ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ, ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ನಿರೀಕ್ಷಿತ ಮಟ್ಟದ TRPಯನ್ನು ತಂದುಕೊಡವಲ್ಲಿ ಯಶಸ್ವಿಯಾಗಿಲ್ಲ. ಕನ್ನಡದ ಜನರಿಗೆ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಅಲರ್ಜಿ ಹೆಚ್ಚಾಗುತ್ತಿರುವುದರ ಲಕ್ಷಣ ಇದು.
ಮಹಾಮನೆಗೆ ಹೋದ ಮಂದಿ ವೀಕ್ಷಕರನ್ನು ರಂಜಿಸುವಲ್ಲಿ ವಿಫಲರಾಗಿದ್ದಾರೆ. ಹೋದ ಸ್ಪರ್ಧಿಗಳಿಗೆ ಮನೋರಂಜನೆ ಕೊಡುವ ತಾಕತ್ತಿದೆ. ಆದರೆ ತನ್ನತನವನ್ನು ಮರೆತಿರುವ ಸ್ಪರ್ಧಿಗಳು ಗೆಲುವಿನ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಆದರೆ ಅದು ಗೆಲುವಿನ ಕಡೆಯ ಯಾತ್ರೆ ಅನ್ನುವುದಕ್ಕಿಂತ ಸೋಲಿನ ಕಡೆಗಿನ ಪಯಣದಂತಾಗಿದೆ.
ಹೀಗಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದಿಷ್ಟು ರಂಗು ತುಂಬುವ ಸಲುವಾಗಿ ಆರ್ ಜೆ ಪೃಥ್ವಿ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಕಳುಹಿಸಿಕೊಡಲಾಗಿದೆ.
ಪೃಥ್ವಿ ಮಾನವೀಯತೆಯ ಆಗರ. Fever 104 ಸಂಸ್ಥೆಯಲ್ಲಿ RJ ಆಗಿರುವ ಪೃಥ್ವಿಗೆ ದೊಡ್ಡ ದೊಡ್ಡ ಮಂದಿಯ ಸಂಪರ್ಕವಿದೆ. ಹಾಗಂತ ಕಚೇರಿಯ ಆಫೀಸ್ ಬಾಯ್ ಇರಬಹುದು, ಟೀ ಕೊಡುವವರಿರಬಹುದು ಅವರನ್ನು ಅಷ್ಟೇ ಪ್ರೀತಿಯ ಕಾಣುತ್ತಾರೆ ಅನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು.
ನೊಂದ ಮನಸ್ಸುಗಳಿಗೆ ಸಾಂತ್ವಾನ ಹೇಳುವುದರಲ್ಲಿ ಎತ್ತಿದ ಕೈ ಹೊಂದಿರುವ ಪೃಥ್ವಿ. ಕೆಲವೊಮ್ಮೆ ರಾಂಗ್ ಆಗ್ತಾರೆ. ಹೇಗೆ ರಾಂಗ್ ಆಗ್ತಾರೆ ಅನ್ನುವುದನ್ನು ತಿಳಿಯಬೇಕಾದರೆ ಬಿಗ್ ಬಾಸ್ ಕಾರ್ಯಕ್ರಮ ನೋಡಬೇಕು.
Discussion about this post