ನಿಮ್ಮ ಧ್ವನಿ ಹಾಗೂ ಮುಖವನ್ನು ಮಾರಿ ಕೋಟ್ಯಧಿಪತಿಗಳಾಗಿ, ಇಂತಹುದೊಂದು ಆಫರ್ ಅನ್ನು ಇದೀಗ ರಷ್ಯಾದ ಪ್ರೊಮೊ ಬಾಟ್ ಎಂಬ ಕಂಪನಿ ಕೊಟ್ಟಿದೆ. ರೊಬೋಟ್ ಗಳನ್ನು ತಯಾರಿಸುವ ಈ ಕಂಪನಿ ಹೀಗೆ ದನಿ ಮತ್ತು ಮುಖ ಮಾರಲು ಸಿದ್ದವಾಗುವ ವ್ಯಕ್ತಿಗಳಿಗೆ 1.50 ಕೋಟಿ ರೂಪಾಯಿ ನೀಡುವುದಾಗಿ ಹೇಳಿದೆ. ಒಂದು ಸಲ ನೀವು ಈ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡರೆ ಅನಿಮಿಯಿತ ಅವಧಿವರೆಗೆ ದನಿ ಹಾಗೂ ಮುಖವನ್ನು ಕಂಪನಿ ಬಳಸಿಕೊಳ್ಳುತ್ತದೆ.
ಪ್ರೊಮೊಬಾಟ್ ಕಂಪನಿ ಮನುಷ್ಯನನ್ನೇ ಹೋಲುವ ರೋಬೋಟ್ಗಳನ್ನು ಅಭಿವೃದ್ಧಿಪಡಿಸಿದ್ದು, ಹೋಟೆಲ್ಗಳು, ಶಾಪಿಂಗ್ ಮಾಲ್, ಥಿಯೇಟರ್ ಹೀಗೆ ವಾಣಿಜ್ಯ ವ್ಯವಹಾರ ಜಾಗಗಳಲ್ಲಿ ಇವುಗಳನ್ನು ನಿಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾನವನ ರೀತಿಯಲ್ಲಿ ಕಾಣೋ ರೋಬೋಟ್ಗಳು ಜನರನ್ನು ಆಕರ್ಷಿಸಲು ಸುಲಭವಂತೆ.
ಇನ್ನು 25 ವರ್ಷ ಮೇಲ್ಪಟ್ಟ ಯಾರೂ ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ಸಲ ಒಪ್ಪಂದ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ರೋಬೋಟ್ ನಿರ್ಮಾಣ ಸಲುವಾಗಿ ವ್ಯಕ್ತಿಯ ಮುಖ ಮತ್ತು ದೇಹದ 3D ಮಾದರಿಯನ್ನು ಪಡೆಯಲಾಗುತ್ತದೆ.ಜೊತೆಗೆ 100 ಗಂಟೆಗಳ ದನಿಯನ್ನು ಒದಗಿಸಬೇಕಾಗುತ್ತದೆ.
ಆದರೆ ಹೀಗೆ ದನಿ ಮತ್ತು ಮುಖವನ್ನು ಮಾರಾಟ ಮಾಡುವುದರಿಂದ ತಂತ್ರಜ್ಞಾನ ಯುಗದಲ್ಲಿ ಬರಬಹುದಾದ ಅಪಾಯದ ಬಗ್ಗೆ ಇನ್ನಷ್ಟೇ ಸಂಶೋಧನೆಗಳು ನಡೆಯಬೇಕಾಗಿದೆ.
ROBOT COMPANY WANTS TO GIVE YOU $200,000 FOR YOUR FACE AND VOICE
Discussion about this post