ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅನ್ನುವಂತಾಗಿದೆ. ಹೇಳದೆ ಕೇಳದೆ ಈ ವಿದ್ಯಾರ್ಥಿನಿಯರು ಗೋವಾ ಪ್ರವಾಸಕ್ಕೆ ಹೋಗಿದ್ದರು ಅನ್ನಲಾಗಿದೆ (Raichur news)
ರಾಯಚೂರು : ನಗರದ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾದ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.( Raichur news) ನಾಲ್ವರು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಪತ್ತೆ ಮಾಡಿರುವ ಹುಬ್ಬಳ್ಳಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಮೂವರು ಹಾಗೂ ವಾಣಿಜ್ಯ ವಿಭಾಗದ ಓರ್ವ ವಿದ್ಯಾರ್ಥಿನಿ ಜುಲೈ 23 ರಿಂದ ತಮ್ಮ ಮನೆಯಿಂದ ಕಾಲೇಜಿಗೆ (Raichur news) ಎಂದು ಹೊರಟವರು ನಾಪತ್ತೆಯಾಗಿದ್ದರು. ಅತ್ತ ಕಾಲೇಜಿಗೂ ಹೋಗದ ವಿದ್ಯಾರ್ಥಿನಿಗಳು ಇತ್ತ ಮನೆಗೂ ಬಂದಿರಲಿಲ್ಲ.
ಇದನ್ನೂ ಓದಿ : Mangalore kissing : ಮಂಗಳೂರು ಕಿಸ್ಸಿಂಗ್ ಪ್ರಕರಣ ಬಂಧಿತರ ಸಂಖ್ಯೆ 8ಕ್ಕೆ ಏರಿಕೆ
ಈ ಬಗ್ಗೆ ಆತಂಕಗೊಂಡ ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆಯಾದವರಲ್ಲಿ ಮೂವರು ಅಪ್ರಾಪ್ತರಾಗಿದ್ದು, ಅಪರಿಚಿತರು ಅಪಹರಣ ಮಾಡಿದ್ದಾರೆ ಎಂದು ಪಾಲಕರೊಬ್ಬರು ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎರಡು ಪ್ರತ್ಯೇಕ ತಂಡವನ್ನು ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದರು.
ಪತ್ತೆಯಾದವರ ಪೈಕಿ ಶಕ್ತಿನಗರದ ಇಬ್ಬರು ವಿದ್ಯಾರ್ಥಿನಿಯರು ಹಾಗೂ ರಾಯಚೂರು ನಗರದ ಇಬ್ಬರು ವಿದ್ಯಾರ್ಥಿನಿಯರು ಸೇರಿದ್ದರು. ಇನ್ನು ಪೊಲೀಸರು ತನಿಖೆ ಪ್ರಾರಂಭಿಸಿದ ವೇಳೆ ನಾಲ್ವರ ಪೈಕಿ ಒಬ್ಬಳು ಮೊಬೈಲ್ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಮೊಬೈಲ್ ನೆಟ್ ವರ್ಕ್ ಹಿಂದೆ ಬಿದ್ದ ಪೊಲೀಸರು ಪತ್ತೆ ಕಾರ್ಯ ಪ್ರಾರಂಭಿಸಿದ್ದಾರೆ.
ಈ ಪೈಕಿ ಇಬ್ಬರು ಹುಬ್ಬಳಿಯಲ್ಲಿ ಬಸ್ ಹತ್ತಿ ರಾಯಚೂರಿಗೆ ಬರುವ ವೇಳೆ ಪತ್ತೆಯಾದ್ರೆ, ಮತ್ತಿಬ್ಬರು ಗೋವಾದಿಂದ ಬರುವ ಬಸ್ ನಲ್ಲಿ ಪತ್ತೆಯಾಗಿದ್ದಾರೆ. ಇವರ ಜೊತೆ ಇಬ್ಬರು ಹುಡುಗರೂ ಕೂಡಾ ಇದ್ರು ಅನ್ನಲಾಗಿದೆ. ಇದೀಗ ನಾಲ್ವರನ್ನು ವಶಕ್ಕೆ ಪಡೆದಿರುವ ಹುಬ್ಬಳ್ಳಿ ಪೊಲೀಸರು ರಾಯಚೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : Karnataka news :ಮಠಗಳಿಗೆ ಕೋಟಿ ಕೋಟಿ ಅನುದಾನ : ಅಕಾಡೆಮಿಗಳಿಗೆ ಮಾತ್ರ ಮೋಸ
Discussion about this post