ಬೆಂಗಳೂರು ಟ್ರಾಫಿಕ್ ಪೊಲೀಸರ ( bengaluru traffic police) ಲಂಚಾವತಾರ ಪ್ರಕರಣ ಸುದ್ದಿ ವಾಹಿನಿಗಳ ಸ್ಟಿಂಗ್ ಆಪರೇಷನ್ ನಲ್ಲಿ ಬೆತ್ತಲಾಗಿದೆ. ಈ ನಡುವೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ( Ravikanthe gowda ips ) ಪಿಯುಸಿ ಮಕ್ಕಳಿಗೆ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದಾರೆ
ಬೆಂಗಳೂರು : ರಾಜಧಾನಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರು ಇನ್ನಿಲ್ಲದ ಶ್ರಮ ಹಾಕುತ್ತಿದ್ದಾರೆ. ಸುಗಮ ಸಂಚಾರಕ್ಕಾಗಿ ಶಿಸ್ತಿನಿಂದ ದುಡಿಯುವ ಅಧಿಕಾರಿಗಳು ಬೆಂಗಳೂರು ಟ್ರಾಫಿಕ್ ಪೊಲೀಸ್ ಟೀಂ ನಲ್ಲಿದ್ದಾರೆ. ಆದರೆ ಇವರ ಕೆಲಸವನ್ನು ಕೆಲ ಭ್ರಷ್ಟ ಟ್ರಾಫಿಕ್ ಇನ್ಸ್ ಪೆಕ್ಟರ್ ಗಳು, ಲಂಚಬಾಕ ಟ್ರಾಫಿಕ್ ವಿಭಾಗದ ಎಸಿಪಿಗಳು ಹಾಳು ಮಾಡುತ್ತಿದ್ದಾರೆ.
ಈ ನಡುವೆ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ( Ravikanthe gowda ips ) ಸೂಚಿಸಿದ್ದಾರೆ. ಪಿಯು ವಿದ್ಯಾರ್ಥಿಗಳಿಗೆ ಡ್ರೈವಿಂಗ್ ಲೈಸೆನ್ಸ್ ( Driving licence ) ಪಡೆಯುವ ಪ್ರಾಯವೇ ಆಗಿರುವುದಿಲ್ಲ. ಹೀಗಾಗಿ ಪಿಯುಸಿ ವಿದ್ಯಾರ್ಥಿಗಳು ಬೈಕ್ ಅಥವಾ ಸ್ಕೂಟರ್, ಕಾರು ಚಲಾಯಿಸಿಕೊಂಡು ಬರೋ ಹಾಗಿಲ್ಲ ಅಂದಿದ್ದಾರೆ. ( ಡುಮ್ಕಿ ಸಾಧಕರಿದ್ರೆ ಅವರಿಗೆ ಲೈಸೆನ್ಸ್ ಆಗಿದ್ರೆ ಅವರು ವಾಹನ ಚಾಲನೆ ಮಾಡಲು ಅರ್ಹರಾಗಿರುತ್ತಾರೆ)
ಇದನ್ನೂ ಓದಿ : Boris Johnson rishi sunak : ಬೋರಿಸ್ ಜಾನ್ಸನ್ ರಾಜೀನಾಮೆ ತೆರವಾದ ಸ್ಥಾನಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ
ಬೆಂಗಳೂರಿನಲ್ಲಿ ಮಾತನಾಡಿದ ರವಿಕಾಂತೇಗೌಡ, ವಿದ್ಯಾರ್ಥಿಗಳ ಸೇಫ್ ದೃಷ್ಟಿಯಿಂದ ಪೋಷಕರು ಕೂಡಾ ಈ ಬಗ್ಗೆ ಗಮನಹರಿಸಬೇಕು ಅಂದಿದ್ದಾರೆ.
ಇದನ್ನೂ ಓದಿ : PSI Exam Scam Amrut Paul : ಹರ್ಷನ ಕೊಲೆ ಆರೋಪಿಗಳಿಗೆ ಮೊಬೈಲ್ ಸಿಗುತ್ತದೆ… ಅಮೃತ ಪಾಲ್ ಗೆ ಎಣ್ಣೆ ಸಿಗಲ್ವ….
ಇದೇ ವೇಳೆ ಡ್ರಿಂಕ್ ಅಂಡ್ ಡ್ರೈವ್ ( drink and drive ) ಬಗ್ಗೆ ಮಾಹಿತಿ ನೀಡಿರುವ ಅವರು ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಕುಡಿದು ವಾಹನ ಚಲಾಯಿಸಿ ವಾಹನ ಅಪಘಾತ ಮಾಡಿದ ಪ್ರಮಾಣ ಕಡಿಮೆಯಾಗಿದೆ. ಆದರೆ ಜೂನ್ ತಿಂಗಳಲ್ಲಿ ನಡೆದ ಅಫಘಾತಗಳಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಅತೀ ಹೆಚ್ಚು ಡ್ರಿಂಕ್ ಅಂಡ್ ಡ್ರೈವ್ ಮಾಡಿದವರೇ. ಹೀಗಾಗಿಯೇ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಡ್ರೈವ್ ಮುಂದುವರಿಯಲಿದೆ ಅಂದಿದ್ದಾರೆ.
