ವಿಕೇಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ನಾರಾಯಣಮೂರ್ತಿಯವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖ ಅನ್ನಿಸಿದ್ದು ಅವರು ಕಮ್ಯೂನಿಸ್ಟ್ ವಿರೋಧಿ ಯಾಕಾದ್ರು ಅನ್ನುವ ಕಥೆ.
ಹಲವು ವರ್ಷಗಳ ಹಿಂದಿನ ಮಾತು, ಪ್ರತಿಭೆಯಿಂದ ತುಂಬಿ ತುಳುಕುತ್ತಿದ್ದ ನಾರಾಯಣ ಮೂರ್ತಿಯವರಿಗೆ ಅದೃಷ್ಟ ಕೈ ಹಿಡಿದರಲಿಲ್ಲ. ಹೀಗಾಗಿ ಸಂಕಷ್ಟ ಮೇಲೆ ಸಂಕಷ್ಟವಿತ್ತು.
ಕೆಲಸದ ಸಲುವಾಗಿ ಪ್ಯಾರಿಸ್ ಗೆ ಹೋಗಿದ್ದ ಅವರು ರೈಲ್ವೆ ನಿಲ್ದಾಣದಲ್ಲಿ ಮಲಗುತ್ತಿದ್ದರು. ನಿಶ್ ಅನ್ನುವ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಮಲಗುತ್ತಿದ್ದ ಅವರು ಸೋಫಿಯಾ ಕಡೆಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದರು. ಅವತ್ತು ಶನಿವಾರವಾಗಿದ್ದ ಕಾರಣ ಭಾನುವಾರ ಸಂಜೆಯಷ್ಟು ಹೊತ್ತಿಗೆ ಸೋಫಿಯಾ ರೈಲು ಹತ್ತಲು ನಿರ್ಧರಿಸಿದ್ದರು.
Discussion about this post