ನವದೆಹಲಿ : ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಇಂಧನ ದರ ಏರಿಕೆಯಾಗಲಾರಂಭಿಸಿದೆ. ಕಳೆದ ಏಳು ದಿನಗಳಲ್ಲಿ 6ನೇ ಬಾರಿಗೆ ದೇಶಾದ್ಯಂತ ಇಂಧನ ದರ ಏರಿಕೆಯಾಗಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 30 ಪೈಸೆ ಏರಿಕೆಯಾಗಿದ್ದು, ಲೀಟರ್ 99.41 ರೂಪಾಯಿ ಪಾವತಿಸಬೇಕಾಗಿದೆ. ಡಿಸೇಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಗೆ 90.77 ರೂಪಾಯಿ ಪಾವತಿಸಬೇಕಾಗಿದೆ.
ಮಾರ್ಚ್ 22 ರಿಂದ ಈ ದರ ಏರಿಕೆ ಪ್ರಾರಂಭವಾಗಿದ್ದು, ಕಳೆದ 7 ದಿನದ ಅವಧಿಯಲ್ಲಿ 6 ಬಾರಿ ದರ ಏರಿಕೆಯಾಗಿದೆ.
ಮೊದಲ ನಾಲ್ಕು ಸಂದರ್ಭಗಳಲ್ಲಿ ಲೀಟರ್ 80 ಪೈಸೆ ಏರಿಕೆಯಾದರೆ, ಭಾನುವಾರ ಪೆಟ್ರೋಲ್ ಗೆ 50 ಪೈಸೆ ಹಾಗೂ ಡಿಸೇಲ್ ಗೆ 55 ಪೈಸೆ ಏರಿಕೆ ಮಾಡಲಾಗಿತ್ತು. ಒಟ್ಟಾರೆ ಕಳೆದ 1 ವಾರದಲ್ಲಿ ಪೆಟ್ರೋಲ್ ಗೆ 4 ರೂಪಾಯಿ ಹಾಗೂ ಡಿಸೇಲ್ ಗೆ 4.10 ರೂಪಾಯಿ ಏರಿಕೆಯಾಗಿದೆ. ಪರಿಸ್ಥಿತಿ ನೋಡಿದರೆ ಮುಂದಿನ ದಿನಗಳಲ್ಲಿ ಇಂಧನ ದರ ಮತ್ತಷ್ಟು ಏರಿಕೆಯಾಗಲಿದೆ. ಶೀಘ್ರದಲ್ಲಿ ಯಾವುದೇ ರಾಜ್ಯದಲ್ಲಿ ಚುನಾವಣೆಗಳು ಇಲ್ಲದಿರುವ ಕಾರಣ ದರ ಏರಿಕೆ ಖಚಿತ ಎನ್ನಲಾಗಿದೆ.
Discussion about this post