ಬೆಂಗಳೂರು : ಮುಖ ನೋಡಿ, ಕೆಲಸ ನೋಡಿ ಯಾವುದೇ ವ್ಯಕ್ತಿಯನ್ನು ಅಳೆಯಬೇಡಿ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ಅದಕ್ಕೊಂದು ಕಾರಣವಿದೆ. ಪ್ರತಿಯೊಂದು ಮುಖದ ಹಿಂದೆ, ಪ್ರತಿಯೊಂದು ಕೆಲಸ ಹಿಂದೆ ಕಥೆಯೊಂದಿರುತ್ತದೆ. ಇದಕ್ಕೊಂದು ಬೆಸ್ಟ್ ಏಕ್ಸಾಂಪಲ್ ಅಂದ್ರೆ ಶಚಿನಾ ಹೆಗ್ಗರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ.
ಬೆಂಗಳೂರಿನಲ್ಲಿ ಕಸ ಆಯೋ ಮಹಿಳೆಯೊಬ್ಬರ ವಿಡಿಯೋವನ್ನು ಶಚಿನಾ ಸೆರೆ ಹಿಡಿದಿದ್ದು, ಈ ಮಹಿಳೆ ಇಂಗ್ಲೀಷ್ ಮಾತನಾಡೋ ಶೈಲಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಸದಾಶಿವನಗರದಲ್ಲಿ ಚಿಂದಿ ಆಯುವ ಇವರು ತಮ್ಮ ಹೆಸರು ಮಾರ್ಗರೆಟ್ ವಾರೆನ್ಸ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಸಲೀಸಾಗಿ ಇಂಗ್ಲೀಷ್ ಮಾತನಾಡುವ ಶೈಲಿಯನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಅಂದ ಹಾಗೇ ಇವರು 7 ವರ್ಷಗಳ ಕಾಲ ಜಪಾನ್ ನಲ್ಲೇ ಕೆಲಸ ಮಾಡಿದ್ದರಂತೆ.
Discussion about this post