ಒಡಿಶಾ : ಅತಿಯಾದ ಸದ್ದು ಮಾನವ ಸಂಕುಲಕ್ಕೆ ಮಾತ್ರ ಪ್ರಾಣಿ ಪಕ್ಷಿ ಸಂಕುಲಕ್ಕೆ ತೊಂದರೆ ಉಂಟು ಮಾಡುತ್ತದೆ. ಹೀಗಾಗಿಯೇ ಧ್ವನಿ ವರ್ಧಕ ಬಳಸುವಾಗ ಎಚ್ಚರವಿರಲಿ ಎಂದು ಪದೇ ಪದೇ ಹೇಳಲಾಗುತ್ತಿದೆ. ನ್ಯಾಯಾಲಯಗಳು ಕೂಡಾ ತಜ್ಞರ ಶಿಫಾರಸಿನ ಪ್ರಕಾರ ಇಷ್ಟೇ ಡೆಸಿಬಲ್ ಶಬ್ಧ ಬರುವಂತೆ ನೋಡಿಕೊಳ್ಳಬೇಕು, ಧಾರ್ಮಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ಮೈಕ್ ಹಾಕೋ ಹಾಗಿಲ್ಲ ಅನ್ನುವ ಆದೇಶಗಳನ್ನು ಕೊಟ್ಟಿದೆ. ಅದರೇನು ಮಾಡುವುದು ನಮ್ಮಲ್ಲಿ ಕಾನೂನುಗಳಿರುವುದು ಪಾಲಿಸುವುದಕ್ಕಲ್ಲ ಮುರಿಯುವುದಕ್ಕೆ.
ಇನ್ನು ಮದುವೆಯ ಸಲುವಾಗಿ ನಡೆಯುವ ಮೆಹಂದಿ, ಸಂಗೀತ್ ಕಾರ್ಯಕ್ರಮಗಳಲ್ಲಿ ಮೈಕಾಸುರನ ಹಾವಳಿ ಹೇಳುವುದೇ ಬೇಡ. ಡ್ಯಾನ್ಸ್ ನೆಪದಲ್ಲಿ ಡಿಜೆ ಸೌಂಡ್ ಹೃದಯ ಒಡೆಯುವಂತಿರುತ್ತದೆ. ಈ ಶಬ್ಧದಿಂದ ಅಕ್ಕ ಪಕ್ಕದ ಮನೆಯವರಿಗೆ ತೊಂದರೆಯಾಗುತ್ತದೆ, ಪ್ರಾಣಿ ಪಕ್ಷಿಗಳ ನಿದ್ದೆಗೆಡಿಸುತ್ತದೆ ಅನ್ನುವ ಕನಿಷ್ಟ ಜ್ಞಾನ ನಮಗಿರುವುದಿಲ್ಲ.
ಹೀಗೆ DJ ಸೌಂಡ್ ಅಬ್ಬರ ತಾಳಲಾರದೆ ಕೋಳಿಗಳು ಪ್ರಾಣ ಬಿಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಈ ಸಂಬಂಧ ಬಾಲಸೋರ್ ನ ಕಂದಗರಾಡಿ ಗ್ರಾಮದ ರಂಜಿತ್ ಪರಿಡಾ ಅನ್ನುವವರು ಸ್ಥಳೀಯ ನೀಲಗಿರಿ ಪೊಲೀಸ್ ಠಾಣೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಿಜೆ ಶಬ್ದದಿಂದ ನನ್ನ ಫಾರಂನಲ್ಲಿದ್ದ 63 ಬ್ರಾಯ್ಲರ್ ಕೋಳಿಗಳು ಮೃತಪಟ್ಟಿವೆ ಎಂದು ಮಾಲೀಕ ದೂರು ನೀಡಿದ್ದಾರೆ.
ಮದುವೆ ಮೆರವಣಿಗೆಯಲ್ಲಿ ಹಾಕಿದಂತಹ ಡಿಜೆ ಶಬ್ದವನ್ನು ಸಹಿಸಲಾಗದೆ ಕೋಳಿಗಳಿಗೆ ಹೃದಯಾಘಾತವಾಗಿದೆ. ಶಬ್ಧ ಕಡಿಮೆ ಮಾಡುವಂತೆ ನಾನು ಮದುವೆ ಮನೆಯವರ ಬಳಿ ಮನವಿ ಮಾಡಿಕೊಂಡೆ. ಆದರೆ ಅವರು ನನ್ನ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೇಳುವುದಕ್ಕೆ ಸಿಲ್ಲಿ ಪ್ರಕರಣ ಅನ್ನಿಸಬಹುದು. ಆದರೆ 63 ಕೋಳಿ ಕಳೆದುಕೊಂಡ ರೈತನಿಗಾದ ನಷ್ಟವನ್ನು ಭರಿಸುವವರು ಯಾರು. ಮಾತ್ರವಲ್ಲದೆ ಕೋಳಿಗಳ ಸ್ಥಿತಿ ಹೀಗಾದ್ರೆ ಮದುವೆ ಮನೆಯ ಸುತ್ತ ಮುತ್ತಲಿರುವ ಪ್ರಾಣಿ ಪಕ್ಷಿಗಳ ಕಥೆ ಏನಾಗಿರಬೇಕು.
Farm owner in Odisha files complaint after chickens ‘die of shock from loud music Ranjit Parida, in the FIR at Nilagiri police station, also said that the groom’s family refused to turn down the volume of the music, despite being requested to do so
Discussion about this post