ಒರಿಸ್ಸಾ : ನಬ್ರಂಗ್ ಪುರದ ಧನಿರಾಂ ಅನ್ನುವವರ ಮನೆಯಲ್ಲಿ ಅಪರೂಪದ ಕರು ಹುಟ್ಟಿದೆ. ಎರಡು ತಲೆ ಮೂರು ಕಣ್ಣುಗಳಿರುವ ಈ ಕರುವನ್ನು ನೋಡಿದ ಸ್ಥಳೀಯ ನಿವಾಸಿಗಳು ಹಾಗೂ ಧನಿರಾಂ ಅಚ್ಚರಿಗೆ ಒಳಗಾಗಿದ್ದಾರೆ. ಇನ್ನು ಈ ವಿಷಯ ಇದೀಗ ಊರು ಪೂರ್ತಿ ಹರಡಿದ್ದು, ವಿಶೇಷ ಕರುವನ್ನು ನೋಡಲು ತಂಡೋಪ ತಂಡವಾಗಿ ಜನ ಆಗಮಿಸುತ್ತಿದ್ದಾರೆ. ಕೆಲವರು ದೇವಿಯ ಸ್ವರೂಪ, ನವರಾತ್ರಿಯಂದು ಜನಿಸಿದೆ ಎಂದು ಪೂಜೆ ಮಾಡುತ್ತಿದ್ದಾರೆ.
ಇನ್ನು ಕರು ಆರೋಗ್ಯವಾಗಿದ್ದು, ಎರಡು ವರ್ಷಗಳ ಹಿಂದೆ ಧನಿರಾಂ ಹಸು ಖರೀದಿಸಿದ್ದರು. ಇತ್ತೀಚೆಗೆ ಈ ಹಸು ಗರ್ಭ ಧರಿಸಿತ್ತು. ಇನ್ನು ಎರಡು ತಲೆಗಳಿರುವ ಕಾರಣ ಕರು ಹಾಲು ಕುಡಿಯಲು ಪರದಾಡುತ್ತಿದ್ದು, ಮನೆ ಮಂದಿಯೇ ಹಾಲು ಕುಡಿಸುತ್ತಿದ್ದಾರೆ.
People in the locality of Bijapara village have begun worshipping a two headed calf as #Durga Avatar
— Suffian सूफ़ियान سفیان (@iamsuffian) October 12, 2021
After it was born with two heads and three eyes on the occasion of #Navratri to a farmer in Odisha's Nabrangpur District. #DurgaPuja @aajtak @IndiaToday pic.twitter.com/tz9i9mpJ0O
Discussion about this post