ಕಾಂಗ್ರೆಸ್ ಪಕ್ಷದಿಂದ ಸಂಪೂರ್ಣವಾಗಿ ದೂರ ಸರಿದಿರುವ ನಟಿ ರಮ್ಯ ( Ramya ) ಇದೀಗ ಚಿತ್ರರಂಗದತ್ತ ಒಲವು ತೋರುತ್ತಿದ್ದಾರೆ. ಮೋಹಕ ತಾರೆ ಇದಕ್ಕೆ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಸದ್ದಿಲ್ಲದೆ ಬ್ಯಾಂಕಾಕ್ ( Bangkok) ಕಡೆಗೆ ರಮ್ಯ ಪ್ರಯಾಣ ಬೆಳೆಸಿದ್ದಾರೆ
ಮೋಹಕ ತಾರೆ ರಮ್ಯ ( Ramya ) ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಆಗೊಮ್ಮೆ ಈಗೊಮ್ಮೆ ಮೋದಿ ( Naredndra modi ), ಬಿಜೆಪಿ ( BJP ) ವಿರುದ್ಧ ಟ್ವೀಟ್ ಮಾಡುತ್ತಿರುವ ರಮ್ಯ ತಮ್ಮ ಹಳೆಯ ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಮಾಧ್ಯಮಗಳ ಕ್ಯಾಮಾರದಿಂದ ಸಂಪೂರ್ಣ ಮರೆಯಾಗಿದ್ದ ರಮ್ಯ ನಿಧಾನವಾಗಿ ಸುದ್ದಿ ವಾಹಿನಿಗಳ ( news channels) ಕ್ಯಾಮಾರ ಕಡೆಗೆ ಒಲವು ತೋರಿದ್ದಾರೆ. ಈ ನಡುವೆ ದಿವ್ಯಾ ಸ್ಪಂದನ ಯಾನೆ ರಮ್ಯ ಬ್ಯಾಂಕಾಕ್ ಗೆ ( Ramya Bangkok) ಹಾರಿರುವ ಸುದ್ದಿ ಬಂದಿದೆ
ಇತ್ತೀಚೆಗೆಷ್ಟೇ ನಟಿ ಕಾವ್ಯಾ ಮತ್ತು ವರುಣ್ ಗೌಡ ಮದುವೆಯಲ್ಲಿ ಕಾಣಿಸಿಕೊಂಡಿದ್ದ ರಮ್ಯ ಬ್ರೇಕ್ ಸಲುವಾಗಿ ಬ್ಯಾಂಕಾಕ್ಗೆ ಹಾರಿದ್ದಾರೆ. ಆತ್ಮೀಯ ಗೆಳತಿಯರು ಕೂಡಾ ರಮ್ಯ ಅವರಿಗೆ ಕಂಪನಿ ನೀಡಿದ್ದಾರೆ ಅನ್ನಲಾಗಿದೆ.
ಈ ನಡುವೆ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ಮುಂದಾಗಿರುವ ರಮ್ಯಾ, ಕಥೆಗಳನ್ನು ಕೇಳುತ್ತಿದ್ದಾರಂತೆ. ದೊಡ್ಡ ಗ್ಯಾಪ್ ನಂತ್ರ ತೆರೆಗೆ ಮರಳುತ್ತಿರುವ ಕಾರಣ ಕಥೆ ಭಿನ್ನವಾಗಿರಬೇಕು ಅನ್ನುವುದು ರಮ್ಯಾ ಆಸೆಯಂತೆ. ಹೀಗಾಗಿ ಸಿನಿಮಾ ಮಾಡಲು ಕಥೆಗಳನ್ನು ಅವರು ಕೇಳುತ್ತಿದ್ದಾರೆ.
ಅಭಿ’ ಸಿನಿಮಾದ ಮೂಲಕ ಚಂದನವನಕ್ಕೆ ಬಂದ ರಮ್ಯ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ರಾಜಕೀಯದ ಕಡೆಗೆ ಹೆಜ್ಜೆ ಹಾಕಿದ ರಮ್ಯ ಅಲ್ಲಿ ಯಶಸ್ಸು ಕಾಣಲಿಲ್ಲ. ಚಿತ್ರರಂಗದಲ್ಲೇ ಇರುತ್ತಿದ್ರೆ ರಮ್ಯಾ ಇಷ್ಟು ಹೊತ್ತಿಗೆ ದೊಡ್ಡ ಮಟ್ಟದಲ್ಲಿ ಬೆಳೆದಿರುತ್ತಿದ್ದರು. ಆದರೆ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗಿಳಿದು ತಪ್ಪು ಮಾಡಿದ್ರ ಅನ್ನುವ ಪ್ರಶ್ನೆ ಈಗ್ಲೂ ಹಲವರನ್ನು ಕಾಡುತ್ತಿದೆ.
ಇದನ್ನೂ ಓದಿ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ : ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ
ಒಟ್ಟಿನಲ್ಲಿ ಇದೀಗ ಸಿನಿಮಾ, ರಾಜಕೀಯ ಆದಾದ ಬಳಿಕ ಕೆಲದಿನ ಸಿನಿಮಾ ಮತ್ತು ರಾಜಕೀಯ ಎರಡು ರಂಗದಿಂದಲೂ ದೂರ ಸರಿದಿದ್ದ ರಮ್ಯ ಈಗ ರಮ್ಯಾ ಚೈತ್ರ ಕಾಲ ಶುರುವಾಗುವ ಮುನ್ಸೂಚನೆ ನೀಡಿದ್ದಾರೆ. ಸಿನಿಮಾ ಸಮಾರಂಭಗಳಲ್ಲಿ, ಆತ್ಮೀಯರ ಕುಟುಂಬದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ : ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ( Heavy rain in Dakshina kannada ) ಇಂದು ಕೂಡಾ ಮುಂದುವರಿದಿದೆ. ಈಗಾಗಲೇ ಕರಾವಳಿ ಜಿಲ್ಲೆಗಳಿಗೆ ಹವಮಾನ ಇಲಾಖೆ ಆರೆಂಜ್ ಆಲರ್ಟ್ ನೀಡಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಮಳೆಯ ಅಬ್ಬರ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಸೇರಿದಂತೆ ಡಿಗ್ರಿ ಕಾಲೇಜು ತನಕ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಆದೇಶ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಅಪಾಯದ ಪರಿಸ್ಥಿತಿ ತಲೆದೋರಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತಗಳು ಮನವಿ ಮಾಡಿದೆ.
Discussion about this post