ಬೆಂಗಳೂರು : ತೈಲ ಕಂಪನಿಗಳು ಪೈಪೋಟಿಗೆ ಬಿದ್ದಂತೆ ಇಂಧನ ದರವನ್ನು ಏರಿಸುತ್ತಿದೆ. ನಿಯಂತ್ರಿಸಬೇಕಾದ ಸರ್ಕಾರ ಕಣ್ಣು ಕಿವಿ ಮುಚ್ಚಿ ಕೂತಿದೆ. ಅದ್ಯಾಕೆ ಇಂಧನ ಏರುತ್ತಿದೆ ಅನ್ನುವ ಸತ್ಯವನ್ನು ಹೇಳುವ ಗೋಜಿಗೆ ಕೇಂದ್ರ ಸರ್ಕಾರವೂ ಹೋಗುತ್ತಿಲ್ಲ. ಒಟ್ಟಿನಲ್ಲಿ ಪರಿಸ್ಥಿತಿ ನೋಡಿದರೆ ಬಿಜೆಪಿಯ ವಿರುದ್ಧ ದರ ಏರಿಕೆಯ ಅಲೆ ಶುರುವಾಗಿದೆ.
ಮತ್ತೊಂದು ಕಡೆ ಭಾನುವಾರ ಮತ್ತೆ ತೈಲ ಬೆಲೆ ಏರಿಕೆಯಾಗಿದ್ದು, ಅದು ಎಷ್ಟರ ಮಟ್ಟಿಗೆ ದುಬಾರಿಯಾಗಿದೆ ಅಂದ್ರೆ ವಿಮಾನಕ್ಕೆ ಬಳಸುವ ಇಂಧನಕ್ಕಿಂತಲೂ ಪೆಟ್ರೋಲ್ ದುಬಾರಿಯಾಗಿದೆ. ಎಟಿಎಫ್ ಎಂದು ಕರೆಯುವ ವಿಮಾನದ ಇಂಧನಕ್ಕೆ ಲೀಟರ್ ಗೆ 79 ರೂಪಾಯಿಯಾದ್ದು ಪೆಟ್ರೋಲ್ ದರ 110ರ ಗಡಿ ದಾಟಿದೆ. ಅಲ್ಲಿಗೆ ಬೈಕ್ ಓಡಿಸುವಾತ ವಿಮಾನದ ಇಂಧನಕ್ಕಿಂತ ಶೇ33 ರಷ್ಟು ಹೆಚ್ಚು ದರ ನೀಡಬೇಕಾಗಿ ಬಂದಿದೆ.
ಅಂದ ಹಾಗೇ ದೇಶದಲ್ಲಿ ಅತಿ ದುಬಾರಿ ಪೆಟ್ರೋಲ್ ದರ ರಾಜಸ್ಥಾನದ ಗಂಗಾನಗರದಲ್ಲಿ ದಾಖಲಾಗಿದ್ದು ಅಲ್ಲಿ 117.86 ಪೈಸೆ ಕೊಟ್ಟು ಲೀಟರ್ ಪೆಟ್ರೋಲ್ ಖರೀದಿಸಬೇಕಾಗಿದೆ.
Discussion about this post