ನವದೆಹಲಿ : ದೇವರನಾಡು ಎಂದು ಕರೆಯಲ್ಪಡುವ ಕೇರಳವನ್ನು ಇದೀಗ ದೇವರೇ ಕಾಪಾಡಬೇಕು. ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯೂನಿಸ್ಟ್ ಸರ್ಕಾರ ಕೇರಳವನ್ನು ಕಾಪಾಡುತ್ತದೆ ಅನ್ನುವ ವಿಶ್ವಾಸವಿಲ್ಲ,ಕಾರಣ ರಾಜಕೀಯ ಲಾಭಕ್ಕಾಗಿ ಲಾಕ್ ಡೌನ್ ಸಡಿಲಿಕೆ ಮಾಡಿದ ಕರ್ಮಕ್ಕೆ ಇಡೀ ರಾಜ್ಯ ನರಳುತ್ತಿದೆ. ಕೇವಲ ಕೇರಳ ಮಾತ್ರವಲ್ಲ ಅಕ್ಕ ಪಕ್ಕದ ರಾಜ್ಯಗಳಿಗೂ ಅದು ಸೂಪರ್ ಸ್ಪ್ರೆಡರ್ ಆಗಿ ಪರಿಣಮಿಸುವ ಆತಂಕವಿದೆ.
ಈ ನಡುವೆ ಬಹುತೇಕ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಈಗಾಗಲೇ ಅನ್ ಲಾಕ್ ಪ್ರಕ್ರಿಯೆಗಳು ಚಾಲನೆಯಲ್ಲಿದೆ. ಈ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಶಾಲೆಗಳ ಬಾಗಿಲು ತೆರೆದಿದೆ. ಕರ್ನಾಟಕದಲ್ಲಿ ಪದವಿ ಹಾಗೂ ವೃತ್ತಿಪರ ತರಗತಿಗಳು ಪ್ರಾರಂಭವಾಗಿದೆ. ಪಂಜಾಬ್ ನಲ್ಲಿ ಜುಲೈ 26 ರಿಂದ 10 ರಿಂದ 12 ತರಗತಿಯವರಿಗೆ ಆಫ್ ಲೈನ್ ತರಗತಿಗಳು ಪ್ರಾರಂಭಗೊಂಡಿದೆ.
ಮತ್ತೊಂದು ಕಡೆ ಉತ್ತರಾಖಂಡದಲ್ಲಿ ಆಗಸ್ಟ್ 1 ರಿಂದ 6 ರಿಂದ 12 ನೇ ತರಗತಿ ತನಕದ ತರಗತಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ ಆಗಸ್ಟ್ 16 ರಿಂದ ಕಾಲೇಜುಗಳು ಪ್ರಾರಂಭವಾಗಲಿದೆ. ಹಿಮಾಚಲ ಪ್ರದೇಶ ಸರ್ಕಾರ ಆಗಸ್ಟ್ 2 ರಿಂದ 10 ರಿಂ 12ನೇ ತನಕದ ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ ಆದೇಶ ಹೊರಡಿಸಿದೆ. ಇನ್ನು 5 ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳು ಅನುಮಾನ ನಿವಾರಿಸಲು ಶಾಲೆಗೆ ಭೇಟಿ ನೀಡಬಹುದಾಗಿದೆ.
ಓಡಿಶಾದಲ್ಲಿ ಜುಲೈ 26 ರಿಂದ 10 ಮತ್ತು 12ನೇ ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ ಸರ್ಕಾರ ನಿರ್ಧರಿಸಿದೆ. ರಾಜಸ್ಥಾನದ ಶಾಲೆಗಳು ಆಗಸ್ಟ್ 2 ರಿಂದ ಮತ್ತೆ ತೆರೆಯಲಿವೆ. ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಹಾರ ಸರ್ಕಾರ ಆಗಸ್ಟ್ 1 ರಿಂದ 1 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಶಾಲೆಗೆ ಬರಬೇಕಾಗಿದೆ. ಆದರೆ ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸುವ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಕಾರಣ ಅಕ್ಕ ಪಕ್ಕದ ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆಯ ಮುನ್ನುಡಿ ಗೋಚರಿಸುತ್ತಿದೆ. ಅದರಲ್ಲೂ ಕೇರಳದಲ್ಲಿ ಪಿಣರಾಯಿ ಸರ್ಕಾರ ಇಟ್ಟ ತಪ್ಪು ಹೆಜ್ಜೆಗಳಿಂದ ಕರುನಾಡು ಆತಂಕದಲ್ಲಿದೆ.
Discussion about this post