ಸರ್ಕಾರಿ ವ್ಯವಸ್ಥೆಯಲ್ಲಿ ಅತ್ಯಂತ ಭ್ರಷ್ಟ ಇಲಾಖೆ ಅಂದ್ರೆ ಅದು ಪೊಲೀಸ್ ಇಲಾಖೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮಂದಿಯೇ ಕಾನೂನು ಮುರಿಯುವ ಮೂಲಕ ಅಸಹ್ಯ ಹುಟ್ಟಿಸಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ನಲಾಗಿದೆ. ಆದರೆ ಪೊಲೀಸ್ ಠಾಣೆಗಳಲ್ಲಿ ಉಳ್ಳವರಿಗೆ ಪ್ರತ್ಯೇಕವಾದ ಕಾನೂನುಗಳಿದೆ ಅನ್ನುವುದಕ್ಕೆ ಕೋರ್ಟ್ ಗಳು ಪೊಲೀಸರಿಗೆ ವಿಧಿಸಿದ ಶಿಕ್ಷೆಯೇ ಸಾಕ್ಷಿ.
ಈ ನಡುವೆ ತಮಿಳುನಾಡು ಪೊಲೀಸರ ಲಂಚದ ದರ ಪಟ್ಟಿ ವೈರಲ್ ಆಗಿದ್ದು, ವಿವಿಧ ಅಕ್ರಮಗಳಿಗೆ ಕೊಡಬೇಕಾಗಿರುವ ದರವೆಷ್ಟು ಅನ್ನುವುದನ್ನು ಈ ಪಟ್ಟಿ ನಮೂದಿಸಲಾಗಿದೆ.
ಲೈಸೆನ್ಸ್ ಇಲ್ಲದೆ ಮದ್ಯ ಮಾರಾಟ 10 ರಿಂದ 60 ಸಾವಿರ ರೂಪಾಯಿ, ಅಕ್ರಮವಾಗಿ ಲಾಟರಿ ಟಿಕೆಟ್ ಮಾರಾಟಕ್ಕೆ 1 ಲಕ್ಷ ರೂ, ಅಕ್ರಮವಾಗಿ ಮರಳು ಸಾಗಿಸಲು 20 ಸಾವಿರ ರೂ, ಸಿವಿಲ್ ವ್ಯಾಜ್ಯ ಪ್ರಕರಣಕ್ಕೆ 10 ಸಾವಿರದಿಂದ 1 ಲಕ್ಷ ರೂ, ಗ್ಯಾಂಬ್ಲಿಂಗ್ ಗೆ 10 ಸಾವಿರ ರೂ ಹೀಗೆ ಪಟ್ಟಿ ಮುಂದುವರಿಯುತ್ತದೆ.
ಇದೀಗ ಈ ಪಟ್ಟಿ ತಯಾರಿಸಿದವರು ಸೇಲಂ ಜಿಲ್ಲೆಯ ಪೊಲೀಸರು ಎಂದು ಗೊತ್ತಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಅಭಿನವ್ ಸೂಚಿಸಿದ್ದಾರೆ.
ಹಾಗಂತ ಬೇರೆ ಕಡೆ ಹೀಗೆ ದರ ಪಟ್ಟಿ ಇಲ್ಲದಿರಲು ಸಾಧ್ಯವೇ, ಖಂಡಿತಾ ಇರುತ್ತದೆ ವೈರಲ್ ಆಗಿಲ್ಲ ಅಷ್ಟೇ. ಇಲ್ಲವಾಗಿದ್ರೆ ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ, ಅಕ್ರಮ ಮಸಾಜ್ ಕೇಂದ್ರಗಳು ತಲೆ ಎತ್ತಲು ಹೇಗೆ ಸಾಧ್ಯ.
Discussion about this post