ಕೊರೋನಾ ಹಿನ್ನೆಲೆಯಲ್ಲಿ ಪ್ರಿಯಾಂಕಾ ( Priyanka Gandhi ) ಅವರ ರಾಜಸ್ಥಾನ ಅಲ್ವಾರ್ ಭೇಟಿ ರದ್ದಾಗಿದೆ
ನವದೆಹಲಿ : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ( Priyanka Gandhi ) ಅವರಿಗೆ ಮತ್ತೆ ಕೊರೋನಾ ಸೋಂಕು ದೃಢವಾಗಿದೆ. ಈ ಕುರಿತಂತೆ ಅವರೇ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು ಮತ್ತೆ ಕೋವಿಡ್ ಪಾಸಿಟಿವ್ ದೃಢವಾಗಿದೆ. ಹೋಂ ಐಸೋಲೇಷನ್ಗೆ ಒಳಗಾಗಿದ್ದು, ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ ಅಂದಿದ್ದಾರೆ.
ಜೊತೆಗೆ ನನ್ನ ಜತೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಮನವಿ ಮಾಡಿದ್ದಾರೆ
ಇದನ್ನು ಓದಿ : Bantwal : ನೀನು ಸಾಯಿ….. ನನಗೆ ಸಾಯಲು ಹೇಳ್ತಿಯಾ… ಪುರಸಭೆಯಲ್ಲಿ ಕಿತ್ತಾಟ
ಕಳೆದ ತಿಂಗಳು ಜೂನ್ 3 ರಂದು ಕೊರೋನಾ ಸೋಂಕಿಗೆ ತುತ್ತಾಗಿದ್ದ ಪ್ರಿಯಾಂಕ ಚೇತರಿಸಿಕೊಂಡು ತಾಯಿಯ ರಕ್ಷಣೆ ಧುಮುಕಿದ್ದರು. ಕಳೆದ ಎರಡು ತಿಂಗಳ ಅವಧಿಯಲ್ಲಿ ಪ್ರಿಯಾಂಕಾ ಅವರಿಗೆ ಎರಡು ಬಾರಿ ಕೊರೋನಾ ಪಾಸಿಟಿವ್ ಬಂದಿರುವುದು ಸೋಂಕಿನ ಬಗ್ಗೆ ಆತಂಕ ಹುಟ್ಟಿಸುವಂತೆ ಮಾಡಿದೆ.
ಈ ನಡುವೆ ಪ್ರಿಯಾಂಕ ಅವರು ಆಗಸ್ಟ್ 15 ರಂದು ಬೆಂಗಳೂರಿಗೆ ಬರುವ ಕಾರ್ಯಕ್ರಮ ನಿಗದಿಯಾಗಿದೆ. ಡಿಕೆ ಶಿವಕುಮಾರ್ ಅವರ ಸಾಮರ್ಥ್ಯ ಪ್ರದರ್ಶನಕ್ಕೆ ಪ್ರಿಯಾಂಕ ಅಂದು ಸಾಕ್ಷಿಯಾಗಲಿದ್ದಾರೆ. ಕೊರೋನಾ ಪಾಸಿಟಿವ್ ಕಾರಣದಿಂದ ಎಲ್ಲಿ ಬೆಂಗಳೂರು ಪ್ರವಾಸ ರದ್ದುಗೊಳ್ಳಲಿದೆಯೋ ಅನ್ನುವ ಆತಂಕವೂ ಕಾಡುತ್ತಿದೆ.
Discussion about this post