ಹೊಸ ಧಾರವಾಹಿಗಳ ಅಬ್ಬರದ ನಡುವೆ ಪಾರು ಅದ್ಯಾಕೋ ಕಳೆಗುಂದಿತು ಅನ್ನುವಷ್ಟರಲ್ಲಿ ಮತ್ತೆ ಮೈ ಕೊಡವಿ ಎದ್ದು ನಿಂತಿದೆ. ಹೌದು ಪಾರು ಧಾರವಾಹಿ ಬಗ್ಗೆ ಜನ ಬೇಸರ ಹೊರಹಾಕುವ ಹೊತ್ತಿಗೆ ಎಚ್ಚೆತ್ತುಕೊಂಡ ನಿರ್ದೇಶಕರು ಯಾಮಿನಿ ಅನ್ನುವ ಪಾತ್ರವನ್ನು ಪರಿಚಯಿಸಿದ್ದಾರೆ,
ಅಷ್ಟೇ ಯಾವಾಗ ಯಾಮಿನಿ ಎಂಟ್ರಿಯಾಯ್ತೋ, ಪಾರು ಧಾರವಾಹಿಗೆ ಶುಕ್ರದೆಸೆ ಪ್ರಾರಂಭವಾಗಿದೆ. ಕುಸಿಯಲಾರಂಭಿಸಿದ್ದ ರೇಟಿಂಗ್ ಇದೀಗ ಗಗನಮುಖಿಯಾಗಿದೆ. ಇನ್ನೊಂದಿಷ್ಟು ದಿನ ಕಳೆದರೆ ಟಾಪ್ 5 ನಿಂದ ಮೇಲಕ್ಕೆ ಏರಿದರೂ ಅಚ್ಚರಿಪಡಬೇಕಾಗಿಲ್ಲ. ಅದಕ್ಕೆ ಕಾರಣವೂ ಇದೆ.
ಆದಿ ಮತ್ತು ಪಾರುವನ್ನು ಒಂದು ಮಾಡಲು ಬಂದ ಯಾಮಿನಿಯದ್ದು ಪಾಸಿಟಿವ್ ಕ್ಯಾರೆಕ್ಟರ್ ಅಂದುಕೊಳ್ಳಲಾಗಿತ್ತು. ಆದರೆ ಈಗ ನೋಡಿದ್ರೆ ಯಾಮಿನಿಯ ಅಸಲಿ ಕಥೆಯೇ ಬೇರೆ.
ಹಾಗಾದ್ರೆ ಯಾಮಿನಿ ಪಾತ್ರಕ್ಕೆ ಎಂಟ್ರಿ ಕೊಟ್ಟಿರುವ ಸುಂದರಿ ಯಾರು ಅನ್ನೋದನ್ನ ನಾವು ಹೇಳ್ತಿವಿ. ಅವರೇ ಸುಶ್ಮಿತಾ ರಾಮಕಲಾ.
Discussion about this post