ಮುಂಬೈ : ಅಶ್ಲೀಲ ಸಿನಿಮಾ ನಿರ್ಮಾಣ ಕುರಿತಂತೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಾಮಾಜ್ಯ ಕುರಿತಂತೆ ಮತ್ತಷ್ಟು ಮಾಹಿತಿಗಳು ಹೊರ ಬೀಳುತ್ತಿದೆ. ಈ ನಡುವೆ ಕುಂದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ, ನಿಯಮ ಮೀರಿ ವಿದೇಶದಲ್ಲಿ ಹೂಡಿಕೆ ಕುರಿತ ಆರೋಪಗಳು ಕೇಳಿ ಬಂದಿದ್ದು, ಈ ಸಂಬಂಧ ಇಡಿ ತನಿಖೆ ಮಾಡುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಈ ಎಲ್ಲದರ ನಡುವೆ ಶಿಲ್ಪಾ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.ಜೊತೆಗೆ ಕುಂದ್ರಾ ನೀಲಿ ಚಿತ್ರ ನಿರ್ಮಾಣಕ್ಕೂ ಶಿಲ್ಪಾ ಶೆಟ್ಟಿಗೂ ನಂಟಿದೆ ಎನ್ನಲಾದ ಸಾಕ್ಷಿ ದೊರೆತಿದ್ದು, ಶಿಲ್ಪಾ ಶೆಟ್ಟಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿದೆ. ಇನ್ನು ರಾಜ್ ಕುಂದ್ರಾ ಅವರಿಗೆ ಸೇರಿದ ವಿವಿಧ ಅಪಾರ್ಟ್ ಮೆಂಟ್, ಕಚೇರಿಗಳ ಮೇಲೆ ದಾಳಿ ಮುಂದುವರಿದಿದ್ದು, ಕಚೇರಿಯಲ್ಲಿ ರಹಸ್ಯ ಬೀರು ಪತ್ತೆಯಾಗಿದೆ ಎನ್ನಲಾಗಿದೆ.
ಅಂಧೇರಿ ಪ್ರಾಂತ್ಯದಲ್ಲಿರುವ ರಾಜ್ ಕುಂದ್ರಾ ಅವರ ವಿಯಾನ್ ಮತ್ತು ಜೆಎಲ್ ಸ್ಟ್ರೀಮ್ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಬೀರು ಸಿಕ್ಕಿದೆ ಅನ್ನಲಾಗಿದೆ. ಆದರೆ ಬೀರುವಿನಲ್ಲಿ ಏನಿದೆ ಅನ್ನುವ ಮಾಹಿತಿ ಹೊರ ಬಿದ್ದಿಲ್ಲ. ಮಾಹಿತಿಗಳ ಪ್ರಕಾರ cryptocurrency ಇದರಲ್ಲಿತ್ತು ಎನ್ನಲಾಗಿದೆ.
Discussion about this post