ರಾಜ್ಯ ವಿಧಾನಸಭೆಯಲ್ಲಿ ಬುಧವಾರ ದರ ಏರಿಕೆ ಕುರಿತಂತೆ ಗಂಭೀರ ಚರ್ಚೆ ನಡೆದಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಸುದೀರ್ಘ ಭಾಷಣನ್ನೇ ಮಾಡಿದ್ದಾರೆ. ಆದರೆ ಅದೊಂದು ಕಾಲಹರಣದ ಚರ್ಚೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಇಂಧನ, ಗ್ಯಾಸ್ ದರ ಏರಿಕೆ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರ, ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಹಾಗಿಲ್ಲ. ಅಂದ ಮೇಲೆ ಸದನದಲ್ಲಿ ಚರ್ಚೆ ಮಾಡಿ ಲಾಭವೇನಿದೆ. ಲೋಕಸಭಾ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ದನಿ ಏರಿಸುತ್ತಿದ್ರೆ ಜನರಿಗಾದರೂ ಅನುಕೂಲವಾಗುತ್ತಿತ್ತು.
ಈ ನಡುವೆ ದರ ಏರಿಕೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಆರ್ ವಿ ದೇಶಪಾಂಡೆ, ದರ ಏರಿಕೆಯಿಂದ ಜನ ಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ತೆರೆದಿಟ್ಟರು. ಇದೇ ವೇಳೆ ನಮ್ಮ ಮನೆಯಲ್ಲೂ ದರ ಏರಿಕೆ ಬಗ್ಗೆ ಚರ್ಚೆಯಾಗುತ್ತದೆ ಎಂದು ದೇಶಪಾಂಡೆ ಹೇಳಿದರು.

ಈ ವೇಳೆ ಎದ್ದು ನಿಂತ ಸಚಿವ ಮಾಧುಸ್ವಾಮಿ, ದೇಶಪಾಂಡೆ ಮನೆಯಲ್ಲಿ ದರ ಏರಿಕೆ ಬಗ್ಗೆ ಚರ್ಚೆಯಾಗುತ್ತದೆ ಅಂದ್ರೆ ನಂಬಲು ಸಾಧ್ಯವೇ. ನಿಜಕ್ಕೂ ನಿಮ್ಮ ಮನೆಯಲ್ಲೂ ಚರ್ಚೆಯಾಗುತ್ತಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಹೌದು ನಮ್ಮ ಮನೆಯಲ್ಲೂ ಚರ್ಚೆಯಾಗುತ್ತದೆ, ಯಾಕೆ ಚರ್ಚೆಯಾಗಬಾರದು ಅಂದರು. ಈ ನಡುವೆ ಎದ್ದು ನಿಂತ ಶಾಸಕ ಎಚ್.ಕೆ. ಪಾಟೀಲ್ ನಮ್ಮ ಮನೆಯಲ್ಲಿ ಕೃಷಿ ದರ, ಬೆಲೆ ಏರಿಕೆ ಇಳಿಕೆ, ಲಾಭ ನಷ್ಟ ಹೀಗೆ ಚರ್ಚೆಯಾಗುತ್ತದೆ ಅಂದರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ನಾನು ಎಚ್.ಕೆ. ಪಾಟೀಲ್ ಬಗ್ಗೆ ಹೇಳಿಲ್ಲ, ಕೇವಲ ದೇಶಪಾಂಡೆ ಬಗ್ಗೆ ಅಂದರು.
ಇದರಿಂದ ಇರಿಸು ಮುರಿಸಿಗೆ ಒಳಗಾದ ದೇಶಪಾಂಡೆ, ನಾನು ಮನೆಯಲ್ಲಿ ಹೋಮ್ ಮಿನಿಸ್ಟರ್ ಅಲ್ಲ, ದರ ಏರಿಕೆಯಿಂದ ನಮ್ಮ ಮನೆಗೂ ತೊಂದರೆಯೂ ಆಗಿಲ್ಲ. ಹಾಗಂತ ಚರ್ಚೆಯಾಗಬಾರದ ಅಂದರು. ಅದಕ್ಕೆ ಮಾಧುಸ್ವಾಮಿ ನಿಮ್ಮ ಮನೆಯಲ್ಲಿ ದರ ಏರಿಕೆ ಬಗ್ಗೆ ಯಾವಾಗ ಚರ್ಚೆಯಾಗುತ್ತದೆ, ದೇಶಪಾಂಡೆ ಮನೆ ದರ ಏರಿಕೆ ಬಗ್ಗೆ ಚರ್ಚೆಯಾಗುವ ಮನೆಯೇ, ಅವರು ಸತ್ಯ ಹೇಳಬೇಕು, ಸೀದಾ ಹೇಳಬೇಕು ಎಂದು ಕಾಲೆಳೆದರು.
Discussion about this post