ಗಣೇಶೋತ್ಸವ ಜಾಗದಲ್ಲಿ ಮಹನೀಯರ ಫೋಟೋ ಇಡಲು ನಗರ ಸಭೆಯ ಅನುಮತಿ ಬೇಕು ಅನ್ನುವ ಹೇಳಿಕೆ ಆಕ್ರೋಶದ ಕಿಡಿ ಹೊತ್ತಿಸಿದೆ ( Pramod muthalik)
ಬೆಳಗಾವಿ : ಸಾರ್ವಜನಿಕ ಗಣೇಶೋತ್ಸವ ಜಾಗದಲ್ಲಿ ಸಾವರ್ಕರ್ ಸೇರಿದಂತೆ ಮಹನೀಯರ ಫೋಟೋ ಇಡಲು ಸ್ಥಳೀಯ ಆಡಳಿತ ಸಂಸ್ಥೆಗಳ ಅನುಮತಿ ಪಡೆಯಬೇಕು ಅನ್ನುವ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ಬಗ್ಗೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ( Pramod muthalik) ಕಿಡಿ ಕಾರಿದ್ದಾರೆ.
ಈ ಬಗ್ಗೆ ತೀವ್ರ ಆಕೋಶ ಹೊರ ಹಾಕಿರುವ ಮುತಾಲಿಕ್, ಎಡಿಜಿಪಿಯವರೇ ಯಾವ ದೇಶದಲ್ಲಿದ್ದೇವೆ ನಾವು, ಸ್ವಾತಂತ್ರ್ಯ ಸಿಗಲು ತಿಲಕರು ಸಾವರ್ಕರ್ ಕಾರಣ ಎಂದು ನಿಮಗೆ ಗೊತ್ತಿಲ್ವ, ಈ ರೀತಿಯ ನಿಮ್ಮ ಹೇಳಿಕೆಯಿಂದ ದೊಡ್ಡ ಪರಿಣಾಮವಾಗುತ್ತದೆ. ದೇಶ ಭಕ್ತರಿಗೆ ಅವಮಾನ ಮಾಡುತ್ತಿದ್ದೀರಿ ನೀವು.
Read More : Fake journalists : ಅಕ್ಕಿ ವ್ಯಾಪಾರಿಯಿಂದ 5 ಲಕ್ಷ ಪೀಕಿಸಲು ಹೋದ 6 ಮಂದಿ ನಕಲಿ ಪತ್ರಕರ್ತರು ಅಂದರ್
ಹೀಗಾಗಿ ನೀವು ಕ್ಷಮೆ ಕೇಳಬೇಕು, ನಿಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಎಂದು ಪ್ರಮೋದ್ ಮುತಾಲಿಕ್ ಅಲೋಕ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
Discussion about this post