ರಾಧಿಕಾ ಕುಮಾರಸ್ವಾಮಿಯವರು ಬಂಟ್ವಾಳದ ರಾಯಪ್ಪನಕೋಡಿ ಎಂಬಲ್ಲಿ ಎಸ್ಟೇಟ್ ಹೊಂದಿದ್ದಾರೆ
ಮಂಗಳೂರು : ನಟಿ ರಾಧಿಕಾ ಕುಮಾರಸ್ವಾಮಿಯವರ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾದನಗಿರಿ ನಿವಾಸಿಯಾಗಿರುವ ನಾಗರತ್ನ ( 33 ) ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಗೆ ರಾಧಿಕಾ ಕುಮಾರಸ್ವಾಮಿಯವರ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ರಾಧಿಕಾ ಕುಮಾರಸ್ವಾಮಿಯವರು ಎಸ್ಟೇಟ್ ಹೊಂದಿದ್ದಾರೆ.
ಇದನ್ನೂ ಓದಿ : 1.5 ಕೋಟಿ ರೂಪಾಯಿ ಗೆದ್ದ ಪೊಲೀಸ್ ಅಧಿಕಾರಿ ಅಮಾನತು
ಅಕ್ಟೋಬರ್ 13 ರಂದು ನಾಗರತ್ನ ಮತ್ತು ಮಹಾದೇವ ಮಾರಿಪಟಗಾರ್ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ದಿನ ಬೆಳಗ್ಗೆ 10.30ಕ್ಕೆ ಎಸ್ಟೇಟ್ ನಲ್ಲಿರುವ ಮನೆಗೆ ಚಹಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೋಗಿದ್ದ ನಾಗರತ್ನ ಮರಳಿ ಮತ್ತೆ ಕೆಲಸದ ಕಡೆಗೆ ಬಂದಿರಲಿಲ್ಲ. ಈ ವೇಳೆ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ನಾಗರತ್ನ ಮನೆಯಲ್ಲಿ ಇರಲಿಲ್ಲ.
ಬಟ್ಟೆ, ಆಧಾರ್ ಕಾರ್ಡ್ ಮತ್ತು ನಗದು ತೆಗೆದುಕೊಂಡು ಅವರು ಮನೆಯಿಂದ ನಾಪತ್ತೆಯಾಗಿದ್ದರು. ಮಾತ್ರವಲ್ಲದೆ ಅಕ್ಟೋಬರ್ 14 ರಂದು ಫೋನ್ ಮಾಡಿರುವ ನಾಗರತ್ನ, ನನ್ನನ್ನು ಹುಡುಕಬೇಡಿ, ನಾನು ದೂರ ಹೋಗುತ್ತೇನೆಂದು ತಿಳಿಸಿದ್ದಾರೆ.
Read More : ಒಡಿಶಾ ಮತ್ತು ತ್ರಿಪುರಾಕ್ಕೆ ಹೊಸ ರಾಜ್ಯಪಾಲರ ನೇಮಕ
ಈ ಸಂಬಂಧ ಮಹಾದೇವ ಮಾರಿಪಟಗಾರ್ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾವಚಿತ್ರದಲ್ಲಿ ಕಾಣುವ ಮಹಿಳೆಯನ್ನು ಯಾರಾದರೂ ಕಂಡರೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿಕೊಂಡಿದ್ದಾರೆ.
ಮಹಾದೇವ ಮಾರಿಪಟಗಾರ್ ನಡುವೆ ಆಗಾಗ್ಗೆ ಮುನಿಸಿಕೊಳ್ಳುತ್ತಿದ್ದ ನಾಗರತ್ನ ಧರ್ಮಸ್ಥಳ, ಮಂಗಳೂರು ಎಂದು ಸುತ್ತಾಡಿಕೊಂಡು ಬರುತ್ತಿದ್ದರಂತೆ. ಅದೇ ರೀತಿ ಹೋಗಿರಬಹುದೆಂದು ಗಂಡ ಭಾವಿಸಿದ್ದರು. ಆದರೆ ಮರು ದಿನ ಕರೆ ಮಾಡಿ ದೂರ ಹೋಗುತ್ತೇನೆಂದು ತಿಳಿಸಿದ ಕಾರಣ ಇದೀಗ ಮಹಾದೇವ ಮಾರಿಪಟಗಾರ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಇದೀಗ ನಾಗರತ್ನ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ.
Discussion about this post