗ್ಗ : ನಗರದಲ್ಲಿ ವೀರ ಸಾವರ್ಕರ್ ಭಾವಚಿತ್ರ ತೆರವು ಹಿನ್ನೆಲೆಯಲ್ಲಿ ( Shivamogga Savarkar Poster Row) ನಡೆದ ಗುಂಪು ಘರ್ಷಣೆಯಲ್ಲಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ನಡೆದಿದೆ. ಗಾಯಗೊಂಡವನ್ನು ಪ್ರೇಮ್ ಸಿಂಗ್( 22) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಗಾಯಗೊಂಡಿರುವ ಪ್ರೇಮ್ ಸಿಂಗ್, ಉಪ್ಪಾರ ಕೇರಿ ನಿವಾಸಿ ಎಂದು ಗೊತ್ತಾಗಿದೆ. ದುಷ್ಕರ್ಮಿಗಳ ಗುಂಪೊಂದು ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿ ಬಳಿಕ ಚಾಕುವಿನಿಂದ ಇರಿದಿತ್ತು, ಮನೆಯ ಮುಂದೆ ನಿಂತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿ ಚಾಕುವಿನಿಂದ ಇರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೂ ಮುನ್ನ ವೀರ ಸಾವರ್ಕರ್ ಫೋಟೋ ಇಡೋ ವಿಚಾರದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ನಿನ್ನೆಯಷ್ಟೇ ಮಾಲ್ ಒಂದರಲ್ಲಿ ಸಾವರ್ಕರ್ ಫೋಟೋ ಇಟ್ಟಿರುವ ಬಗ್ಗೆ ತಗಾದೆ ತೆಗೆಯಲಾಗಿತ್ತು. ಇದೀಗ ಶಿವಮೊಗ್ಗ ನಗರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲೇ ಸಾವರ್ಕರ್ ಫೋಟೋ ಇಡಲಾಗಿದೆ. ಅಂದ ಮೇಲೆ ಬೇರೆ ಕಡೆ ಫೋಟೋ ಇಡುವುದಕ್ಕೆ ಆದ್ಯಾಕೆ ರಗಳೆ ಅನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.
Discussion about this post