ಒಂದು ಕಾಲದಲ್ಲಿ ಭಾರತದ ಹೆಮ್ಮೆಯ ಪ್ರತೀಕ ಅನ್ನಿಸಿಕೊಂಡಿದ್ದ ಏರ್ ಇಂಡಿಯಾ, ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಸಾಲದ ಭಾರದಿಂದ ನರಳುವಂತಾಗಿದೆ. ಸಾಲದ ಭಾರಕ್ಕೆ ಕುಸಿಯುತ್ತಿರುವ ಏರ್ ಇಂಡಿಯಾ ಉಕ್ಕಿನ ಹಕ್ಕಿಯ ಸಾಮ್ರಾಜ್ಯವನ್ನು ಖಾಸಗಿಯವರಿಗೆ ವಹಿಸದೇ ಹೋದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಕಿಂಗ್ ಫಿಶರ್ ಏರ್ ಲೈನ್ಸ್ ಸ್ಥಿತಿ ಏರ್ ಇಂಡಿಯಾಗೂ ಬಂದು ಬಿಡುತ್ತದೆ.
ಹೀಗಾಗಿ ಏರ್ ಇಂಡಿಯಾ ಮಾರಾಟಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಬಿಡ್ ಕರೆದಿದ್ದು, ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಹಾಗೂ ಸ್ಪೈಸ್ ಜೆಟ್ ಪೈಪೋಟಿಗೆ ನಿಂತಿತ್ತು. ಈ ಪೈಕಿ ಈ ಬಿಡ್ ಗೆಲ್ಲುವುದು ಟಾಟಾ ಸನ್ಸ್ ಗೆ ಅತ್ಯಂತ ಅನಿವಾರ್ಯವಾಗಿದೆ. ಕಾರಣ ಈ ಏರ್ ಇಂಡಿಯಾ ಒಂದು ಕಾಲದಲ್ಲಿ ಟಾಟಾ ಏರ್ ಲೈನ್ಸ್ ಆಗಿತ್ತು. ಇದೀಗ ಏರ್ ಇಂಡಿಯಾವನ್ನು ಖರೀದಿಸುವಲ್ಲಿ ಟಾಟಾ ಸಮೂಹ ಯಶಸ್ವಿಯಾಗಿದೆ ಅನ್ನುವ ಸುದ್ದಿ ಬಂದಿದೆ
Discussion about this post