ಕೇಂದ್ರ ಸರ್ಕಾರದ ಪಿಎಂ ಕಿಸಾನ್ನ 15ನೇ ಕಂತಿನ (PM Kisan 15th installment) ಹಣಕ್ಕಾಗಿ ಕಾಯುತ್ತಿದ್ದಾರೆ
ರಾಜ್ಯ ಸರ್ಕಾರ ಘೋಷಿಸಿದ್ದ ಗೃಹಲಕ್ಷ್ಮಿ ಯೋಜನೆಗೆ ಕೇಂದ್ರದ ಪಿಎಂ ಕಿಸಾನ್ ಯೋಜನೆ ಅದರ್ಶವಾಗಬೇಕಾಗಿತ್ತು. ಅರ್ಜಿ ಹಾಕಿದ ಎಲ್ಲರಿಗೂ ಸಕಾಲದಲ್ಲಿ ಪಿಎಂ ಕಿಸಾನ್ ಯೋಜನೆಯ ಹಣ ಪಾವತಿಯಾಗುತ್ತಿದೆ. ಆದರೆ ಮಹಿಳಾ ಸಬಲೀಕರಣ ಹೆಸರಿನಲ್ಲಿ ಪ್ರಾರಂಭಗೊಂಡ ಗೃಹಲಕ್ಷ್ಮಿ ಯೋಜನೆ ಇದೀಗ ಸಂಪೂರ್ಣ ಹಳ್ಳ ಹಿಡಿದಿದೆ. ಅರ್ಜಿ ಹಾಕಿದ ಬಹುತೇಕ ಮಂದಿಗೆ ಹಣವೇ ಬಂದಿಲ್ಲ. ಎರಡನೇ ಕಂತು ಪಾವತಿಸುವ ಸಮಯ ಕಳೆದು ಹೋದರೂ ಕಾಸು ಮಾತ್ರ ಬಂದಿಲ್ಲ.
ಇದನ್ನೂ ಓದಿ : 2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ನಡೆದಿದ್ದು ಹೇಗೆ ಗೊತ್ತಾ..
ಈ ನಡುವೆ ಪಿ.ಎಂ ಕಿಸಾನ್ನ 15ನೇ (PM Kisan 15th installment) ಕಂತಿನ ಹಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರವು (PM Kisan 15th installment) ಪಿ.ಎಂ ಕಿಸಾನ್ ಯೋಜನೆಯ ಅಡಿಯಲ್ಲಿ 14 ಕಂತುಗಳನ್ನು ರೈತರಿಗೆ ವರ್ಗಾಯಿಸಿದ್ದು , ಶೀಘ್ರದಲ್ಲೇ ಪಿಎಂ ಕಿಸಾನ್ನ 15ನೇ ಕಂತಿನ ಹಣ ರೈತರ ಖಾತೆಗೆ ಕ್ರೆಡಿಟ್ ಆಗಲಿದೆ.

ಈ ನಡುವೆ ಪಿ.ಎಂ. ಕಿಸಾನ್ (PM Kisan 15th installment) 15ನೇ ಕಂತಿನ ಹಣ ಸಿಗಬೇಕಾದರೆ ರೈತರು e KYC ಮಾಡಿಸಿಕೊಳ್ಳಲು ಸೂಚಿಸಲಾಗಿದೆ. PM-KISAN ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವಿಗಾಗಿ ರೈತರು e-KYC ಮಾಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.

ರೈತರೇ ಕೇಂದ್ರ ಸರ್ಕಾರದ PM-KISAN Portal ನ Farmers Corner ನಲ್ಲಿ OTP ಆಧಾರಿತ e-KYC ಮಾಡಬಹುದಾಗಿರುತ್ತದೆ. ಅಸಾಧ್ಯವಾದಲ್ಲಿ ನಾಗರೀಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ Biometric ಆಧಾರಿತ e-KYC ಯನ್ನು ಮಾಡಿಸಬಹುದಾಗಿರುತ್ತದೆ.
ಜೊತೆಗೆ ಕಿಸಾನ್ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗಿಲ್ಲ ಅಂದ್ರೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದೆಯೇ ಅನ್ನುವುದನ್ನು ಪರಿಶೀಲನೆ ನಡೆಸಿ, ಇದಕ್ಕಾಗಿ ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದು ಜೊತೆಗೆ ಇದಕ್ಕಾಗಿ (FACE AUTHENTICATION APP) e-KYC ಮಾಡಿಸಬಹುದಾಗಿರುತ್ತದೆ.
ಈ ಬಗ್ಗೆ ಇನ್ನೂ ಸಂಶಯಗಳಿದ್ದರೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Discussion about this post