ಕೇರಳದ ಇಸ್ಲಾಮಿಕ್ ಕಾಲೇಜಿನ ಗ್ರಂಥಾಲಯದಲ್ಲಿ ರಾಮಾಯಣ ( Ramayana quiz) ಸೇರಿದಂತೆ ವಿವಿಧ ಧಾರ್ಮಿಕ ಪುಸ್ತಕಗಳಿದೆ
ಕೇರಳ : ಮಲಪ್ಪುರಂನ ವಾಲನ್ ಚೆರಿ ಕೆಕೆಎಸ್ಎಂ ಇಸ್ಲಾಮಿಕ್ ಮತ್ತು ಕಲಾ ಕಾಲೇಜಿನ ವಾಫಿ ಕೋರ್ಸ್ ನ ಇಬ್ಬರು ವಿದ್ಯಾರ್ಥಿಗಳು ರಾಮಾಯಣದ ಕ್ವಿಜ್ ( Ramayana quiz) ಗೆದ್ದು ಬೀಗಿದ್ದಾರೆ. ಇಬ್ಬರ ಸಾಧನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಕಾಲೇಜಿನ ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀರ್ ಮತ್ತು ಮೊಹಮ್ಮದ್ ಬಶೀತ್ ವಿಜೇತರಾಗಿದ್ದು, ಹಿಂದೂ ಧರ್ಮದ ಬಗ್ಗೆ ಆಳವಾದ ಅಧ್ಯಯನ ನಡೆಸಲು ಕಾಲೇಜು ಸಕಲ ವ್ಯವಸ್ಥೆಗಳನ್ನು ಮಾಡಿತ್ತು. ಈ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಟಾಪರ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಸ್ಪರ್ಧೆಯ ಇತರೆ ವಿಜೇತರನ್ನು ನವನೀತ್ ಗೋಪನ್ , ಅಭಿರಾಮ್ ಎಂಪಿ ಹಾಗೂ ಗೀತು ಕೃಷ್ಣನ್ ಎಂದು ಗುರುತಿಸಲಾಗಿದೆ.
ಇದನ್ನು ಓದಿ : chandan kumar : ಅವರೇನು ಬ್ಯಾನ್ ಮಾಡೋದು ನಾನೇ ವಾಕೌಟ್ ಮಾಡಿದ್ದೇನೆ
ಇನ್ನು ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಮೊಹಮ್ಮದ್ ಜಬೀರ್, ರಾಮ ಮತ್ತು ರಾಮಾಯಣದ ಸಂದೇಶದಲ್ಲಿ ಸ್ಫೂರ್ತಿ ಪಡೆದುಕೊಳ್ಳುವ ಅನೇಕ ಅಂಶಗಳಿದೆ. ಈ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲಾ ಭಾರತೀಯರು ಭಾರತದ ಸಂಸ್ಕೃತಿಯ ಭಾಗವಾಗಿರುವ ರಾಮಾಯಣ ಮತ್ತು ಮಹಾಭಾರತವನ್ನು ಓದಬೇಕು ಅಂದಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿ ಬಶೀತ್, ಯಾವುದೇ ಧರ್ಮ ದ್ವೇಷವನ್ನು ಕಲಿಸೋದಿಲ್ಲ. ಶಾಂತಿ ಮತ್ತು ಸೌಹಾರ್ದತೆಯನ್ನು ಬೋಧಿಸುತ್ತದೆ. ವಿವಿಧ ಧಾರ್ಮಿಕ ಗ್ರಂಥಗಳನ್ನು ಓದುವುದರಿಂದ ಇತರ ಸಮುದಾಯದ ನಂಬಿಕೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಅಂದಿದ್ದಾರೆ.
Discussion about this post