ಮೊಹಮ್ಮದ್ ಶಮಿಗೆ ಇಂಗ್ಲೀಷ್ ಬರೋದಿಲ್ಲ ಅನ್ನೋದೆ ಪಾಯಲ್ ಘೋಷ್ ( Payal Ghosh ) ಸಮಸ್ಯೆ
ಬಹುಭಾಷಾ ನಟಿ ಪಾಯಲ್ ಘೋಷ್ (Payal Ghosh) ಮಾಡಿರೋದು ಕೆಲವೇ ಕೆಲವು ಚಿತ್ರಗಳು. ಹಿಂದಿ, ಇಂಗ್ಲಿಷ್, ತೆಲುಗು ಹಾಗೂ ಕನ್ನಡದ ವಿವಿಧ ರೀತಿಯ ಸಿನಿಮಾಗಳಲ್ಲಿ ನಟಿಸಿರುವ ಈಕೆ ಸದ್ದು ಮಾಡಿದ್ದು ಮಾತ್ರ ಮೀ ಟೂ ಅಭಿಯಾನದ ಹೊತ್ತಿನಲ್ಲಿ
ಮೀ ಟೂ ಅಭಿಯಾನದ ಹೊತ್ತಿನಲ್ಲಿ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಅನೇಕ ನಟಿಯರು ಮಾತನಾಡಿದ್ದ ಹೊತ್ತಿನಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಗಂಭೀರ ಆರೋಪ ಮಾಡಿದ್ದ ಪಾಯಲ್ ಘೋಷ್. ಮದ್ಯದ ಅಮಲಿನಲ್ಲಿ ಅನುರಾಗ್ ಅನುಚಿತವಾಗಿ ವರ್ತಿಸಿದ್ದಾರೆ ಅನ್ನೋದು ಪಾಯಲ್ ಆರೋಪ.
ಇದನ್ನು ಓದಿ : ಖಾಸಗಿ ಬಸ್ ಮಾಲೀಕರಿಗೆ ಶರಣಾದ ಸಿದ್ದರಾಮಯ್ಯ ಸರ್ಕಾರ : Deepavali ಬರೆ
ಇದೇ ಪಾಯಲ್ ಘೋಷ್ (Payal Ghosh) ಇದೀಗ ಟೀಂ ಇಂಡಿಯಾದ ಬೌಲರ್ ಮೊಹಮ್ಮದ್ ಶಮಿ (Mohammed Shami) ಮೇಲೆ ಕಣ್ಣು ಹಾಕಿದ್ದು ‘ಶಮಿ ನೀವು ಇಂಗ್ಲಿಷ್ ಕಲಿತ್ರೆ ನಾನು ನಿಮ್ಮ ಮದುವೆಯಾಗೋದಿಕ್ಕೆ ಸಿದ್ಧ’ ಎಂದು ಪಾಯಲ್ ಘೋಷ್ ಘೋಷಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ‘ಶಮಿಯವರೇ ನೀವು ಸೆಮಿಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಲು ನನ್ನಿಂದ ಅದ್ಯಾವ ರೀತಿಯ ನೈತಿಕ ಬೆಂಬಲ ಸಿಗಬೇಕು. ನೀವು ಹೀರೋ ಆಗೋದನ್ನ ನಾನು ನೋಡಬೇಕು ಎಂದು ಪಾಯಲ್ ಹೇಳಿದ್ದಾರೆ. ಇದೀಗ ಈ ಪೋಸ್ಟ್ ಗಳು ವೈರಲ್ ಆಗಿದೆ.
#Shami Tum apna English sudharlo, I’m ready to marry you 🤣🤣
— Payal Ghoshॐ (@iampayalghosh) November 2, 2023
Discussion about this post