ತಮಿಳುನಾಡು : ದೆವ್ವಕ್ಕೆ ಬೆದರಿದ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಕಡಲೂರು ಸಶಸ್ತ್ರ ಪೊಲೀಸ್ನಲ್ಲಿ ಮೊದಲ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ ಪ್ರಭಾಕರನ್ (33) ಎಂದು ಗುರುತಿಸಲಾಗಿದೆ. ಪ್ರಭಾಕರನ್ ವಿಷ್ಣು ಪ್ರಿಯಾ ಎಂಬವರನ್ನು ಮದುವೆಯಾಗಿದ್ದು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಹೊಂದಿದ್ದರು.
ಕಲ್ಲಕುರಿಚಿ ಜಿಲ್ಲೆಯ ಪೆರುಂಬಕ್ಕಂನ ನಿವಾಸಿಯಾಗಿರುವ ಪ್ರಭಾಕರನ್ , ಕಡಲೂರಿನ ಸಶಸ್ತ್ರ ಪೊಲೀಸ್ ಠಾಣೆಯ ಕ್ವಾರ್ಟರ್ಸ್ ನಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಇತ್ತೀಚೆಗೆ ಆನಾರೋಗ್ಯಕ್ಕೆ ತುತ್ತಾಗಿದ್ದ ಅವರು ದೆವ್ವದ ಭಯಕ್ಕೆ ತುತ್ತಾಗಿದ್ದರಂತೆ. ಈ ಬಗ್ಗೆ ಅವರ ಸಹೋದ್ಯೋಗಿಗಳೇ ಮಾಹಿತಿ ನೀಡಿದ್ದು, ತಮ್ಮ ಕನಸಿನಲ್ಲಿ ಬೆಂಕಿಯಲ್ಲಿ ಸುಟ್ಟ ಮಹಿಳೆಯೊಬ್ಬರು ಬರುತ್ತಿದ್ದಾರೆ. ಅವರು ನನ್ನ ಕತ್ತು ಹಿಸುಕೋದಕ್ಕೆ ಪ್ರಯತ್ನಿಸುತ್ತಾರೆ. ನನ್ನನ್ನು ಸಾಯಿಸಲು ಯತ್ನಿಸುತ್ತಿದ್ದಾರೆ ಎಂದು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರಂತೆ. ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪ್ರಬಾಕರನ್ ಹೇಳಿಕೊಂಡಿದ್ದರು. ಪ್ರಭಾಕರನ್ ಕೂಡ ಭವಿಷ್ಯ ಹೇಳುವವರನ್ನು ಸಂಪರ್ಕಿಸಿ ಅವರ ಸಹಾಯ ಕೇಳಿದ್ದಾರೆ ಎನ್ನಲಾಗಿದೆ.
ಗಮನಾರ್ಹ ಅಂಶ ಅಂದ್ರೆ ಕೆಲ ತಿಂಗಳ ಹಿಂದೆ ಇದೇ ಕ್ವಾರ್ಟರ್ಸ್ನಲ್ಲಿ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಮಹಿಳೆಯ ದೆವ್ವ ನನಗೆ ಕಾಟ ಕೊಡುತ್ತಿದೆ ಅನ್ನುವುದು ಅವರ ನಂಬಿಕೆಯಾಗಿತ್ತು.
ಈ ನಡುವೆ ಅನಾರೋಗ್ಯದ ಹಿನ್ನಲೆಯಲ್ಲಿ ರಜೆ ಪಡೆದಿದ್ದ ಪ್ರಭಾಕರನ್ ಹೆಂಡತಿ ಮತ್ತು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಸಮಾರಂಭ ಮುಗಿಸಿ ಪತ್ನಿ ಮನೆಗೆ ಹಿಂತಿರುಗಿದಾಗ ಪ್ರಭಾಕರನ್ ಸೀಲಿಂಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Discussion about this post