ಇನ್ನು ಡ್ರಿಂಕ್ ಅಂಡ್ ಡ್ರೈವ್ ( drink and drive ) ಸಂದರ್ಭದಲ್ಲಿ ಪೊಲೀಸರಿಗೆ ದಂಡ ಸಂಗ್ರಹಿಸುವ ಅಧಿಕಾರವಿಲ್ಲ. ಅದನ್ನು ನ್ಯಾಯಾಲಯದಲ್ಲೇ ಕಟ್ಟಬೇಕು. ಜೊತೆಗೆ ಡ್ರಿಂಕ್ ಅಂಡ್ ಡ್ರೈವ್ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡ್ರೆ ಜೊತೆಗಿದ್ದವರು ಕುಡಿಯದೇ ಇದ್ದು, ಅವರು ವಾಹನ ಚಲಾವಣೆಗೆ ಅರ್ಹತೆ ಹೊಂದಿದ್ದರೆ, ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳುವುದಿಲ್ಲ. ವಾಹನ ಸವಾರ ಅಥವಾ ಚಾಲಕ ಒಬ್ಬನೇ ಇದ್ದ ಸಂದರ್ಭದಲ್ಲಿ ಪೊಲೀಸರು ವಾಹನ ವಶಪಡಿಸಿಕೊಳ್ಳುತ್ತಾರೆ ಎಂದು ಇದೇ ಸಂದರ್ಭದಲ್ಲಿ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
ಹರ್ಷನ ಕೊಲೆ ಆರೋಪಿಗಳಿಗೆ ಮೊಬೈಲ್ ಸಿಗುತ್ತದೆ… ಅಮೃತ ಪಾಲ್ ಗೆ ಎಣ್ಣೆ ಸಿಗಲ್ವ….
ಪೊಲೀಸ್ ನೇಮಕಾತಿ ಹಗರಣದಲ್ಲಿ ( PSI Exam Scam Amrut Paul) ಜೈಲು ಸೇರಿರುವ ಎಡಿಜಿಪಿ ಅಮೃತಪಾಲ್ ಅವರಿಗೆ ಇದೀಗ ನಿದ್ದೆ ಬರುತ್ತಿಲ್ಲವಂತೆ. ನಿತ್ಯ ಎಣ್ಣೆ ಹೊಡೆಯುವ ಅಭ್ಯಾಸ ಇಟ್ಟುಕೊಂಡ ಕರ್ಮಕ್ಕೆ ಇದೀಗ ಅವರು ಒದ್ದಾಡುತ್ತಿದ್ದಾರಂತೆ
ಬೆಂಗಳೂರು : ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಅದರಂತೆ ಇದೀಗ ಪೊಲೀಸ್ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತಪಾಲ್ (PSI Exam Scam Amrut Paul) ಜೈಲು ಸೇರಿದ್ದಾರೆ. ಅವರೇನೋ ಜೈಲು ಸೇರಿದ್ರು, ಇದೀಗ ಪೊಲೀಸರಿಗೆ ತಲೆ ನೋವು ಶುರುವಾಗಿದೆ.
ಜೈಲು ಸೇರಿದ ಮೊದಲ ರಾತ್ರಿ ನನಗೆ ಸಿಗರೇಟು ಬೇಕು, ನನಗೆ ಎಣ್ಣೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ನ್ಯೂಸ್ ಚಾನೆಲ್ ವರದಿ ಮಾಡಿದೆ.
ಅಮೃತ್ ಪಾಲ್ ಡಿಮ್ಯಾಂಡ್ ಕೇಳಿ ಪೊಲೀಸರೇ ಶಾಕ್ ಆಗಿದ್ದು, ಕಾನೂನು ನಿಯಮ ಎಲ್ಲಾ ಗೊತ್ತಿರುವವರೇ ಹೀಗಾದ್ರೆ ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಧಮ್ ಬೇಕು.. ವಿಸ್ಕಿ ಬೇಕು ಅಂದ ತಕ್ಷಣ ಕೊಟ್ರೆ ಎಲ್ಲಿ ಕೆಲಸ ಕಳೆದುಕೊಳ್ಳಬೇಕಾಗುತ್ತದೋ ಅನ್ನುವ ಆತಂಕ ಪೊಲೀಸರದ್ದು. ಪೊಲೀಸ್ ಕಸ್ಟಡಿಯಲ್ಲಿ ಅದನ್ನು ಕೊಡಲು ಸಾಧ್ಯವಿಲ್ಲ. ಅವೆಲ್ಲಾ ನಿಯಮಕ್ಕೆ ವಿರುದ್ಧ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಇನ್ನು ಈ ಸುದ್ದಿಯನ್ನು ಓದಿದ ಓದುಗರೊಬ್ಬರು ಹರ್ಷನ ಕೊಲೆ ಪ್ರಕರಣ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಗುತ್ತದೆ, ಟಿಕ್ ಟಾಕ್ ಮಾಡ್ತಾರೆ. ದೊಡ್ಡ ಹುದ್ದೆಯ ಪೊಲೀಸರಿಗೆ ಎಣ್ಣೆ ಸಿಗಲ್ವ ಎಂದು ಕಮೆಂಟ್ ಮಾಡಿದ್ದಾರೆ.
ಈ ನಡುವೆ ನಾನು ನ್ಯಾಯಾಧೀಶರ ಮುಂದೆಯೇ ಹೇಳಿಕೆ ನೀಡಲು ಬಯಸುತ್ತೇನೆ ಎಂದು ಅಮೃತ ಪಾಲ್ ಹೇಳಿದ್ದಾರೆ ಅನ್ನಲಾಗಿದ್ದು, ರಾಜಕಾರಣಿಗಳ ಹೆಸರು ಹೊರ ಬರುವ ಸಾಧ್ಯತೆಗಳಿದೆ ಅನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ.
Discussion about this post