sanath krishna muliya ಈ ಹಿಂದೆ ಕರ್ನಾಟಕದಲ್ಲೂ ಕಾರ್ಯನಿರ್ವಹಿಸಿದ್ದರು ಅನ್ನುವುದೇ ಹೆಮ್ಮೆಯ ವಿಚಾರ
ಪುತ್ತೂರು : ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತಂದ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅವೆಲ್ಲವೂ ರಾಜಕೀಯ ಲಾಭದ ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಗಳಾಗಿರುವ ಕಾರಣ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಚೀತಾಗಳನ್ನು ತರುವ ಕುರಿತಂತೆ ಬಹುತೇಕ ವನ್ಯಜೀವಿ ಸಂರಕ್ಷಕರು ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಕೆಲ ಪರಿಸರ ಹೋರಾಟಗಾರರು, ಈ ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನದಲ್ಲಿ ಬಿಟ್ಟರೆ ಒಂದೋ ಜನರು ಕೊಲ್ಲುತ್ತಾರೆ, ಅಥಾವ ಇತರ ಪ್ರಾಣಿಗಳು ಕೊಲ್ಲುತ್ತವೆ, ಇಲ್ಲವಾದರೆ ಹಸಿವಿನಿಂದ ಸಾಯುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ( ( sanath krishna muliya)
ಈ ಹಿಂದೆಯೂ ಭಾರತದಲ್ಲಿದ್ದ ಚೀತಾಗಳು ಮರೆಯಾಗಲು ಇಲ್ಲಿನ ಮಾನವ ಸಂಘರ್ಷವೇ ಕಾರಣ, ಹಿಂದಿಗಿಂತ ಈಗ ಮಾನವ ಸಂಘರ್ಷ ಮತ್ತಷ್ಟು ತೀವ್ರವಾಗಿದೆ. ಹೀಗಿರುವ ಸಂದರ್ಭದಲ್ಲಿ ಚೀತಾಗಳ ರಕ್ಷಣೆ ಸುಲಭದ ಮಾತಲ್ಲ ಅನ್ನೋದು ಕೆಲ ವನ್ಯಜೀವಿ ತಜ್ಞರ ಮಾತು.
ಹಾಗೇ ನೋಡಿದರೆ ಇವರ ಮಾತುಗಳಲ್ಲಿ ಅರ್ಥವಿದೆ. ಕಾಡುಗಳನ್ನು ಉಳಿಸುವ ಬಗ್ಗೆ ಕಾಳಜಿ ಹೆಚ್ಚಾಗದ ಹೊರತು ವನ್ಯಜೀವಿಗಳಿಗೆ ಉಳಿವಿಲ್ಲ. ವರ್ಷದಿಂದ ವರ್ಷಕ್ಕೆ ಕಾಡು ನಾಶವಾಗುತ್ತಿರುವ ವೇಳೆ ಮುಂದಿನ ದಿನಗಳಲ್ಲಿ ಚೀತಾಗಳ ಕಥೆಯೇನು.
ಅವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡುವುದಾದರೆ ನಮೀಬಿಯಾದಿಂದ ಭಾರತಕ್ಕೆ ಚಿರತೆಗಳನ್ನು ತಂದ ತಂಡದಲ್ಲಿ ಕರ್ನಾಟಕ ಪಶುವೈದ್ಯ ಡಾ.ಸನತ್ ಕೃಷ್ಣ ಮುಳಿಯ ಅವರು ಕೂಡಾ ಇದ್ದರು ಅನ್ನುವ ಹೆಮ್ಮೆಯ ವಿಷಯ ಹೊರ ಬಿದ್ದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದವರಾದ ಇವರು ನವದೆಹಲಿಯ ನ್ಯಾಷನಲ್ ಝೂವಾಲಾಜಿಕಲ್ ಪಾರ್ಕ್ನಲ್ಲಿ ಸಹಾಯಕ ಪಶುವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದಿಗೂ ಚಿನ್ನದ ವ್ಯಾಪಾರದಲ್ಲಿ ಮುಳಿಯ ದೊಡ್ಡ ಮಟ್ಟದ ಬ್ರ್ಯಾಂಡ್ ಆಗಿ ಹೊರ ಹೊಮ್ಮಿದೆ.
#DDExclusive | Dr Sanath Muliya, Wildlife health expert, NTCA speaks to DD India correspondent @tapasjournalist.#CheetahIsBack @moefcc @IndiainNamibia @CCFCheetah pic.twitter.com/WZ3MuY0HCS
— DD India (@DDIndialive) September 16, 2022
ಡಾ.ಸನತ್ಕೃಷ್ಣ ಮುಳಿಯ ಅವರು ದಿ.ಕೇಶವ ಭಟ್ ಮುಳಿಯ- ಉಷಾ ದಂಪತಿಯ ಪುತ್ರ. ಅವರ ಪತ್ನಿ ಡಾ.ಪ್ರಿಯಾಂಕಾ ಜಾಸ್ತಾ ಅವರೂ ಪಶುವೈದ್ಯೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ..
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿ.ಯು ಹಾಗೂ ಪದವಿ ಶಿಕ್ಷಣ ಪಡೆದ ಬಳಿಕ ಸನತ್ ಕೃಷ್ಣ ಅವರು ಬೆಂಗಳೂರಿನಲ್ಲಿ ಪಶುವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದು, ಕೆಲ ಕಾಲ ಬನ್ನೇರುಘಟ್ಟ ಉದ್ಯಾನದಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಆಫ್ರಿಕಾದಲ್ಲಿ ಅಧ್ಯಯನ ನಡೆಸಿ, ಅಲ್ಲೂ ಕೆಲಕಾಲ ಪಶುವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಹುಲಿಗಳಿಗೆ ಹಾಗೂ ಇತರ ವನ್ಯಜೀವಿಗಳಿಗೆ ರೇಡಿಯೊ ಕಾಲರ್ ಅಳವಡಿಕೆ, ಸ್ಮೃತಿ ತಪ್ಪಿಸುವ ಚುಚ್ಚುಮದ್ದು ನೀಡುವಿಕೆಯೂ ಸೇರಿದಂತೆ ಅನೇಕ ಪ್ರಮುಖ ಕಾರ್ಯಯೋಜನೆಗಳಲ್ಲಿ ಸನತ್ ಹೆಸರು ಮುಂಚೂಣಿಯಲ್ಲಿದೆ.
ಶಾರ್ಪ್ ಶೂಟರ್ ಆಗಿರುವ ಸನತ್ ಕೃಷ್ಣ, ಅನೇಕ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಅರಿವಳಿಕೆ ತಜ್ಞರಾಗಿ ಕಾರ್ಯನಿರ್ವಹಿಸಿದ್ದಾರೆ.
Discussion about this post