ಇತ್ತೀಚಿನ ದಿನಗಳಲ್ಲಿ ಕೆಲ ಪೊಲೀಸರ ವರ್ತನೆ ಆತಂಕಕಾರಿಯಾಗಿ ಪರಿಣಮಿಸಿದೆ. ಲಂಚ ಲಂಚ ಲಂಚ ಅನ್ನುವ ಜಪದಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ ( Police station)
ಮುಂಬೈ : ಪೊಲೀಸ್ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ಮಾಡುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠ ಹೇಳಿದೆ. ಸರ್ಕಾರಿ ಗೌಪ್ಯ ಕಾಯ್ದೆಯಡಿಯಲ್ಲಿ ಪೊಲೀಸ್ ಠಾಣೆಯನ್ನು ನಿಷೇಧಿತ ಸ್ಥಳ ಎಂದು ಗುರುತಿಸಿಲ್ಲ. ಹೀಗಾಗಿ ಪೊಲೀಸ್ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ಅಪರಾಧವಲ್ಲ ಎಂದು ಹೇಳಲಾಗಿದೆ. ( Police station)
2018ರಲ್ಲಿ ರವೀಂದ್ರ ಉಪಾಧ್ಯಯ ಅನ್ನುವವರು ಒಎಸ್ಎ ಕಾಯ್ದೆ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾರ್ಧಾ ಪೊಲೀಸ್ ಠಾಣೆಯೊಳಗೆ ವಿಡಿಯೋ ಚಿತ್ರೀಕರಣ ಮಾಡಿದ ಆರೋಪ ಅವರ ಮೇಲಿತ್ತು. ( Police station)
Read More : Kantara tulu : ಕಾಂತಾರ ತುಳು ವರ್ಸನ್ ಬಿಡುಗಡೆಗೆ ದಿನಾಂಕ ಫಿಕ್ಸ್ ….
ನೆರೆಹೊರೆಯವರೊಂದಿಗಿನ ಜಗಳಕ್ಕೆ ಸಂಬಂಧಿಸಿದಂತೆ ಉಪಾಧ್ಯಾಯ ಅವರು ತನ್ನ ಪತ್ನಿಯೊಂದಿಗೆ ವಾರ್ಧಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ವೇಳೆ ಅವರ ವಿರುದ್ಧ ಪ್ರತಿ ದೂರು ಕೂಡಾ ದಾಖಲಾಗಿತ್ತು. ಈ ವೇಳೆ ಉಪಾಧ್ಯಾಯ ಅವರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ OSI ಕಾಯ್ದೆಯಡಿ FIR ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣ ನ್ಯಾಯಮೂರ್ತಿಗಳಾದ ಮನಿಷ್ ಪಿತಾಳೆ ಮತ್ತು ವಾಲ್ಮೀಕಿ ಮೆನೇಜಸ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಇದೀಗ ನ್ಯಾಯಾಲಯ ಉಪಾಧ್ಯಯ ಪರ ತೀರ್ಪು ನೀಡಿದೆ.
Discussion about this post