ಪಂಜಾಬ್ ಪೊಲೀಸರು ( punjab traffic rules ) ಭಾನುವಾರ ಬಿಡುಗಡೆ ಮಾಡಿರುವ ಹೊಸ ಟ್ರಾಫಿಕ್ ನಿಯಮಗಳ ಪ್ರಕಾರ ಈ ಹೊಸ ನಿಯಮಗಳನ್ನು ಸೇರಿಸಲಾಗಿದೆ
ಚಂಡೀಗಢ : ಅತೀ ವೇಗದ ವಾಹನ ಚಾಲನೆ, ಮದ್ಯ ಸೇವಿಸಿ ವಾಹನ ಚಾಲನೆ ಹೀಗೆ ವಿವಿಧ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ರೆ ಪಂಜಾಬ್ ನಲ್ಲಿ ದಂಡ ಮಾತ್ರವಲ್ಲ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಅಥವಾ ರಕ್ತದಾನ ಕಡ್ಡಾಯವಾಗಿ ಮಾಡಲೇಬೇಕು. ಇಂತಹುದೊಂದು ಆದೇಶವನ್ನು ಪಂಜಾಬ್ ಪೊಲೀಸರು ( punjab traffic rules ) ಬಿಡುಗಡೆ ಮಾಡಿದ್ದು, ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ದಂಡ, ಲೈಸೆನ್ಸ್ ತಾತ್ಕಾಲಿಕ ರದ್ದು ಜೊತೆಗೆ ರಕ್ತದಾನವನ್ನೂ ಸೇರಿಸಲಾಗಿದೆ.
ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿಗೆ ಸಿಕ್ಕಿ ಹಾಕಿದ್ರೆ ಸಾವಿರ ರೂಪಾಯಿ ದಂಡ, ಮೂರು ತಿಂಗಳ ಕಾಲ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ರೆ 5 ಸಾವಿರ ರೂ ದಂಡದೊಂದಿಗೆ ಮೂರು ತಿಂಗಳ ಕಾಲ ಲೈಸೆನ್ಸ್ ರದ್ದು ಮಾಡಲಾಗುತ್ತದೆ.
ಇದನ್ನೂ ಓದಿ : BL Santhosh BJP : ಅನ್ಯ ಪಕ್ಷದ ಮುಖಂಡರಿಗೆ ನಿಷ್ಠೆ ಸಾಕು : ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ
ಎರಡನೇ ಬಾರಿಗೆ ಇದೇ ತಪ್ಪು ಮಾಡಿದ್ರೆ ಮತ್ತೆ ಮೂರು ತಿಂಗಳ ಕಾಲ ಲೈಸೆನ್ಸ್ ರದ್ದುಗೊಳಿಸಿ ಡಬ್ಬಲ್ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ ಹೊಸ ಟ್ರಾಫಿಕ್ ನಿಯಮದ ಪ್ರಕಾರ ನಿಯಮ ಉಲ್ಲಂಘಿಸಿದ ವ್ಯಕ್ತಿ ಹತ್ತಿರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕು ಅಥವಾ ರಕ್ತ ಬ್ಯಾಂಕ್ ನಲ್ಲಿ ರಕ್ತದಾನ ಮಾಡಬೇಕಾಗಿದೆ.
ಮಲ್ಪೆ ಕಡಲ ತೀರದ ಕಸದ ರಾಶಿಯಲ್ಲಿ ಬಂಗಾರದ ಬೇಟೆ
ಮಳೆಗಾಲ ಬಂದ್ರೆ ಕಡಲ ತೀರದ ರಾಶಿಯಲ್ಲಿ ಚಿನ್ನ ಹುಡುಕುವ ಕಾರ್ಯ ಪ್ರಾರಂಭವಾಗುತ್ತದೆ. ಇದೇನಪ್ಪ ಕಡಲ ತಡಿಯಲ್ಲಿ ಚಿನ್ನದ ಹುಡುಕುವ ಕಾರ್ಯ ಅಂತೀರಾ…
ಉಡುಪಿ : ಮಲ್ಪೆ ಬೀಚ್ ನಲ್ಲಿ ಇದೀಗ ಚಿನ್ನದ ಬೇಟೆ ಪ್ರಾರಂಭವಾಗಿದೆ. ಮಳೆಗಾಲ ಪ್ರಾರಂಭವಾದ್ರೆ ಕರಾವಳಿಯ ಬಹುತೇಕ ಕಡಲ ತೀರಗಳಲ್ಲಿ ಚಿನ್ನಕ್ಕಾಗಿ ಹುಡುಕಾಟ ಪ್ರಾರಂಭವಾಗುತ್ತದೆ. ಅದರಲ್ಲೂ ಕಸದ ರಾಶಿ ಬಂದು ಬೀಳುವ ಪ್ರದೇಶದಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಯುತ್ತದೆ.
ಇದೇನಿದು ಮಳೆಗಾಲ ಬಂದ್ರೆ ಕಡಲ ತೀರದಲ್ಲಿ ಚಿನ್ನಡ ಗಣಿ ಉಂಟಾಗುವುದು ಹೇಗೆ ಅನ್ನುವ ಅನುಮಾನ ನಿಮ್ಮನ್ನು ಕಾಡಬಹುದು. ಆದರೆ ವಿಷಯ ಅದಲ್ಲ. ಒಂದು ಅಂದಾಜಿನ ಪ್ರಕಾರ ಮಲ್ಪೆ ಕಡಲ ಕಿನಾರೆಗೆ ವರ್ಷಕ್ಕೆ 35 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ನೀರಲ್ಲಿ ಆಟವಾಡುವ ವೇಳೆ, ಈಜಾಡುವ ವೇಳೆ ಸಾವಿರಾರು ಮಂದಿ ತಮ್ಮ ಚಿನ್ನಾಭರಣ ಕಳೆದುಕೊಳ್ಳುತ್ತಾರೆ. ಮಾತ್ರವಲ್ಲದೆ ಕೆಲ ಧಾರ್ಮಿಕ ವಿಧಿ ವಿಧಾನ ಸಂದರ್ಭದಲ್ಲೂ ಸಮುದ್ರಕ್ಕೆ ಚಿನ್ನ ಬಿಡುವ ಕ್ರಮವಿದೆ.
ಹೀಗೆ ಕಡಲು ಸೇರಿದ ಚಿನ್ನ ಮಳೆಗಾಲದಲ್ಲಿ ದಡಕ್ಕೆ ಬಂದು ಬೀಳುತ್ತದೆ. ಭಾರೀ ಗಾತ್ರದ ಅಲೆಗಳು ಎದ್ದಾಗ ಕಸದ ಜೊತೆ ಚಿನ್ನವೂ ದಡ ಸೇರುತ್ತದೆ.ಕಡಲ ಆಳದಲ್ಲಿ ದೊಡ್ಡ ಅಲೆಗಳು ಸೃಷ್ಟಿಯಾದಾಗ ಕಸ ಸೇರಿದಂತೆ ಲೋಹದ ವಸ್ತುಗಳನ್ನು ದಡಕ್ಕೆ ಎಸೆದು ಹೋಗುತ್ತದೆ.
Discussion about this post