ಜೈಪುರ : ರಾಜಕಾರಣಿಗಳ ನಾಲಗೆಯೊಂದು ಹಿಡಿತದಲ್ಲಿರುತ್ತಿದ್ರೆ ಈ ದೇಶ ಎಲ್ಲೋ ಇರುತ್ತಿತ್ತು. ಆದರೇನು ಮಾಡುವುದು, ರಾಜಕಾರಣಿಗಳ ಹೊಲಸು ಬಾಯಿ ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಮೆದುಳು ಮತ್ತು ನಾಲಗೆಯ ಕನೆಕ್ಷನ್ ತಪ್ಪಿರುವ ರಾಜಕಾರಣಿಗಳೇ ಈ ದೇಶಕ್ಕೆ ಮಾರಕವಾಗುತ್ತಿದ್ದಾರೆ. ಅದಕ್ಕೆ ಹೊಸ ಉದಾಹರಣೆ ರಾಜಸ್ಥಾನ ಸಚಿವ ರಾಜೇಂದ್ರ ಗುಢಾ.
ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಇತ್ತೀಚೆಗೆ ಭೇಟಿ ಕೊಟ್ಟಿದ್ದ ಸಚಿವ ರಾಜೇಂದ್ರ ಗುಢಾ ಅವರಿಗೆ ಸ್ಥಳೀಯರು ರಸ್ತೆಯ ಪರಿಸ್ಥಿತಿ ಕುರಿತಂತೆ ದೂರು ನೀಡಿದ್ದಾರೆ. ಅಷ್ಟೇ ಸಾಕಿತ್ತು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಿಟ್ಟು ಅವಕಾಶ ಸಿಕ್ತು ಅಂದುಕೊಂಡ ಗುಢಾ, ನಟಿ ಕತ್ರಿನಾ ಕೈಫ್ ಅವರ ಕೆನ್ನೆಗಳಂತೆ ರಸ್ತೆಗಳು ನಯವಾಗಿರಬೇಕು ಎಂದು ಸಲಹೆ ಕೊಟ್ಟಿದ್ದಾರೆ.
ಅದಕ್ಕೂ ಮೊದಲು ರಸ್ತೆಗಳ ಬಿಜೆಪಿ ಸಂಸದೆ ಹೇಮಾಮಾಲಿನಿ ಕೆನ್ನೆಗಳಂತೆ ನೈಸ್ ಆಗಿ ಸಿದ್ದಗೊಳಿಸಬೇಕು ಅಂದಿದ್ದರು. ಅದ್ಯಾಕೋ ಜನರಿಂದ ಚಪ್ಪಾಳೆ ಬರಲಿಲ್ಲ, ಹೀಗಾಗಿ ಕತ್ರಿನಾ ಕೈಫ್ ಅವರ ಕೆನ್ನೆಗಳಂತೆ ರಸ್ತೆಗಳು ನಯವಾಗಿರಬೇಕು ಅಂದಿದ್ದಾರೆ. ಅಷ್ಟೇ ಸಭೆಯಿಂದ ಶಿಳ್ಳೆ, ಚಪ್ಪಾಳೆ ಭರ್ಜರಿಯಾಗಿ ಕೇಳಿ ಬಂದಿದೆ.
#WATCH | "Roads should be made like Katrina Kaif's cheeks", said Rajasthan Minister Rajendra Singh Gudha while addressing a public gathering in Jhunjhunu district (23.11) pic.twitter.com/87JfD5cJxV
— ANI (@ANI) November 24, 2021
Discussion about this post