ನಾವು ಪ್ರಚಾರಕ್ಕೆ ಬಂದ್ವಿ ಅಂತಾ ಸಿನಿಮಾದವ್ರನ್ನ ನಂಬಬೇಡಿ ಅಂತಾರೆ. ನಾನೂ ಕೂಡ ಸಿನಿಮಾ ನಿರ್ಮಾಪಕ ಅಂತಾರೆ.ಸಿನಿಮಾದವ್ರನ್ನ ನಂಬಬಾರದು ಅಂದ್ರೆ ಇಬ್ರನ್ನೂ ನಂಬಬಾರದು. ಯಾರನ್ನ ನಂಬಬೇಕು ಅಂತಾ ಒಂದ್ಸಲ ಡಿಸೈಡ್ ಮಾಡಿ ಎಂದು ಸಿಎಂ ಕುಮಾರಸ್ವಾಮಿಗೆ ಯಶ್ ಟಾಂಗ್ ಕೊಟ್ಟಿದ್ದಾರೆ.
ಈ ಚುನಾವಣೆ ಸ್ವಾಭಿಮಾನದ ಚುನಾವಣೆ ಅಂದ್ರೆ ಕೆಲವರು ಸ್ವಾಭಿಮಾನ ಪದವನ್ನು ಸ್ವಾಭಿಮಾನವಂತೆ..ಸ್ವಾಭಿಮಾನ ಅಂತೆ ಲೇವಡಿ ಮಾಡುತ್ತಿದ್ದಾರೆ. ಸ್ವಾಭಿಮಾನ ಇರುವವರೇ ಇಂದು ಇಲ್ಲಿಗೆ ಬಂದು ಇಂದು ನಿಂತಿದ್ದಾರೆ.
500 ರೂ. ಮೊಬೈಲ್ ಆಫರ್ ಕೊಟ್ಟವರು ಇಂದು ಇಲ್ಲಿಗೆ ಬಂದಿಲ್ಲ. ಆಫರ್ ಕೊಟ್ಟರೆ ಬಿಸಿಲಿದೆ ಟೋಪಿ ಕೊಡಿ, ಒಂದೊಂದು ಬಾಟಲಿ ನೀರು ಕೊಡಿ. ಮೊದಲು ಪೇಮೆಂಟ್, ಒಂಚೂರು ಮಜ್ಜಿಗೆ ಎಂದು ಕೇಳುತ್ತಾರೆ. ಆದರೆ ಇಂದು ಜನರು ಬೆವರು ಸುರಿಸಿ ದುಡಿದಿದ್ದ ಹಣವನ್ನು ಅಕ್ಕ ಅವರಿಗೆ ತಂದು ಕೊಡುತ್ತಿದ್ದರು. ಅದರಲ್ಲಿ ಅವರ ಬೆವರು ಅಂಟಿತ್ತು. ಹೀಗಾಗಿ ಸ್ವಾಭಿಮಾನ ಅಂದ್ರೆ ಏನು ಅಂತಾ ತೋರಿಸುತ್ತೇವೆ.
ಮಾತು ಎತ್ತಿದ್ದರೆ ಆ ಜಾತಿ ಈ ಜಾತಿ ಅನ್ನುತ್ತಾರೆ. ಒರ್ಜಿನಲ್ ಮಂಡ್ಯದ ಗೌಡ ಅಭಿಷೇಕ್ ಕಣ್ರಯ್ಯ ಅಂದ ಯಶ್, ಅಂಬರೀಶ್ ಕುಟುಂಬ ಮಂಡ್ಯದ ಸೊತ್ತು, ಅಭಿಷೇಕ್ Spare ಎತ್ತಲ್ಲ… ಅವನೂ ಕೂಡಾ ಮಂಡ್ಯದ ಸೊತ್ತು ಎಂದರು.
ಇದೇ ವೇಳೆ ಮೇ 29 ಏನು ಎಂದು ಯಶ್ ಪ್ರಶ್ನಿಸುತ್ತಿದ್ದಂತೆ ರೆಬೆಲ್ ಸ್ಟಾರ್ ಬರ್ತ್ ಡೇ ಎಂದು ಜನಸಾಗರ ಕೂಗಿ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಯಶ್ ಅಂಬರೀಶ್ ಮೇ 23ಕ್ಕೆ ಗಿಫ್ಟ್ ಕೊಡಬಹುದು ಆದರೆ ಕರೆಕ್ಟ್ ಆಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.