Solar Storm ಅಂದ್ರೆ ಸೌರ ಬಿರುಗಾಳಿ ಇಂದು ಭೂಮಿಯನ್ನು ಅಪ್ಪಳಿಸಲಿದೆ. ಸೂರ್ಯನಿಂದ ಬರುತ್ತಿರುವ ಈ ಚಂಡಮಾರುತ ಗಂಟೆಗೆ ಸುಮಾರು 1.6 ಲಕ್ಷ ವೇಗದಲ್ಲಿ ಭೂಮಿಯ ಕಡೆಗೆ ಮುಖ ಮಾಡಿದೆ ಎಂದು ಸ್ಪೇಸ್ವೆದರ್ ವೆದರ್.ಕಾಮ್ ಅನ್ನು ಉಲ್ಲೇಖಿಸಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಸೌರ ಬಿರುಗಾಳಿ ಭೂಮಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಭೂಮಿಯ ಜೊತೆಗೆ ಘರ್ಷಣೆ ಏರ್ಪಡಲಿದ್ದು, ಈ ವೇಳೆ ಬೆಳಕು ಹೊರಹೊಮ್ಮಲಿದೆ. ಈ ಬೆಳಕು ಅದೆಷ್ಟು ಪ್ರಖರವಾಗಿರುತ್ತದೆ ಅಂದ್ರೆ ಉತ್ತರ ಹಾಗೂ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನ ರಾತ್ರಿಯ ಸಮಯದಲ್ಲಿ ಬೆಳಕು ಕಾಣಲಿದ್ದಾರಂತೆ.
ಇನ್ನು ಈ ಸೌರ ಬಿರುಗಾಳಿ ಅಪ್ಪಳಿಸುವ ಸಂದರ್ಭದಲ್ಲಿ ಭೂಮಿಯ ಮೇಲಿನ ಜಿಪಿಎಸ್, ಮೊಬೈಲ್ ಫೋನ್ ನೆಟ್ ವರ್ಕ್, ಸ್ಯಾಟ್ ಲೈಟ್ ಸಿಗ್ನಲ್ ಹಾಗೂ ರೇಡಿಯೋ ಫ್ರಿಕ್ವೆನ್ಸಿ ಗಳು ಕೆಲಸ ನಿಲ್ಲಿಸಲಿದೆ ಎನ್ನಲಾಗಿದೆ.
Discussion about this post